Politics

ಎಸ್‌.ಎಂ.ಕೃಷ್ಣ ಅಶೀರ್ವಾದ ಪಡೆದ ಡಿ.ಕೆ.ಸುರೇಶ್‌; ಡಿಕೆಶಿ ಗುರುವಿನ ಬೆಂಬಲ ಸಿಗುತ್ತಾ..?

ಬೆಂಗಳೂರು; ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಕ್ಷೇತ್ರಗಳಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಕೂಡಾ ಒಂದು… ಯಾಕಂದ್ರೆ ಇಲ್ಲಿ ಮೈತ್ರಿ ಅಭ್ಯರ್ಥಿಯಾಗಿ ದೇವೇಗೌಡರ ಅಳಿಯ ಡಾ.ಸಿ.ಎನ್‌.ಮಂಜುನಾಥ್‌ ಅವರು ಅಖಾಡದಲ್ಲಿದ್ದಾರೆ.. ಹೀಗಾಗಿ ಈ ಬಾರಿ ಡಿ.ಕೆ.ಸುರೇಶ್‌ಗೆ ಪ್ರಬಲ ಪೈಪೋಟಿ ಇರುತ್ತದೆ.. ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಹಾಗೂ ಬಿಜೆಪಿ, ಜೆಡಿಎಸ್‌ ಬೆಂಬಲ ಡಾ.ಸಿ.ಎನ್‌.ಮಂಜುನಾಥ್‌ ಅವರಿಗೆ ನೆರವಾಗಲಿದೆ.. ಈ ಕಾರಣಕ್ಕಾಗಿಯೇ ಈ ಬಾರಿ ಡಿಕೆ ಸಹೋದರರು ಈ ಚುನಾವಣೆಯನ್ನು ಸವಾಲಾಗಿ ತೆಗೆದುಕೊಂಡಿದ್ದಾರೆ.. ಎಲ್ಲಿಲ್ಲದ ಕಸರತ್ತು, ರಾಜಕೀಯ ತಂತ್ರಗಾರಿಕೆ ಶುರು ಮಾಡಿದ್ದಾರೆ..

ಇದನ್ನೂ ಓದಿ; ಕೋಲಾರ ಕ್ಷೇತ್ರ; ಕೈ ನಾಯಕರ ಆಯ್ಕೆ 3ನೇ ಅಭ್ಯರ್ಥಿಯಾ..?; ಮುನಿಯಪ್ಪ ಹೇಳೋದೇನು..?

ಮಾಜಿ ಸಿಎಂ ಎಸ್‌.ಎಂ.ಕೃಷ್ಣ ಆಶೀರ್ವಾದ ಪಡೆದ ಡಿ.ಕೆ.ಸುರೇಶ್‌;

ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ರಾಜಕೀಯ ಗುರುಗಳಲ್ಲಿ ಎಸ್‌.ಎಂ.ಕೃಷ್ಣ ಕೂಡಾ ಒಬ್ಬರು.. ಡಿ.ಕೆ.ಶಿವಕುಮಾರ್‌ ಈ ಮಟ್ಟಕ್ಕೆ ಬೆಳೆಯಬೇಕಾದರೆ ಅದರಲ್ಲಿ ಬಂಗಾರಪ್ಪ ಹಾಗೂ ಎಸ್‌.ಎಂ.ಕೃಷ್ಣ ಮೊದಲಿಗರಾಗಿ ನಿಲ್ಲುತ್ತಾರೆ.. ಹೀಗಾಗಿಯೇ ಡಿ.ಕೆ.ಶಿವಕುಮಾರ್‌ ಅವರು ಈಗಲೂ ಎಸ್‌.ಎಂ.ಕೃಷ್ಣ ಮಾತು ಮೀರೋದಿಲ್ಲ… ಅವರನ್ನು ಈಗಲೂ ಗುರುಗಳೆಂದೇ ಕರೆಯುತ್ತಾರೆ.. ಆದ್ರೆ ಕಾರಣಾಂತರಗಳಿಂದ ಎಸ್‌.ಎಂ.ಕೃಷ್ಣ ಅವರು ಬಿಜೆಪಿ ಸೇರಿದ್ದಾರೆ.. ಈಗ ಅವರು ಬಿಜೆಪಿಯಲ್ಲಿದ್ದರೂ, ರಾಜಕೀಯವಾಗಿ ಸಕ್ರಿಯವಾಗಿಲ್ಲ.. ಆದ್ರೂ ರಾಮನಗರ ಭಾಗದಲ್ಲಿ ಎಸ್‌.ಎಂ.ಕೃಷ್ಣ ಮಾತು ಕೇಳಿ ಮತ ಹಾಕುವ ಮಂದಿ ಸಾಕಷ್ಟಿದ್ದಾರೆ.. ಹೀಗಿರುವಾಗ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ.ಸುರೇಶ್‌ ಅವರು ಎಸ್‌.ಎಂ.ಕೃಷ್ಣ ಅವರನ್ನು ಭೇಟಿಯಾಗಿದ್ದಾರೆ.. ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡಿದ್ದಾರೆ.. ಇದನ್ನು ನೋಡುತ್ತಿದ್ದರೆ, ಎಸ್‌.ಎಂ.ಕೃಷ್ಣ ಅವರು ಇಂಡೈರೆಕ್ಟಾಗಿ ಡಿ.ಕೆ.ಸುರೇಶ್‌ಗೆ ಬೆಂಬಲ ಸೂಚಿಸುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದೆ..

ಇದನ್ನೂ ಓದಿ; ಕೊನೆಗೂ ಟ್ರ್ಯಾಕ್‌ಗೆ ಬಂದ ಬಿಜೆಪಿ-ಜೆಡಿಎಸ್‌ ಮೈತ್ರಿ; ಬೃಹತ್‌ ಸಮಾವೇಶಕ್ಕೆ ಮೆಗಾ ಪ್ಲ್ಯಾನ್‌

ಈಗ ಇಬ್ಬರೂ ಸಂಬಂಧಿಕರೂ ಹೌದು;

ಎಸ್‌.ಎಂ.ಕೃಷ್ಣ ಅವರ ಮಗಳ ಮಗನಿಗೆ ಅಂದರೆ ಕಾಆಫಿ ಡೇ ಸಿದ್ಧಾರ್ಥ್‌ ಮಗನಿಗೆ ಡಿ.ಕೆ.ಶಿವಕುಮಾರ್‌ ಅವರ ಮಗಳನ್ನು ಕೊಟ್ಟು ಮದುವೆ ಮಾಡಲಾಗಿದೆ.. ಈ ಹಿನ್ನೆಲೆಯಲ್ಲಿ ಈಗ ಇಬ್ಬರೂ ಸಂಬಂಧಿಕರಾಗಿದ್ದಾರೆ.. ಜೊತೆಗೆ ಡಿ.ಕೆ.ಶಿವಕುಮಾರ್‌ಗೆ ಎಸ್‌.ಎಂ.ಕೃಷ್ಣ ರಾಜಕೀಯ ಗುರು.. ಹೀಗಿದ್ದ ಮೇಲೆ ಈ ಭೇಟಿಗೆ ಮಹತ್ವ ಬರದೇ ಇರುತ್ತಾ..?. ಡಿ.ಕೆ.ಸುರೇಶ್‌ ಆಶೀರ್ವಾದ ಪಡೆಯುವ ನೆಪದಲ್ಲಿ ಬೆಂಬಲ ಕೋರಿರುತ್ತಾರೆ.. ಇದರಿಂದ ಡಿ.ಕೆ.ಸುರೇಶ್‌ಗೆ ಕೊಂಚ ಲಾಭವೂ ಆಗಬಹುದು..

ಇದನ್ನೂ ಓದಿ; ರೆಫ್ರಿಜರೇಟರ್‌ ಸ್ವಚ್ಛ ಮಾಡದೇ ಹೋದರೆ ಏನಾಗುತ್ತೆ..?; ಫ್ರಿಡ್ಜ್‌ ಕ್ಲೀನ್‌ ಮಾಡೋದು ಹೇಗೆ..?

ನಿನ್ನೆಯಷ್ಟೇ ರೋಡ್‌ ಶೋ ನಡೆಸಿದ್ದ ಡಿ.ಕೆ.ಸುರೇಶ್‌;

ನಿನ್ನೆಯಿಂದ ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದೆ.. ಮೊದಲ ದಿನವೇ ಡಿ.ಕೆ.ಸುರೇಶ್‌ ಅವರು ನಾಮಪತ್ರ ಸಲ್ಲಿಸಿದ್ದಾರೆ.. ಬೃಹತ್‌ ರೋಡ್‌ ಶೋ ಕೂಡಾ ನಡೆಸಿದ್ದಾರೆ.. ಇದಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಕೂಡಾ ಸಾಥ್‌ ಕೊಟ್ಟಿದ್ದರು.. ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ಡಿ.ಕೆ.ಸುರೇಶ್‌ ಅವರು ಇಂದು ಬೆಂಗಳೂರಿನ ಸದಾಶಿವನಗರದಲ್ಲಿರುವ ಎಸ್‌.ಎಂ.ಕೃಷ್ಣ ನಿವಾಸಕ್ಕೆ ಭೇಟಿ ನೀಡಿ ಅಶೀರ್ವಾದ ಪಡೆದಿದ್ದಾರೆ.. ಈ ಎಕ್ಸ್ ಪೋಸ್ಟ್ ಮಾಡಿದ ಡಿಕೆ ಸುರೇಶ್, ಇಂದು ಕರ್ನಾಟಕದ ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿಗಳಾದ ಎಸ್‌.ಎಂ.ಕೃಷ್ಣ ದಂಪತಿಗಳ ಆಶೀರ್ವಾದ ಪಡೆದೆ. ಈ ವೇಳೆ ಅವರ ಸುದೀರ್ಘವಾದ ರಾಜಕೀಯ ಅನುಭವ ಮತ್ತು ಹಂಚಿಕೊಂಡ ಸಲಹೆಗಳು ಮತ್ತಷ್ಟು ನನಗೆ ಸ್ಫೂರ್ತಿಯನ್ನು ನೀಡಿವೆ ಎಂದಿದ್ದಾರೆ.

ಇದನ್ನೂ ಓದಿ; ಮುಖ ಸುಕ್ಕುಗಟ್ಟದಂತೆ ಯಾವಾಗಲೂ ಯಂಗ್‌ ಆಗಿ ಕಾಣುಲು ಹೀಗೆ ಮಾಡಿ!

ಹಿಂದೆಂದಿಗಿಂತಲೂ ಹೆಚ್ಚಿನ ತಂತ್ರಗಾರಿಕೆ;

ಈ ಬಾರಿ ಚುನಾವಣೆ ಗೆಲ್ಲುವುದು ಡಿ.ಕೆ.ಸುರೇಶ್‌ ಒಂದು ಸವಾಲಾಗಿದೆ.. ಯಾಕಂದ್ರೆ ಈಗ ಅವರ ಸಹೋದರ ಡಿಸಿಎಂ ಆಗಿದ್ದಾರೆ.. ಇಂತಹ ಸಂದರ್ಭದಲ್ಲಿ ಸೋತರೆ ಅವಮಾನವಾಗುತ್ತದೆ.. ಆದ್ರೆ ಈ ಬಾರಿ ಪ್ರಬಲ ಅಭ್ಯರ್ಥಿ ಜೊತೆ ಸೆಣಸಬೇಕಿದೆ.. ಈ ಕಾರಣದಿಂದಾಗಿಯೇ ಎಚ್ಚರಿಕೆಯಿಂದ ಹೆಜ್ಜೆಗಳನ್ನಿಡುತ್ತಿದ್ದಾರೆ.. ಪಕ್ಷ ಬರುವವರ ಸೆಳೆಯುವ ಪ್ರಯತ್ನ ನಡೆಯುತ್ತಿದೆ.. ಜೊತೆಗೆ ಪ್ರತಿ ಮೂಲೆಗೂ ಒಬ್ಬೊಬ್ಬರನ್ನು ಇನ್‌ ಚಾರ್ಜ್‌ ನೇಮಿಸಿ ಮತದಾರರನ್ನು ಸೆಳೆಯೋ ಪ್ರಯತ್ನ ನಡೆಯುತ್ತಿದೆ..

ಇದನ್ನೂ ಓದಿ; ಕೋಲಾರ ವಿಚಾರ; ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡುವುದಿಲ್ಲ; ಡಿ.ಕೆ. ಶಿವಕುಮಾರ್

Share Post