BengaluruCrime

ಪಕ್ಕದ ಮನೆ ದಂಪತಿ ಸರಸ ಸಲ್ಲಾಪ ನೋಡೋಕೆ ಆಗ್ತಿಲ್ಲ; ಬೆಂಗಳೂರು ಮಹಿಳೆಯಿಂದ ವಿಚಿತ್ರ ದೂರು

ಬೆಂಗಳೂರು; ಕೆಲವೊಂದು ವಿಚಿತ್ರ ವಿಷಯಗಳಿಗಾಗಿ ಜನರು ಪೊಲೀಸ್‌ ಠಾಣೆ ಮೆಟ್ಟಿಲೇರುವ ಪರಿಸ್ಥಿತಿ ಬರುತ್ತದೆ.. ಅದರಲ್ಲೂ ಬೆಂಗಳೂರಂತಹ ಮಹಾನಗರದಲ್ಲಿ ಜನರಿಗೆ ತಾವು ಎಲ್ಲಿ ಏನು ಮಾಡುತ್ತಿದ್ದೇವೆ ಎಂದು ಪರಿವೆಯೂ ಇರೋದಿಲ್ಲ.. ಬುದ್ದಿ ಹೇಳೋಕೆ ಹೋದರೂ ಅವರು ಕೇಳೋ ಪರಿಸ್ಥಿತಿಯಲ್ಲಿ ಇಂತಹ ಸಮಯದಲ್ಲಿ ಜನರು ಪೊಲೀಸ್‌ ಠಾಣೆ ಮೊರೆ ಹೋಗಬೇಕಾಗುತ್ತದೆ.. ಅದೇ ರೀತಿಯ ವಿಚಿತ್ರ ಘಟನೆಯೊಂದರಿಂದ ಬೇಸತ್ತ ಮಹಿಳೆಯೊಬ್ಬರು ಪೊಲೀಸರ ಮೊರೆಹೋಗಿದ್ದಾರೆ.

ಇದನ್ನೂ ಓದಿ; ಒಂದೇ ಕುಟುಂಬದ ಮೂವರು ನಿಗೂಢ ಸಾವು; ಸಾಲಗಾರರ ಕಾಟಕ್ಕೆ ಆತ್ಮಹತ್ಯೆ ಮಾಡಿಕೊಂಡ್ರಾ..?

ಪಕ್ಕದ ಮನೆ ದಂಪತಿ ಸರಸ-ಸಲ್ಲಾಪ ನೋಡೋಕೆ ಆಗ್ತಿಲ್ಲ;

ಪಕ್ಕದ ಮನೆ ದಂಪತಿ ತಮ್ಮ ಬೆಡ್‌ ರೂಮ್‌ನಲ್ಲಿ ದಿನವೂ ಸರಸ ಸಲ್ಲಾಪ ನಡೆಸುತ್ತಿದ್ದು, ಅದು ಕಿಟಕಿಯಿಂದ ಕಾಣಿಸುತ್ತದೆ.. ಇದರಿಂದಾ ನನಗೆ ತೀವ್ರ ಕಿರಿಕಿರಿಯಾಗುತ್ತಿದೆ ಎಂದು ಮಹಿಳೆಯೊಬ್ಬರು ಗಿರಿನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.. ಈ ದೂರು ನೋಡಿ ಪೊಲೀಸರಿಗೆ ಅಳಬೇಕೋ, ನಗಬೇಕೋ ಒಂದೂ ಗೊತ್ತಾಗಿಲ್ಲ.. ನಾಲ್ಕು ಗೋಡೆ ಮಧ್ಯೆ ನಡೆಯಬೇಕಾಗಿದ್ದು, ಆ ದಂಪತಿ ಯಾಕೆ ಎಲ್ಲರಿಗೂ ಕಾಣುವಂತೆ, ಕಿರಿಕಿರಿಯಾಗುವಂತೆ ಮಾಡುತ್ತಿದ್ದಾರೋ ಅರ್ಥವಾಗುತ್ತಿಲ್ಲ..

ಬಿಡಿಎ ಲೇಔಟ್‌ನ 44 ವರ್ಷದ ಮಹಿಳೆಯಿಂದ ದೂರು;

ಆವಲಹಳ್ಳಿ, ಬಿಡಿಎ ಲೇಔಟ್​ ನಲ್ಲಿ 44 ಮಹಿಳೆಯೊಬ್ಬರು ವಾಸವಾಗಿದ್ದಾರೆ.. ಮಹಿಳೆಯ ಮನೆಗೆ ಹೊಂದಿಕೊಂಡೇ ಪಕ್ಕದಲ್ಲಿ ಇನ್ನೊಂದು ಮನೆ ಇದೆ.. ಆ ಮನೆಯ ಬೆಡ್‌ ರೂಮ್‌ ಕಿಟಕಿ, ದೂರು ಕೊಟ್ಟ ಮಹಿಳೆಯ ಮನೆಯ ಬಾಗಿಲಿಗೆ ಎದುರಾಗಿದೆಯಂತೆ.. ಪಕ್ಕದ ಮನೆಯ ದಂಪತಿ ಬೆಡ್‌ ರೂಮ್‌ನಲ್ಲಿ ಸರಸ ಸಲ್ಲಾಪದಲ್ಲಿ ತೊಡಗಿದ್ದಾಗ ಕಿಟಕಿ ಬಾಗಿಲು ಹಾಕಿರುವುದಿಲ್ಲ.. ಇದರಿಂದ ನಾನು ನಮ್ಮ ಮನೆಯ ಬಾಗಿಲು ತೆರೆದರೆ ಅದೆಲ್ಲಾ ಕಾಣುತ್ತದೆ.. ಆ ಅಸಹ್ಯ ನನಗೆ ನೋಡೋದಕ್ಕೆ ಆಗೋದಿಲ್ಲ ಎಂದು ಮಹಿಳೆ ದೂರಿನಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ; ಇಂದೇ ಕಾಂಗ್ರೆಸ್‌ ಪಟ್ಟಿ ರಿಲೀಸ್‌; ಸಚಿವರ ಮಕ್ಕಳು, ಸಂಬಂಧಿಕರಿಗೇ ಹೆಚ್ಚು ಮಣೆ?

ಕಿಟಕಿ ಬಾಗಿಲು ಹಾಕಿಕೊಳ್ಳಿ ಎಂದರೆ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾರೆ!

ದಿನಾ ಇಂತಹ ದೃಶ್ಯಗಳನ್ನು ನೋಡಿ ಸಾಕಾಗಿದ್ದ ಮಹಿಳೆ ಕಿಟಕಿ ಬಾಗಿಲು ಮುಚ್ಚಿಕೊಳ್ಳುವಂತೆ ಸೂಚಿಸಿದ್ದರಂತೆ.. ಆದ್ರೆ ಇದಕ್ಕೆ ಪಕ್ಕದ ಮನೆಯವರು ವಿರೋಧ ವ್ಯಕ್ತಪಡಿಸಿದ್ದಾರೆ.. ಪಕ್ಕದ ಮನೆಯ ವ್ಯಕ್ತಿ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.. ಮಹಿಳೆ ಹಾಗೂ ಕುಟುಂಬದ ಸದಸ್ಯರನ್ನು ನಿಂದಿಸಿದ್ದಲ್ಲದೆ, ಅತ್ಯಾಚಾರ ಎಸಗಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆಂದೂ ಮಹಿಳೆ ದೂರಿದ್ದಾಳೆ. ಇದರ ಜೊತೆಗೆ ಪಕ್ಕದ ಮನೆಯ ಮಾಲೀಕ ಚಿಕ್ಕಣ್ಣ ಮತ್ತು ಅವರ ಮಗ ಮಂಜುನಾಥ್, ದೂರು ಕೊಟ್ಟು ಮಹಿಳೆ ಕುಟುಂಬದ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ ಎಂದೂ ಹೇಳಲಾಗಿದೆ.

ಇದನ್ನೂ ಓದಿ; ಮನೆಯಲ್ಲೇ ತಯಾರಿಸಬಹುದು ಪ್ರೊಟೀನ್ ಪೌಡರ್

ಕೆಲ ಯುವಕರನ್ನು ಕರೆಸಿ ನಿಂದನೆ;

ಈ ಗಲಾಟೆ ತೀವ್ರವಾಗಿದ್ದು, ಪಕ್ಕದ ಮನೆಯವರು ಕೆಲ ಯುವಕರನ್ನು ಕರೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ.. ಜೊತೆಗೆ ನನ್ನ ಕುಟುಂಬಕ್ಕೆ ಬೆದರಿಕೆ ಕೂಡಾ ಹಾಕಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ.. ಸೂಕ್ತ ರಕ್ಷಣೆ ನೀಡುವಂತೆಯೂ ಮನವಿ ಮಾಡಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ  ಐಪಿಸಿ ಸೆಕ್ಷನ್ 504, 506, 509, 34ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಆರೋಪಿಗಳ ಸಮಜಾಯಿಷಿ ಏನು..?;

ಮಹಿಳೆ ಪಕ್ಕದ ಮನೆಯ ದಂಪತಿಯ ಸರಸ ಸಲ್ಲಾಪದ ಆರೋಪ ಮಾಡುತ್ತಿದ್ದಾರೆ. ಆದ್ರೆ ಪಕ್ಕದ ಮನೆಯವರ ಸಮಜಾಯಿಷಿ ಏನು ಅನ್ನೋದು ಇನ್ನೂ ಗೊತ್ತಿಲ್ಲ.. ಸೂಕ್ತ ವಿಚಾರಣೆಯಿಂದ ನಿಜ ವಿಷಯ ಬಯಲಾಗಲಿದೆ..

ಇದನ್ನೂ ಓದಿ; ನಟಿ ಅರುಂಧತಿ ನಾಯರ್‌ಗೆ ಅಪಘಾತ; ತಲೆಗೆ ಪೆಟ್ಟು ಬಿದ್ದು ಪರಿಸ್ಥಿತಿ ಚಿಂತಾಜನಕ

Share Post