Politics

ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ!

ಹುಬ್ಬಳ್ಳಿ; ಜೆಡಿಎಸ್‌ ಮುಖಂಡ ಹಾಗೂ ಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಅವರು ಪರಿಷತ್‌ ಸದಸ್ಯತ್ವ ಹಾಗೂ ಜೆಡಿಎಸ್‌ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.. ಹುಬ್ಬಳ್ಳಿಯ ನಿವಾಸದಲ್ಲಿ ಸಭಾಪತಿ ಬಸವರಾಜ ಹೊರಟ್ಟಿಯವರನ್ನು ಭೇಟಿ ಮಾಡಿದ ಮರಿತಿಬ್ಬೇಗೌಡ ಅವರು, ತಮ್ಮ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.. ರಾಜೀನಾಮೆ ಪತ್ರ ಪರಿಶೀಲನೆ ಮಾಡಿರುವ ಸಭಾಪತಿ, ರಾಜೀನಾಮೆಯನ್ನು ಅಂಗೀಕಾರ ಮಾಡಿದ್ದಾರೆ.

ಇದನ್ನೂ ಓದಿ; ಜಪಾನ್‌ನಲ್ಲಿದ್ದ ರಾಜಮೌಳಿ ಕುಟುಂಬಕ್ಕೆ ಭೂಕಂಪನದ ಅನುಭನ; ಬೆಚ್ಚಿಬಿದ್ದ ಕುಟುಂಬ!

ಬಿಜೆಪಿಯೊಂದಿಗೆ ಮೈತ್ರಿಯಿಂದಾಗಿ ಅಸಮಾಧಾನ;

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ.. ಇದಕ್ಕೆ ಮರಿತಿಬ್ಬೇಗೌಡರಿಗೆ ವಿರೋಧವಿತ್ತು ಎನ್ನಲಾಗಿದೆ.. 2000ನೇ ಇಸ್ವಿ ಜೂನ್‌ ತಿಂಗಳಲ್ಲಿ ನಾನು ಕಾಂಗ್ರೆಸ್​ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಿಷತ್​ಗೆ ಆಯ್ಕೆಯಾಗಿದ್ದೆ. ಎರಡನೇ ಬಾರಿ ಪಕ್ಷೇತರನಾಗಿ ಆಯ್ಕೆಯಾಗಿ ಬಂದಿದ್ದೆ.  ಮೂರು ಹಾಗೂ ನಾಲ್ಕನೇ ಬಾರಿ ನಾನು ಜೆಡಿಎಸ್‌ನಿಂದ ಗೆದ್ದು ಪರಿಷತ್‌ಗೆ ಹೋಗಿದ್ದೆ. ಪಕ್ಷದ ನಿಷ್ಠಾವಂತ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಆದ್ರೆ  ಕಾರಣಾಂತರಗಳಿಂದ ರಾಜೀನಾಮೆ ನೀಡಿದ್ದೇನೆ ಎಂದು ಮರಿತಿಬ್ಬೇಗೌಡರು ಹೆಚ್​.ಡಿ.ದೇವೇಗೌಡ, ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ; ಕುಮಾರಸ್ವಾಮಿ ಶಸ್ತ್ರಚಿಕಿತ್ಸೆ ಯಶಸ್ವಿ; ವಿಶ್ರಾಂತಿಯ ನಂತರ ಚುನಾವಣಾ ಪ್ರಚಾರ

ರಾಜೀನಾಮೆಗೆ ನನ್ನ ವೈಯಕ್ತಿಕ ಕಾರಣಗಳಿವೆ.. ಇದರಿಂದಾಗಿ ರಾಜೀನಾಮೆ ನೀಡುತ್ತಿದ್ದೇನೆ. ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್‌ನಿಂದ ಎರಡು ಬಾರಿ ಟಿಕೆಟ್‌ ಪಡೆದು ಚುನಾಯಿತನಾಗಿದ್ದೆ. ಈ ಅವಧಿಯಲ್ಲಿ  ವಿಧಾನ ಪರಿಷತ್ ಉಪ ಸಭಾಪತಿ ಆಗಿದ್ದೆ ಎಂದಿರುವ ಮರಿತಿಬ್ಬೇಗೌಡರು, ಜನತಾದಳದ ವರಿಷ್ಠ ಹೆಚ್​ಡಿ ದೇವೆಗೌಡ, ರಾಜ್ಯಾಧ್ಯಕ್ಷ ಹೆಚ್​ಡಿ ಕುಮಾರಸ್ವಾಮಿ ಅವರು ನಮಗೆ ಸರಿಯಾಗಿ ಸ್ಪಂದಿಸಲಿಲ್ಲ ಎಂದು ಆರೋಪ ಮಾಡಿದ್ದಾರೆ..

ಇದನ್ನೂ ಓದಿ; ನಮ್ಮ ಬಳಿ ಜಾಹೀರಾತು ನೀಡಲೂ ಹಣವಿಲ್ಲ, ರೈಲು ಟಿಕೆಟ್‌ ಬುಕ್‌ ಮಾಡಲೂ ಆಗ್ತಿಲ್ಲ; ರಾಹುಲ್‌ ಗಾಂಧಿ!

ನಿಷ್ಠಾವಂತರನ್ನು ಕಡೆಗಣನೆ ಮಾಡಿದ್ದಾರೆ;

ದೇವೇಗೌಡರು ಹಾಗೂ ಕುಮಾರಸ್ವಾಮಿಯವರು ಪಕ್ಷದಲ್ಲಿ ನಿಷ್ಠಾವಂತರನ್ನು ಕಡೆಗಣನೆ ಮಾಡಿದ್ದಾರೆ. ನಾವು ಏನೇ ಹೇಳಿದರೂ ಅವರಿಗೆ ಹಿಡಿಸುತ್ತಿರಲಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿಯವರನ್ನು ಮಂಡ್ಯದಿಂದ ಅಭ್ಯರ್ಥಿ  ಕಣಕ್ಕಿಳಿಸಲು ಗೌಡರ ಕುಟಂಬ ನಿರ್ಧಾರ ಮಾಡಿತು. ಆಗ ನಾನು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದೆ. ಕುಟುಂಬ ರಾಜಕೀಯ ಬೇಡ. ಸ್ಥಳೀಯ ಕಾರ್ಯಕರ್ತರಿಗೆ ಟಿಕೆಟ್‌ ನೀಡಿ ಎಂದು ಹೇಳಿದ್ದೆ.. ಇದರಿಂದಾಗಿ ಜೆಡಿಎಸ್‌ ವರಿಷ್ಠರು ನನ್ನ ಮೇಲೆ ನಂಬಿಕೆ ಇಡಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ; ಮೇಕೆದಾಟು ಅಣೆಕಟ್ಟು ಮಾಡಲು ಬಿಡಲ್ಲ ಎಂದ ಡಿಎಂಕೆ; ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಬಿಜೆಪಿ ಸಮರ!

ಜೆಡಿಎಸ್‌ ಪಕ್ಷಕ್ಕೂ ಮರಿತಿಬ್ಬೇಗೌಡರು ರಾಜೀನಾಮೆ;

ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಮರಿತಿಬ್ಬೇಗೌಡರು ಜೆಡಿಎಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ..  ನಾನು ಶಿಕ್ಷಕ ಬಂಧುಗಳ ಜೊತೆ ಸಮಾಲೋಚನೆ ಮಾಡಿ ಈ ನಿರ್ಧಾರ ಮಾಡಿದ್ದೇನೆ. ಎಲ್ಲರೂ ಕೂಡಾ ನನಗೆ ಪಕ್ಷ ತೊರೆಯಿರಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಹೀಗಾಗಿ ನಾನು ಪಕ್ಷ ಹಾಗೂ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಶೀಘ್ರವೇ ನನ್ನ ಮುಂದಿನ ನಡೆ ತಿಳಿಸುತ್ತೇನೆ ಎಂದು ಮರಿತಿಬ್ಬೇಗೌಡರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ; ಪಕ್ಕದ ಮನೆ ದಂಪತಿ ಸರಸ ಸಲ್ಲಾಪ ನೋಡೋಕೆ ಆಗ್ತಿಲ್ಲ; ಬೆಂಗಳೂರು ಮಹಿಳೆಯಿಂದ ವಿಚಿತ್ರ ದೂರು

 

Share Post