ರೆಫ್ರಿಜರೇಟರ್ ಸ್ವಚ್ಛ ಮಾಡದೇ ಹೋದರೆ ಏನಾಗುತ್ತೆ..?; ಫ್ರಿಡ್ಜ್ ಕ್ಲೀನ್ ಮಾಡೋದು ಹೇಗೆ..?
ಈಗ ಎಲ್ಲರ ಮನೆಯಲ್ಲೂ ರೆಫ್ರಿಜರೇಟರ್ ಕಾಮನ್.. ಆಹಾರ ಪದಾರ್ಥಗಳನ್ನು ಕೆಡದಂತೆ ಇಡೋದಕ್ಕೆ ಇದನ್ನು ಬಳಸುತ್ತಾರೆ.. ಇದರಲ್ಲಿ ಆಹಾರ ಪದಾರ್ಥಗಳು, ತರಕಾರಿಗಳನ್ನು ಇಟ್ಟರೆ ವಾರದವರೆಗೂ ತಾಜಾ ಆಗಿರುತ್ತವೆ.. ನಾವು ರೆಫ್ರಿಜರೇಟರ್ ಏನೋ ಬಳಸುತ್ತೇವೆ.. ಆದ್ರೆ ಅದರ ನಿರ್ವಹಣೆಯೇ ಚೆನ್ನಾಗಿರೋದಿಲ್ಲ.. ರೆಫ್ರಿಜರೇಟರ್ ಅನ್ನು ಕಾಲಕಾಲಕ್ಕೆ ಸ್ವಚ್ಛ ಮಾಡೋದೇ ಇಲ್ಲ.. ರೆಫ್ರಿಜರೇಟರ್ ನೀಟಾಗಿ ಸ್ವಚ್ಛವಾಗಿದ್ದರೆ ಮಾತ್ರ ನಾವು ಅದರಲ್ಲಿ ಇಡುವ ಆಹಾರ ಕೂಡಾ ಉತ್ತಮವಾಗಿರುತ್ತದೆ.. ಹಾಗಾದ್ರೆ ಫ್ರಿಡ್ಜ್ ನ್ನು ಸ್ವಚ್ಛ ಮಾಡೋದು ಹೇಗೆ..? ಯಾವಾಗಲೂ ಫ್ರಿಡ್ಜ್ ಫಳಫಳ ಹೊಳೆಯಬೇಕು ಅಂದ್ರೆ ಏನು ಮಾಬೇಕು..? ಈ ಬಗ್ಗೆ ನೋಡೋಣ ಬನ್ನಿ…
ಇದನ್ನೂ ಓದಿ; ಚಿಕ್ಕಬಳ್ಳಾಪುರ ಲೋಕಸಭಾ; ಜನಕ್ಕೆ ʻರಕ್ಷಾʼ ಬೇಕು.. ನಾಯಕರಿಗೆ ʻಮೊಯ್ಲಿʼ ಬೇಕು..!
ಆಹಾರ ಇಟ್ಟು ಹಾಗೆಯೇ ಬಿಟ್ಟುಬಿಡಬೇಡಿ;
ರೆಫ್ರಿಜರೇಟರ್ ಹೆಚ್ಚಾಗಿ ಬಳಸೋದು ತರಕಾರಿಗಳನ್ನು ಇಡೋದಿಕ್ಕೆ.. ಇದರ ಜೊತೆಗೆ ಉಳಿದ ಆಹಾರವನ್ನು ಅದರಲ್ಲಿಟ್ಟು ಭದ್ರಪಡಿಸಲಾಗುತ್ತದೆ.. ಉಳಿದ ಆಹಾರದ ಬಿಸಾಡಲಾರದೆ ನಾಳೆ ತಿನ್ನೋಣ ಅಂತ ಫ್ರಿಡ್ಜ್ ನಲ್ಲಿರುತ್ತಾರೆ.. ಆದ್ರೆ ಅದನ್ನು ಬಳಸೋದೇ ಇಲ್ಲ.. ಹಾಗಂತ ಅದನ್ನು ತೆಗೆದು ಬಿಸಾಕೋದೂ ಇಲ್ಲ.. ತಿಂಗಳಾನುಗಟ್ಟಲೇ ಹಾಗೆಯೇ ಫ್ರಿಡ್ಜ್ ನಲ್ಲೇ ಇರುತ್ತದೆ.. ಅದು ಅಲ್ಲೇ ಕೊಳೆತು ನಾರುತ್ತಿರುತ್ತದೆ.. ಹೀಗೆ ಆಹಾರಗಳನ್ನು ಹೆಚ್ಚು ದಿನಗಳ ಕಾಲ ಫ್ರಿಡ್ಜ್ ನಲ್ಲಿ ಹಾಗೇಯೇ ಇಡುವುದರಿಂದ ಫ್ರಿಡ್ಜ್‌ನಲ್ಲಿ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಬೆಳೆಯುತ್ತವೆ… ಇದರಿಂದ ಫ್ರಿಡ್ಜ್‌ನಲ್ಲಿರುವ ಇತರ ಆಹಾರ ಪದಾರ್ಥಗಳೂ ಹಾನಿಯಾಗುತ್ತವೆ.. ಇಂತಹ ಫ್ರಿಡ್ಜ್‌ನಲ್ಲಿರುವ ಆಹಾರಗಳನ್ನು ನಾವು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯ ಖಂಡಿತವಾಗಿಯೂ ಕೆಡುತ್ತದೆ.. ಹೀಗಾಗಿ, ಫ್ರಿಡ್ಜ್ ಅನ್ನು ಎರಡು ಮೂರು ದಿನಕ್ಕೊಮ್ಮೆ ಪರೀಕ್ಷೆ ಮಾಡಿ, ಬಳಸದ ವಸ್ತುಗಳನ್ನು ಬಿಸಾಕಬೇಕು..
ಇದನ್ನೂ ಓದಿ; ಬೆವರು ದುರ್ವಾಸನೆಯಿಂದ ರೋಸಿಹೋಗಿದ್ದೀರಾ..?; ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ..
ಪವರ್ ಆಫ್ ಮಾಡಿ ಸ್ವಚ್ಛ ಮಾಡಿ;
ಕನಿಷ್ಟ ವಾರಕ್ಕೊಮ್ಮೆಯಾದರೂ ಪ್ರಿಡ್ಜ್ ಅನ್ನು ಸ್ವಚ್ಛ ಮಾಡಬೇಕು.. ಇಲ್ಲದಿದ್ದರೆ ಫ್ರಿಡ್ಜ್‌ನಲ್ಲಿ ಬ್ಯಾಕ್ಟೀರಿಯಾಗಳನ್ನು ಹುಟ್ಟಿಕೊಳ್ಳುತ್ತವೆ.. ಇದರಿಂದಾಗಿ ಫ್ರಿಡ್ಜ್ ಬಾಗಿಲು ತೆರೆಯುತ್ತಿದ್ದಂತೆ ದುರ್ವಾಸನೆ ನಮ್ಮ ಮೂಗಿಗೆ ರಾಚುತ್ತದೆ.. ಹೀಗಾಗಿ ವಾರಕ್ಕೊಮ್ಮೆಯಾದರೂ ಪ್ರಿಡ್ಜ್ ಕ್ಲೀನ್ ಮಾಡಬೇಕು.. ಹೆಚ್ಚು ದಿನದಿಂದ ಇರುವ ಆಹಾರ ಪದಾರ್ಥಗಳನ್ನು ಹೊರಗೆ ಎಸೆಯಬೇಕು.. ಜೊತೆಗೆ ಇರುವ ತರಕಾರಿಗಳನ್ನು, ಹಣ್ಣುಗಳನ್ನು ಸ್ವಚ್ಛ ಮಾಡಬೇಕು.. ಹೀಗೆ ಪ್ರಿಡ್ಜ್ ಸ್ವಚ್ಛ ಮಾಡುವಾಗ ತಪ್ಪದೇ ಪವರ್ ಸ್ವಿಚ್ ಆಫ್ ಮಾಡಿದರೆ ಒಳ್ಳೆಯದು..
ಇದನ್ನೂ ಓದಿ; ಬೇಸಿಗೆಯಲ್ಲಿ ಸನ್ ಟ್ಯಾನ್ ಸಮಸ್ಯೆಗೆ ಇಲ್ಲಿದೆ ಪರಿಹಾರ
ಟ್ರೇಗಳನ್ನು ಯಾವಾಗಲೂ ಸ್ವಚ್ಛ ಮಾಡುವುದು ಒಳ್ಳೆಯದು;
ಇನ್ನು ಪ್ರಿಡ್ಜ್‌ನಲ್ಲಿರುವ ಟ್ರೇಗಳನ್ನು ಯಾವಾಗಲೂ ಸ್ವಚ್ಛ ಮಾಡಬೇಕು.. ಆಹಾರ ಪದಾರ್ಥ, ತರಕಾರಿ, ಹಣ್ಣುಗಳನ್ನು ಜೋಡಿಸುವಾಗ ಮೊದಲು ಟ್ರೇಗಳನ್ನು ಸ್ವಚ್ಛ ಮಾಡಿ.. ಟ್ರೇಗಳನ್ನು ಮೊದಲು ಹೊರಗೆ ತೆಗೆದು ಸ್ವಚ್ಛ ಮಾಡಿ, ನೀರಿನಿಂದ ಚೆನ್ನಾಗಿ ತೊಳೆಯಬೇಕು.. ಅನಂತರ ಒರೆಸಿ, ಒಣಗಿದ ಮೇಲೆ ಜೋಡಿಸಿಡಬೇಕು.. ಅನಂತರವೇ ಅದರಲ್ಲಿ ತರಕಾರಿ, ಹಣ್ಣು ಹಾಗೂ ಆಹಾರ ಪದಾರ್ಥಗಳನ್ನು ಜೋಡಿಸಿಡಬೇಕು..
ನಿಂಬೆ ರಸ, ಸೋಡಾ ಬಳಸಿ;
ಫ್ರಿಡ್ಜ್ ಸ್ವಚ್ಛ ಮಾಡಲು ಬಹುತೇಕರು ಮಾರುಕಟ್ಟೆಯಲ್ಲಿ ದೊರೆಯುವ ರಸಾಯನಿಕಗಳನ್ನು ಬಳಸುತ್ತಾರೆ.. ಆದ್ರೆ, ಇದರಿಂದ ಫ್ರಿಡ್ಜ್ ನಲ್ಲಿ ರಾಸಾಯನಿಕಗಳನ್ನು ಸೇರಿಸಿದಂತಾಗುತ್ತದೆ.. ಅದರ ಬದಲು ಫ್ರಿಡ್ಜ್ ಒಳಭಾಗವನ್ನು ಸ್ವಚ್ಛಗೊಳಿಸುವಾಗ, ಮೊದಲು ಸ್ವಚ್ಛವಾದ, ಒದ್ದೆಯಾದ ಬಟ್ಟೆಯಿಂದ ಒಳಭಾಗವನ್ನು ಸ್ವಚ್ಛಗೊಳಿಸಬೇಕು.. ಅನಂತರ ಕಲೆಗಳನ್ನು ನಿಂಬೆ ರಸ ಮತ್ತು ಸೋಡಾ ಬೆರೆಸಿದ ನೀರಿನಿಂದ ಸ್ವಚ್ಛಗೊಳಿಸುವುದು ಉತ್ತಮ. ಹಾಗೇ ಮಾಡುವುದರಿಂದ ಫ್ರಿಡ್ಜ್ ಒಳಗಡೆ ಉತ್ತಮ ಸುವಾಸನೆ ಇರುತ್ತದೆ… ಜೊತೆಗೆ ನಮ್ಮ ಆರೋಗ್ಯಕ್ಕೂ ಯಾವುದೇ ಹಾನಿಯಾಗಲಾರದು..
ಇದನ್ನೂ ಓದಿ; ಕೋಲಾರ ಟಿಕೆಟ್ ವಿವಾದ; ಸಿಎಂ ಸಂಧಾನ ಯಶಸ್ವಿ – ಅಭ್ಯರ್ಥಿ ಯಾರು ಗೊತ್ತಾ..?
ವಿನೆಗರ್ ಬಳಸಿ ಸ್ವಚ್ಛ ಮಾಡಬಹುದು;
ಫ್ರಿಜ್ ಅನ್ನು ಸ್ವಚ್ಛಗೊಳಿಸುವಾಗ ವಿನೆಗರ್ ಕೂಡಾ ಬಲಸಬಹುದು.. ಮೊದಲು ನೀರಿಗೆ ವಿನೆಗರ್ ಸೇರಿಸಬೇಕು. ಅನಂತರ ಸ್ಪಾಂಜ್ ಅಥವಾ ಬಟ್ಟೆಯನ್ನು ಬಳಸಿಕೊಂಡು ಫ್ರಿಜ್ ಅನ್ನು ಸ್ವಚ್ಛಗೊಳಿಸಬೇಕು. ವಿನೆಗರ್ ಬೆರೆಸಿದ ನೀರನ್ನು ಬಳಸಿ ಫ್ರಿಡ್ಜ್ ಒಳಗೆ ಸ್ವಚ್ಛಗೊಳಿಸಿದರೆ ಫ್ರಿಡ್ಜ್ ಫಳಫಳ ಹೊಳೆಯುತ್ತವೆ..
ಫ್ರಿಡ್ಜ್ ಸ್ವಚ್ಛ ಮಾಡಿದ ನಂತರ;
ನಾವು ಫ್ರಿಜ್ ಅನ್ನು ಸ್ವಚ್ಛಗೊಳಿಸಿದ ನಂತರ, ವಸ್ತುಗಳನ್ನು ಮತ್ತೆ ಫ್ರಿಜ್ನಲ್ಲಿ ಜೋಡಿಸಿಡಬೇಕು. ಆಹಾರ ಪದಾರ್ಥಗಳನ್ನು ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಬೇಕು. ಎಲ್ಲಾ ಹಣ್ಣುಗಳು ಮತ್ತು ತರಕಾರಿಗಳನ್ನು ಚೆನ್ನಾಗಿ ಜೋಡಿಸಿಡಬೇಕು..
ಇದನ್ನೂ ಓದಿ; 50ನೇ ವಯಸ್ಸಿನಲ್ಲಿ ತಂದೆಯಾದ ಪಂಜಾಬ್ ಸಿಎಂ ಭಗವಂತ್ ಮಾನ್