ಹಾಸನ ಕ್ಷೇತ್ರಕ್ಕೂ ನನಗೇ ಟಿಕೆಟ್ ಕೊಡಿ; ರೇವಣ್ಣರ ಮಾತಿಗೆ ದೊಡ್ಡಗೌಡರು ಹೇಳಿದ್ದೇನು..?
ಬೆಂಗಳೂರು; ಒಂದು ಕಡೆ ಹೆಚ್.ಡಿ.ಕುಮಾರಸ್ವಾಮಿಯವರು ಹಾಸನದಲ್ಲಿ ಸಾಮಾನ್ಯ ಕಾರ್ಯಕರ್ತನಿಗೇ ಟಿಕೆಟ್ ಎಂದು ಒತ್ತಿ ಒತ್ತಿ ಹೇಳುತ್ತಿದ್ದಾರೆ. ಆದ್ರೆ ರೇವಣ್ಣ ಕುಟುಂಬದವರು ಮಾತ್ರ ಟಿಕೆಟ್‌ಗಾಗಿ ಪಟ್ಟು ಬಿಡುತ್ತಿಲ್ಲ. ಹಾಸನ ಕ್ಷೇತ್ರದಲ್ಲಿ ಭವಾನಿ ರೇವಣ್ಣಗೆ ಟಿಕೆಟ್ ಕೇಳಲಾಗುತ್ತಿತ್ತು. ಆದ್ರೆ ಇದೀಗ ರೇವಣ್ಣ ಅವರು ತಮ್ಮ ವರಸೆ ಬದಲಿಸಿದ್ದಾರೆ. ನನಗೆ ಹಾಸನ ಕ್ಷೇತ್ರದಿಂದಾನೂ ಟಿಕೆಟ್ ಕೊಡಿ ಎಂದು ದೇವೇಗೌಡರ ಬಳಿ ಪಟ್ಟು ಹಿಡಿದಿದ್ದಾರೆ.
ಇಂದು ದೇವೇಗೌಡರನ್ನು ಭೇಟಿ ಮಾಡಿದ್ದ ರೇವಣ್ಣ ಅವರು ಎರಡು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ. ಈ ವೇಳೆ ಅವರು ಭವಾನಿ ರೇವಣ್ಣ ಸೋಲೋದಾದರೆ ಹಾಸನಕ್ಕೆ ನನಗೇ ಟಿಕೆಟ್ ಕೊಡಿ. ನಾನು ಹೊಳೆ ನರಸೀಪುರ ಹಾಗೂ ಹಾಸನ ಎರಡೂ ಕ್ಷೇತ್ರದಲ್ಲಿ ಗೆದ್ದು ತೋರಿಸುತ್ತೇನೆ. ಹಾಸನ ಜಿಲ್ಲೆಯ ಮತದಾರರ ಬಗ್ಗೆ ನನಗೆ ಸರಿಯಾಗಿ ಗೊತ್ತು. ಹಾಸನದಲ್ಲಿ ಜನ ನನ್ನ ಕೈ ಹಿಡಿಯುತ್ತಾರೆ. ಎರಡೂ ಕಡೆ ಗೆದ್ದು ತೋರಿಸುತ್ತೇನೆ. ಅನಂತರ ನಾನು ಹೊಳೆನರಸೀಪುರ ಕ್ಷೇತ್ರದಲ್ಲಿ ರಾಜೀನಾಮೆ ಅಲ್ಲಿ ಉಪಚಾನವಣೆಯಲ್ಲಿ ಭವಾನಿಯವರನ್ನು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ದೊಡ್ಡಗೌಡರ ಮುಂದೆ ರೇವಣ್ಣ ಹೊಸ ವರಸೆ ಶುರು ಮಾಡಿದ್ದಾರೆ.
ಆದ್ರೆ ದೇವೇಗೌಡರು ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪ್ರವಾಸದಲ್ಲಿರುವ ಕುಮಾರಸ್ವಾಮಿಯವರು ಬೆಂಗಳೂರಿಗೆ ಬರಲಿ, ಅನಂತರ ಮಾತನಾಡೋಣ ಎಂದು ಹೇಳಿ ಕಳುಹಿಸಿದ್ದಾರೆ.