Politics

ಚಿಕ್ಕಬಳ್ಳಾಪುರ ಲೋಕಸಭಾ; ಜನಕ್ಕೆ ʻರಕ್ಷಾʼ ಬೇಕು.. ನಾಯಕರಿಗೆ ʻಮೊಯ್ಲಿʼ ಬೇಕು..!

ಚಿಕ್ಕಬಳ್ಳಾಪುರ; ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ.. ಇಲ್ಲಿ ವ್ಯಕ್ತಿಗಿಂತ ಪಕ್ಷವೇ ಮುಖ್ಯವಾಗಿದ್ದು ಹೆಚ್ಚು.. ಜಾತಿಗಿಂತ ವ್ಯಕ್ತಿಯೇ ಹೆಚ್ಚು.. ಹಣಕ್ಕಿಂತ ಸ್ವಾಭಿಮಾನವೇ ಹೆಚ್ಚು.. ಹೀಗಾಗೇ, ಚಿಕ್ಕಬಳ್ಳಾಪುರದಲ್ಲಿ ಜಾತಿ, ಹಣದ ಮೇಲೆ ಲೆಕ್ಕಾಚಾರ ಮಾಡಿದರೆ ಅದು ನಮಗೇ ಉಲ್ಟಾ ಹೊಡೆಯುತ್ತದೆ.. ಇಲ್ಲಿನ ಜನ ಯೋಚನೆ ಮಾಡುವ ರೀತಿಯೇ ಬೇರೆ.. ಸುಮಾರು ಏಳು ಲಕ್ಷ ದಲಿತ ಮತದಾರರಿರುವ ಈ ಕ್ಷೇತ್ರದಲ್ಲಿ ಸ್ವಾಭಿಮಾನಿಗಳೇ ಜಾಸ್ತಿ.. ಜಾತಿ ಮೀರಿ ಯೋಚನೆ ಮಾಡುವವರೇ ಜಾಸ್ತಿ.. ಎಲ್ಲಾ ಕ್ಷೇತ್ರಗಳಂತೆ ಇಲ್ಲಿಯೂ ಹಣದ ಹೊಳೆ ಹರಿಯುತ್ತದಾದರೂ ಮತದಾನ ಮಾಡುವಾಗ ಮಾತ್ರ ಮತದಾರರು ತುಂಬಾ ಎಚ್ಚರಿಕೆಯಿಂದ ತಮ್ಮ ಮತ ಚಲಾಯಿಸುತ್ತಾರೆ.. ಇಲ್ಲಿ ಕಾಂಗ್ರೆಸ್‌ ಪರವಾದಂತಹ ಒಲವು ಹೆಚ್ಚು.. ಆದ್ರೆ ಇತ್ತೀಚೆಗೆ ಇಲ್ಲಿ ಬಿಜೆಪಿ ಚಿಗುರಿಕೊಂಡಿದೆ..

ಇದನ್ನೂ ಓದಿ; ಬೆವರು ದುರ್ವಾಸನೆಯಿಂದ ರೋಸಿಹೋಗಿದ್ದೀರಾ..?; ಹಾಗಾದ್ರೆ ಈ ಟಿಪ್ಸ್‌ ಫಾಲೋ ಮಾಡಿ..

ಕಾಂಗ್ರೆಸ್‌ಗೆ ಹೈಕಮಾಂಡ್‌ಗೆ ಕಗ್ಗಂಟಾದ ಅಭ್ಯರ್ಥಿ ಆಯ್ಕೆ;

ಮಾಜಿ ಸಚಿವ ಡಾ.ಕೆ.ಸುಧಾಕರ್‌ ಇಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.. ಈ ಕಾರಣಕ್ಕಾಗಿ ಈ ಬಾರಿಯ ಫಲಿತಾಂಶ ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.. ವಿಚಿತ್ರ ಅಂದ್ರೆ, ಕಾಂಗ್ರೆಸ್‌ ಗೆ ಅನುಕೂಲಕರ ಕ್ಷೇತ್ರ ಆದರೂ ಕಾಂಗ್ರೆಸ್‌ ಟಿಕೆಟ್‌ಗಾಗಿ ತೀವ್ರ ಪೈಪೋಟಿ ಎಂದಿಗೂ ರಲಿಲ್ಲ.. ಆದ್ರೆ ಈ ಬಾರಿ ಮೂವರು ನಾಯಕರು ಶತಾಯಗತಾಯ ನನಗೇ ಟಿಕೆಟ್‌ ಬೇಕು ಅಂತ ಕುಳಿತಿದ್ದಾರೆ.. ಅದು ಕಾಂಗ್ರೆಸ್‌ ಹೈಕಮಾಂಡ್‌ಗೆ ಕಗ್ಗಂಟಾಗಿ ಕುಳಿತಿದೆ.. ಎನ್‌.ಹೆಚ್‌.ಶಿವಶಂಕರರೆಡ್ಡಿ, ರಕ್ಷಾ ರಾಮಯ್ಯ ಹಾಗೂ ವೀರಪ್ಪ ಮೊಯ್ಲಿ ಟಿಕೆಟ್‌ಗಾಗಿ ಬಿಗ್‌ ಫೈಟ್‌ ಮಾಡುತ್ತಿದ್ದಾರೆ.. ಎಷ್ಟೇ ಫೈಟ್‌ ಮಾಡಿದರೂ ಇವತ್ತು ಅಥವಾ ನಾಳೆ ಟಿಕೆಟ್‌ ಅನೌನ್ಸ್‌ ಆಗೇ ಆಗುತ್ತೆ.. ಆದ್ರೆ ಇಲ್ಲಿ ವಿಚಿತ್ರ ಏನು ಅಂದ್ರೆ ಜನ ಒಬ್ಬ ನಾಯಕನನ್ನು ಬಯಸುತ್ತಿದ್ದರೆ, ಇಲ್ಲಿ ಶಾಸಕರು, ನಾಯಕರು ಬೇರೊಬ್ಬ ನಾಯಕ ಬೇಕು ಅಂತ ಆಸೆ ಪಡುತ್ತಿದ್ದಾರೆ..

ಇದನ್ನೂ ಓದಿ; ಮಾನಸಿಕ ಒತ್ತಡದಲ್ಲಿದ್ದೀರಾ..?; ಹಾಗಾದರೆ ಈ ಮಂತ್ರಗಳನ್ನು ಜಪಿಸಿ!

ನಾಯಕರಿಗೆ ʻಮೊಯ್ಲಿʼ ಬೇಕು.. ಜನಕ್ಕೆ ʻರಕ್ಷಾʼ ಬೇಕು..!

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಬಾಗೇಪಲ್ಲಿ, ಗೌರಿಬಿದನೂರು, ಹೊಸಕೋಟೆ, ದೇವನಹಳ್ಳಿ, ಚಿಕ್ಕಬಳ್ಳಾಪುರ, ಯಲಹಂಕ, ನೆಲಮಂಗಲ ಹಾಗೂ ದೊಡ್ಡ ಬಳ್ಳಾಪುರ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.. ಇಲ್ಲಿ ಬಹುಪಾಲು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷದ ಶಾಸಕರೇ ಇದ್ದಾರೆ.. ಕಳೆದ ಹದಿನೈದು ವರ್ಷಗಳ ಹಿಂದೆ ಕರಾವಳಿಯಿಂದ ಬಂದ ವೀರಪ್ಪ ಮೊಯ್ಲಿಯವರಿಗೆ ಇಲ್ಲಿ ಜನ ಅತ್ಯಂತ ಗೌರವ, ಮರ್ಯಾದೆ ಕೊಟ್ಟು ಗೆಲ್ಲಿಸಿದ್ದರು.. ಎರಡನೇ ಬಾರಿಯೂ ಮತ ಹಾಕಿ ಲೋಕಸಭೆಗೆ ಕಳುಹಿಸಿದ್ದರು.. ಮೊದಲ ಬಾರಿ ಸಂಸದರಾದಾಗ ಅವರು ಕೇಂದ್ರ ಸಚಿವರೂ ಆದರು.. ಎತ್ತಿಹೊಳೆ ಯೋಜನೆ ಮೂಲಕ ಶಾಶ್ವತ ನೀರಾವರಿ ಯೋಜನೆ ತರುತ್ತೇನೆ ಎಂದು ಹೇಳಿದರು.. ಆದ್ರೆ ಅದು ಪೂರ್ಣವಾಗಲೇ ಇಲ್ಲ.. ಹೀಗಾಗಿ ಮೂರನೇ ಬಾರಿ ಸೋತುಸುಣ್ಣವಾದರು.. ಕಾಂಗ್ರೆಸ್‌ ಭದ್ರಕೋಟೆಯಲ್ಲಿ ಬಿಜೆಪಿ ಬಾವುಟ ಹಾರಿಸಿದರು ಜನ.. ಇದೀಗ ಮತ್ತೆ ವೀರಪ್ಪ ಮೊಯ್ಲಿ ನನಗೇ ಟಿಕೆಟ್‌ ಬೇಕು ಎಂದು ಕೇಳುತ್ತಿದ್ದಾರೆ.. ಇದಕ್ಕೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬಹುತೇಕ ಕಾಂಗ್ರೆಸ್‌ ಶಾಸಕರು ತಾಳ ಹಾಕುತ್ತಿದ್ದಾರೆ.. ಶಾಸಕರ ಅಭಿಪ್ರಾಯ ಕೇಳಿದಾಗ ವೀರಪ್ಪ ಮೊಯ್ಲಿಯವರಿಗೇ ಟಿಕೆಟ್‌ ಕೊಡಿ ಎಂಬ ಅಭಿಪ್ರಾಯ ಕೊಟ್ಟಿದ್ದಾರೆ.. ಆದ್ರೆ ಜನ ಸಾಮಾನ್ಯರಿಗೆ ಮಾತ್ರ ವೀರಪ್ಪ ಮೊಯ್ಲಿ ಬಗ್ಗೆ ಅಷ್ಟೊಂದು ಒಲವಿಲ್ಲ.. ಎರಡು ಬಾರಿ ಗೆಲ್ಲಿಸಿದಾಗಲೇ ಏನೂ ಮಾಡಲಿಲ್ಲ.. ಈಗ ಇನ್ನೇನು ಮಾಡುತ್ತಾರೆ ಎಂಬ ಅಭಿಪ್ರಾಯವೇ ಹೆಚ್ಚಾಗಿ ಕೇಳಿಬರುತ್ತದೆ.. ಆದ್ರೆ, ಜನರು ಹೊಸ ಮುಖ ಇರಲಿ ಅಂತ ರಕ್ಷಾ ರಾಮಯ್ಯ ಆದರೆ ಒಳ್ಳೆಯದು ಎನ್ನುತ್ತಿದ್ದಾರೆ.. ಸಿಎಂ ಸಿದ್ದರಾಮಯ್ಯ ಕೂಡಾ ರಕ್ಷಾ ರಾಮಯ್ಯ ಪರ ಒಲವು ತೋರಿಸಿದ್ದಾರೆ.. ಇನ್ನೊಂದೆಡೆ ಗೌರಿಬಿದನೂರು ಕ್ಷೇತ್ರದಲ್ಲಿ ಸತತ ಐದು ಬಾರಿ ಗೆದ್ದು ಆರನೇ ಬಾರಿ ಹೀನಾಯವಾಗಿ ಸೋತಿರುವ ಶಿವಶಂಕರರೆಡ್ಡಿ ಕೂಡಾ ನನಗೇ ಕಾಂಗ್ರೆಸ್‌ ಟಿಕೆಟ್‌ ಬೇಕು ಅಂತಿದಾರೆ.. ಟಿಕೆಟ್‌ ಸಿಗದೇ ಹೋದರೆ ಪಕ್ಷ ಬಿಡುವ ಮಾತನ್ನಾಡುತ್ತಿದ್ದಾರೆ.. ಆದ್ರೆ ಜನ ಮಾತ್ರ ಅಳೆದೂತೂಗಿ ರಕ್ಷಾ ರಾಮಯ್ಯನೇ ಇರಲಿ ಎನ್ನುತ್ತಿದ್ದಾರೆ..

ಇದನ್ನೂ ಓದಿ; ಬೇಸಿಗೆಯಲ್ಲಿ ಸನ್ ಟ್ಯಾನ್ ಸಮಸ್ಯೆಗೆ ಇಲ್ಲಿದೆ ಪರಿಹಾರ

ಶಾಸಕರಿಗೆ ವೀರಪ್ಪ ಮೊಯ್ಲಿ ಯಾಕೆ ಬೇಕು..?;

ವೀರಪ್ಪ ಮೊಯ್ಲಿಯವರು ದೇವಾಡಿಗ ಸಮುದಾಯಕ್ಕೆ ಸೇರಿದವರು.. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ದೇವಾಡಿಗ ಸಮುದಾಯದ ಒಂದೇ ಒಂದು ಮತವೂ ಇಲ್ಲ.. ಆದ್ರೆ, ಇಲ್ಲಿನ ಜನ ಜಾತ್ಯತೀತವಾಗಿ ಯೋಚನೆ ಮಾಡುವುದರಿಂದ ವೀರಪ್ಪ ಮೊಯ್ಲಿಯವರನ್ನು ಎರಡು ಬಾರಿ ಗೆದ್ದು ಸಂಸತ್ತಿಗೆ ಕುಳುಹಿಸಿದ್ದರು.. ಆದ್ರೆ ಜನ ಬಯಸಿದಷ್ಟು ಅವರು ಕೆಲಸವೇನೂ ಮಾಡಲಿಲ್ಲ.. ಆದರೂ ಸ್ಥಳೀಯ ಶಾಸಕರು ವೀರಪ್ಪ ಮೊಯ್ಲಿ ಪರವಾದ ನಿಲುವನ್ನು ಹೊಂದಿದ್ದಾರೆ.. ಇದಕ್ಕೆ ಕಾರಣ ಇಷ್ಟೇ.. ವೀರಪ್ಪ ಮೊಯ್ಲಿಯವರು ಸ್ಥಳೀಯ ನಾಯಕರ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ.. ಶಾಸಕರಿಗೆ ಆಗಬೇಕಾದ ಕೆಲಸಗಳನ್ನು ಮಾಡಿಕೊಡುತ್ತಾರೆ.. ತಾಳ್ಮೆಯಿಂದ ಕೇಳುತ್ತಾರೆ.. ಜೊತೆಗೆ ಸರಳ ವ್ಯಕ್ತಿತ್ವ.. ಇನ್ನು ವೀರಪ್ಪ ಮೊಯ್ಲಿ ಸಂಸದರಾದರೆ, ಹೈಕಮಾಂಡ್‌ ಮೂಲಕ ಮಾಡಿಸಿಕೊಂಡು ಬರಬಹುದಾದ ಕೆಲಸಗಳನ್ನು ಮಾಡಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ ಸ್ಥಳೀಯ ಶಾಸಕರದ್ದು.. ಉದಾಹರಣೆಗೆ ಹೇಳೋದಾದರೆ ಬಾಗೇಪಲ್ಲಿ ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿಯವರು ಮೂರು ಬಾರಿ ಶಾಸಕರಾಗಿದ್ದಾರೆ.. ಅವರು ಈ ಬಾರಿ ಸಚಿವ ಸ್ಥಾನ ಬಯಸಿದ್ದರು.. ಆದ್ರೆ ಸಿಗಲಿಲ್ಲ.. ಅದೇ ವೀರಪ್ಪ ಮೊಯ್ಲಿ ಬೆಂಬಲ ಇದ್ದರೆ, ಮುಂದೆ ಹೈಕಮಾಂಡ್‌ ಬಳಿ ಲಾಬಿ ಮಾಡೋದಕ್ಕೆ ಸುಲಭವಾಗುತ್ತದೆ ಎಂಬ ಲೆಕ್ಕಾಚಾರದಲ್ಲಿದ್ದರು.. ಆದ್ರೆ ಇದೀಗ ಅವರು ತಮ್ಮ ನಿಲುವು ಬದಲಿಸಿಕೊಂಡಿದ್ದಾರೆ..

ಇದನ್ನೂ ಓದಿ; ಮುಖ ಸುಕ್ಕುಗಟ್ಟದಂತೆ ಯಾವಾಗಲೂ ಯಂಗ್‌ ಆಗಿ ಕಾಣುಲು ಹೀಗೆ ಮಾಡಿ!

ಕೊನೆಗೂ ಮನಸ್ಸು ಬದಲಿಸಿದ ಶಾಸಕ ಸುಬ್ಬಾರೆಡ್ಡಿ;

ಹಾಗೆ ನೋಡಿದರೆ ಬಾಗೇಪಲ್ಲಿ ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿಯವರಿಗೆ ರಕ್ಷಾ ರಾಮಯ್ಯ ಅವರ ಕುಟುಂಬದವರ ಜೊತೆಗೂ ಉತ್ತಮ ಬಾಂಧವ್ಯ ಇದೆ.. ರಕ್ಷಾ ರಾಮಯ್ಯ ಅವರ ಕುಟುಂಬ ಎಂಎಸ್‌ ರಾಮಯ್ಯ ಆಸ್ಪತ್ರೆಯಲ್ಲಿ ಬಾಗೇಪಲ್ಲಿ ಕ್ಷೇತ್ರದ ಜನರಿಗೆ ಚಿಕಿತ್ಸೆ ಕೊಡಿಸುವುದಕ್ಕಾಗಿ ಒಂದು ವಾರ್ಡ್‌ನ್ನೇ ಶಾಸಕರು ಮೀಸಲಿರಿಸಿದ್ದರು.. ಬಾಗೇಪಲ್ಲಿ ಕ್ಷೇತ್ರ ಬಡ ರೋಗಿಗಳನ್ನು ಶಾಸಕ ಸುಬ್ಬಾರೆಡ್ಡಿಯವರು ಇಲ್ಲಿಗೇ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸುತ್ತಾರೆ.. ಆದರೂ ಕೂಡಾ ಸುಬ್ಬಾರೆಡ್ಡಿ ರಕ್ಷಾ ರಾಮಯ್ಯಗೆ ಟಿಕೆಟ್‌ ನೀಡಬಾರದು ಎಂದು ಮೊದಲ ಹೇಳಿದ್ದರು.. ಅವರು ಹೊರಗಿನವರು ಎಂಬ ಅಭಿಪ್ರಾಯ ವ್ಯಕ್ತಪಡಿಸಲಾಗಿತ್ತು.. ಇದಕ್ಕೆ ಕಾರಣವೂ ಇತ್ತು.. ರಕ್ಷಾ ರಾಮಯ್ಯ ಬಂದರೆ ಬಾಗೇಪಲ್ಲಿ ಕ್ಷೇತ್ರದಲ್ಲಿ ಬೇರೆಯವರ ಹಸ್ತಕ್ಷೇಪ ಶುರುವಾಗುತ್ತದೆ ಎಂಬ ಅನುಮಾನ ಇತ್ತು.. ಈಗ ಸುಬ್ಬಾರೆಡ್ಡಿಯವರ ಮನವೊಲಿಸಲಾಗಿದೆ.. ರಕ್ಷಾ ರಾಮಯ್ಯ ಬೆಂಬಲ ನೀಡುತ್ತೇನೆ ಎಂದು ಸುಬ್ಬಾರೆಡ್ಡಿ ಹೇಳಿದ್ದಾರೆ.. ಈ ಬಗ್ಗೆ ಈಗಾಗಲೇ ಸಭೆ ಕೂಡಾ ಮಾಡಲಾಗಿದೆ.. ಉಳಿದ ಶಾಸಕರ ಮನವೊಲಿಸುವ ಕೆಲಸ ನಡೆಯುತ್ತಿದೆ.. ಹಾಗೇನಾದರೂ ನಡೆದರೆ ರಕ್ಷಾ ರಾಮಯ್ಯ ಕಾಂಗ್ರೆಸ್‌ ಅಭ್ಯರ್ಥಿಯಾಗಲಿದ್ದಾರೆ.. ಹಾಗೇನಾದರೂ ರಕ್ಷಾ ರಾಮಯ್ಯ ಕಾಂಗ್ರೆಸ್‌ ಅಭ್ಯರ್ಥಿಯಾದರೆ ಬಿಗ್‌ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್‌ ಅಭ್ಯರ್ಥಿ ನಡುವೆ ಬಿಗ್‌ ಫೈಟ್‌ ನಡೆಯೋದಂತೂ ಸತ್ಯ..

ಇದನ್ನೂ ಓದಿ; ರಾತ್ರಿಯಿಡೀ ನೆನೆಸಿಟ್ಟ ಒಣದ್ರಾಕ್ಷಿ ತಿಂದರೆ ಅನಾರೋಗ್ಯಕ್ಕೆ ಚೆಕ್‌!

 

Share Post