Politics

ಕೋಲಾರ ಕ್ಷೇತ್ರ; ಕೈ ನಾಯಕರ ಆಯ್ಕೆ 3ನೇ ಅಭ್ಯರ್ಥಿಯಾ..?; ಮುನಿಯಪ್ಪ ಹೇಳೋದೇನು..?

ಕೋಲಾರ; ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ ದೊಡ್ಡ ಕಗ್ಗಂಟಾಗಿದೆ.. ನಿನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ರಾಜೀನಾಮೆ ನೀಡಲು ಹೋಗಿದ್ದ ಐವರು ಶಾಸಕರ ಮನವೊಲಿಸಿದ್ದಾರೆ.. ಆದ್ರೆ ಆ ಸಭೆಯಲ್ಲಿ ಅದೇನು ನಡೆಯಿತೋ ಗೊತ್ತಿಲ್ಲ.. ಸಭೆಯ ನಂತರ ಸಚಿವ ಕೆ.ಹೆಚ್‌.ಮುನಿಯಪ್ಪ ಹೆಚ್ಚು ಅಲರ್ಟ್‌ ಆಗಿದ್ದಾರೆ.. ತಮ್ಮ ಅಳಿಯನಿಗೇ ಟಿಕೆಟ್‌ ಕೊಡುವಂತೆ ಪಟ್ಟು ಹಿಡಿದಿದ್ದಾರೆ..

ಇದನ್ನೂ ಓದಿ; ಕಾಂಗ್ರೆಸ್‌ ಪಕ್ಷ 1700 ಕೋಟಿ ತೆರಿಗೆ ಕಟ್ಟಿಲ್ಲವಂತೆ!; ನೋಟಿಸ್‌ ಜಾರಿ!

3ನೇ ಅಭ್ಯರ್ಥಿ ಬಗ್ಗೆ ಕೆ.ಹೆಚ್‌.ಮುನಿಯಪ್ಪ ಮಾತು;

ಸಚಿವ ಕೆ.ಹೆಚ್‌.ಮುನಿಯಪ್ಪ ಅವರು ತಮ್ಮ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್‌ ಕೇಳುತ್ತಿದ್ದಾರೆ.. ಕೋಲಾರ ಜಿಲ್ಲೆಯ ಕಾಂಗ್ರೆಸ್‌ ಶಾಸಕರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.. ಅಲ್ಲದೆ ರಾಜೀನಾಮೆ ನೀಡುವ ಬೆದರಿಕೆನ್ನು ಕೂಡಾ ಹಾಕಿದ್ದರು.. ಆದ್ರೆ ಸಂಧಾನದ ನಂತರ ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ ಎಂದು ಹೇಳಿದ್ದಾರೆ.. ಇದಾದ ಮೇಲೆ ಕೆ.ಹೆಚ್‌.ಮುನಿಯಪ್ಪ ಅವರು ಎರಡೂ ಬಣದವರು ಹೇಳಿದವರು ಬಿಟ್ಟು ಮೂರನೇಯವರಿಗೆ ಟಿಕೆಟ್‌ ಕೊಟ್ಟುಬಿಡುತ್ತಾರೆ ಎಂಬ ಭೀತಿಯಲ್ಲಿದ್ದಾರೆ ಹಾಗೆ ಮಾಡಿದರೆ ಕೋಲಾರದಲ್ಲಿ ಕಾಂಗ್ರೆಸ್‌ ಗೆಲ್ಲೋದು ಕಷ್ಟ ಎಂದು ಹೇಳುವ ಮೂಲಕ ಲಾಬಿ ಮುಂದುವರೆಸಿದ್ದಾರೆ..

 

ಇದನ್ನೂ ಓದಿ; ಕೊನೆಗೂ ಟ್ರ್ಯಾಕ್‌ಗೆ ಬಂದ ಬಿಜೆಪಿ-ಜೆಡಿಎಸ್‌ ಮೈತ್ರಿ; ಬೃಹತ್‌ ಸಮಾವೇಶಕ್ಕೆ ಮೆಗಾ ಪ್ಲ್ಯಾನ್‌

ಮೂರನೇಯವರಿಗೆ ಟಿಕೆಟ್‌ ಕೊಟ್ಟರೆ ಏನಾಗುತ್ತೆ..?

ಕೆ.ಹೆಚ್‌.ಮುನಿಯಪ್ಪರ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್‌ ಕೊಟ್ಟರೆ ರಮೇಶ್‌ ಕುಮಾರ್‌ ಬಣ ಸಪೋರ್ಟ್‌ ಮಾಡೋದು ಡೌಟು, ಇನ್ನು ರಮೇಶ್‌ ಕುಮಾರ್‌ ಬಣ ಹೇಳಿದವರಿಗೆ ಟಿಕೆಟ್‌ ಕೊಟ್ಟರೆ ಮುನಿಯಪ್ಪ ಕಡೆಯವರು ಹಿಂದೆ ಸರಿಯುತ್ತಾರೆ.. ಆಗ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲೋದು ಕಷ್ಟವಾಗುತ್ತೆ.. ಹೀಗಾಗಿ ಇಬ್ಬರು ಹೇಳಿದವರಿಗೆ ಬಿಟ್ಟು ಮೂರನೆಯವರಿಗೆ ಟಿಕೆಟ್‌ ಕೊಡಲು ಕಾಂಗ್ರೆಸ್‌ ಹೈಕಮಾಂಡ್‌ ಚಿಂತನೆ ನಡೆಸುತ್ತಿದ್ದಂತೆ ಕಾಣುತ್ತಿದೆ.. ಹಾಗೇನಾದರೂ ಆದರೆ ಎರಡೂ ಬಣದವರೂ ಕೆಲಸ ಮಾಡೋದಿಲ್ಲ.. ಇದರಿಂದಾಗಿ ಕಾಂಗ್ರೆಸ್‌ ಅಭ್ಯರ್ಥಿ ಸೋತುಬಿಡುತ್ತಾರೆ.. ಅದರ ಬದಲು ನನ್ನ ಅಳಿಯನಿಗೆ ಟಿಕೆಟ್‌ ಕೊಡಿ ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಮುನಿಯಪ್ಪ ಹೇಳುತ್ತಿದ್ದಾರೆ..

ಇದನ್ನೂ ಓದಿ; ರೆಫ್ರಿಜರೇಟರ್‌ ಸ್ವಚ್ಛ ಮಾಡದೇ ಹೋದರೆ ಏನಾಗುತ್ತೆ..?; ಫ್ರಿಡ್ಜ್‌ ಕ್ಲೀನ್‌ ಮಾಡೋದು ಹೇಗೆ..?

ಸೋತಲ್ಲಿ ಗೆಲ್ಲಬೇಕು ಎನ್ನುತ್ತಿರುವ ಮುನಿಯಪ್ಪ;

ಕೆ.ಹೆಚ್‌.ಮುನಿಯಪ್ಪ ಅವರು ಏಳು ಬಾರಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಗೆದ್ದಿದ್ದಾರೆ.. ಎಂಟನೇ ಬಾರಿ ಅವರು ಸೋತಿದ್ದಾರೆ.. ಅದೂ ಕೂಡಾ ಕಾಂಗ್ರೆಸ್‌ನ ಒಂದು ಬಣ ಬಿಜೆಪಿ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದರಿಂದ ಮುನಿಯಪ್ಪ ಸೋತರು.. ಈಗ ಮುನಿಯಪ್ಪ ನಾನು ಸೋತ ಕ್ಷೇತ್ರದಲ್ಲಿ ಗೆದ್ದು ತೋರಿಸಬೇಕು.. ಅದಕ್ಕಾಗಿ ನನ್ನ ಅಳಿಯನಿಗೆ ಟಿಕೆಟ್‌ ಕೊಡಿ ಎಂದು ಹೇಳುತ್ತಿದ್ದಾರೆ.. ಕ್ಷೇತ್ರ ವ್ಯಾಪ್ತಿಯಲ್ಲಿರುವ ಎಲ್ಲಾ ಕಾಂಗ್ರೆಸ್‌ ಶಾಸಕರೂ ವಿರೋಧ ವ್ಯಕ್ತಪಡಿಸುತ್ತಿದ್ದರೂ ಕೆ.ಹೆಚ್‌.ಮುನಿಯಪ್ಪ ಗೆಲ್ಲೋ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.. ಕೂತು ಮಾತಾಡಿದರೆ ರಮೇಶ್‌ ಕುಮಾರ್‌ ಬೆಂಬಲ ಸೂಚಿಸುತ್ತಾರೆ ಎಂಬ ವಿಶ್ವಾಸ ಕೂಡಾ ಮುನಿಯಪ್ಪ ವ್ಯಕ್ತಪಡಿಸುತ್ತಿದ್ದಾರೆ..

 

ಇದನ್ನೂ ಓದಿ; ಚಿಕ್ಕಬಳ್ಳಾಪುರ ಲೋಕಸಭಾ; ಜನಕ್ಕೆ ʻರಕ್ಷಾʼ ಬೇಕು.. ನಾಯಕರಿಗೆ ʻಮೊಯ್ಲಿʼ ಬೇಕು..!

ಸಭೆಯಲ್ಲಿ 3 ಅಭ್ಯರ್ಥಿ ಹೆಸರು ಪ್ರಸ್ತಾಪವಾಯಿತಾ..?;

ಐವರು ಶಾಸಕರು ಮೊನ್ನೆ ರಾಜೀನಾಮೆಗೆ ಮುಂದಾಗಿದ್ದರು.. ಆದ್ರೆ ನಿನ್ನೆ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಸಂಧಾನ ಸಭೆ ನಡೆಯಿತು.. ಈ ಸಭೆಯಲ್ಲಿ ಯಾರಿಗೂ ಬೇಡ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇನೆ ಎಂದು ನಾಯಕರು ಹೇಳಿದರಾ ಎಂಬುದರ ಬಗ್ಗೆ ಅನುಮಾನ ಮೂಡುತ್ತಿದೆ.. ಯಾಕಂದ್ರೆ ರಮೇಶ್‌ ಕುಮಾರ್‌ ಬಣಕ್ಕೆ ಮುನಿಯಪ್ಪ ಅಳಿಯ ಅಭ್ಯರ್ಥಿಯಾಗಬಾರದು ಅಷ್ಟೇ.. ಯಾರಿಗೆ ಟಿಕೆಟ್‌ ಕೊಟ್ಟರೂ ಸಪೋರ್ಟ್‌ ಮಾಡೋದಕ್ಕೆ ಅವರು ರೆಡಿ ಇದ್ದಾರೆ.. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಮೂರನೇ ಅಭ್ಯರ್ಥಿ ಬಗ್ಗೆ ಚಿಂತನೆ ನಡೆಸಿರುವ ಸಾಧ್ಯತೆ ಇದೆ..

ಇದನ್ನೂ ಓದಿ; ಬೆವರು ದುರ್ವಾಸನೆಯಿಂದ ರೋಸಿಹೋಗಿದ್ದೀರಾ..?; ಹಾಗಾದ್ರೆ ಈ ಟಿಪ್ಸ್‌ ಫಾಲೋ ಮಾಡಿ..

 

Share Post