Politics

ಈಶ್ವರಪ್ಪ ಸ್ಪರ್ಧೆಯಿಂದ ಹಿಂದೆ ಸರಿಯಲ್ಲ; ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು..?

ಶಿವಮೊಗ್ಗ; ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಈಶ್ವರಪ್ಪ ಅವರ ಜೊತೆ ಮಾತನಾಡಿದ್ದಾರೆ. ಬಂಡಾಯ ಶಮನ ಮಾಡಿದ್ದಾರೆ ಎಂದು ಹೇಳಲಾಗಿತ್ತು.. ಆದ್ರೆ, ಈಶ್ವರಪ್ಪ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದು, ಅವರು ಹೇಳಿದ್ದೇ ಬೇರೆ ಇದೆ.. ಈಶ್ವರಪ್ಪ ಅವರು ಬಂಡಾಯ ಸ್ಪರ್ಧೆಯಿಂದ ಹಿಂದೆ ಸರಿಯುವುದು ಡೌಟು ಅನ್ನೋದು ಅವರ ಸುದ್ದಿಗೋಷ್ಠಿಯಿಂದಲೇ ಗೊತ್ತಾಗಿದೆ..

ಇದನ್ನೂ ಓದಿ; ನಿಮಗೆ ಕನಸಲ್ಲಿ ಇದೆಲ್ಲಾ ಕಾಣ್ತಿದೆಯಾ..?; ಹಾಗಾದ್ರೆ ಸಿರಿ, ಸಂಪತ್ತು ನಿಮ್ಮದಾಗಲಿದೆ!

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದ ಈಶ್ವರಪ್ಪ ಅವರು ಅಮಿತ್‌ ಶಾ ಅವರು ನನಗೆ ಕರೆ ಮಾಡಿದ್ದರು.. ನೀವು ಹಿರಿಯರಾಗಿದ್ದೀರಿ.. ಯಾಕೆ ಹೀಗೆ ಬಂಡಾಯವಾಗಿ ಸ್ಪರ್ಧೆ ಮಾಡುತ್ತಿದ್ದೀರಿ ಎಂದು ಕೇಳಿದರು.. ಆಗ ನಾನು ಸ್ಪರ್ಧೆ ಮಾಡುತ್ತಿರುವುದಕ್ಕೆ ಕಾರಣವನ್ನು ತಿಳಿಸಿದ್ದೇನೆ.. ಸ್ಪಷ್ಟವಾಗಿ ಅವರಿಗೆ ಮನವಿ ಮಾಡಿಕೊಟ್ಟಿದ್ದೇನೆ ಎಂದು ಈಶ್ವರಪ್ಪ ಹೇಳಿದ್ದಾರೆ..

ಇದನ್ನೂ ಓದಿ; ಸಹೋದ್ಯೋಗಿ ಹೆರಿಗೆ ರಜೆಗೆ ಹೋಗುವುದನ್ನು ತಡೆಯಲು ನೀರಲ್ಲಿ ವಿಷ ಬೆರೆಸಿದ ಉದ್ಯೋಗಿ!

ಕುಟುಂಬ ರಾಜಕೀಯ ಹೋಗಬೇಕು ಎಂದು ಪ್ರಧಾನಿ ಮೋದಿಯವರು ಯಾವಾಗಲೂ ಹೇಳುತ್ತಾ ಬಂದಿದ್ದಾರೆ.. ಅದರಂತೆ ನಾನು ರಾಜ್ಯದಲ್ಲಿ ಕುಟುಂಬ ರಾಜಕೀಯಕ್ಕೆ ಮುಕ್ತಿ ಕೊಡಿಸಲು ಹೊರಟಿದ್ದೇನೆ.. ಅದಕ್ಕಾಗಿಯೇ ಈ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಅಮಿತ್‌ ಶಾಗೆ ಹೇಳಿರುವುದಾಗಿ ಈಶ್ವರಪ್ಪ ಹೇಳಿದ್ದಾರೆ.. ಇನ್ನು, ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಸಾಕಷ್ಟು ನೊಂದಿದ್ದಾರೆ.. ನಿಜವಾದ ಕಾರ್ಯಕರ್ತರಿಗೆ ಅವಕಾಶ ಸಿಗುತ್ತಿಲ್ಲ.. ಈ ಹಿನ್ನೆಲೆಯಲ್ಲಿ ನಾನು ಕಾರ್ಯಕರ್ತರಿಗೆ ನ್ಯಾಯ ಕೊಡಿಸುವುದಕ್ಕಾಗಿ ಈ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಅಮಿತ್‌ ಶಾಗೆ ಹೇಳಿರುವುದಾಗಿ ಈಶ್ವರಪ್ಪ ಹೇಳಿಕೊಂಡಿದ್ದಾರೆ..

ಇದನ್ನೂ ಓದಿ; ಕೋತಿಗಳಂತೆ ನಡೆಯುತ್ತಾರೆ ಈ ಜನ; ಪ್ರಪಂಚದಲ್ಲೇ ವಿಚಿತ್ರ ಕುಟುಂಬವಿದು!

ಇನ್ನು ನಾನು ಹಿಂದುತ್ವದ ಪರವಾಗಿ ಹೋರಾಟ ಮಾಡುತ್ತಿದ್ದೇನೆ.. ಹಿಂದೂಧರ್ಮವನ್ನು ಉಳಿಸುವುದು ನಮ್ಮ ಧ್ಯೇಯ.. ಅದಕ್ಕಾಗಿ ನಾವು ಸ್ಪರ್ಧೆ ಮಾಡುತ್ತಿದ್ದೇವೆ.. ಹಿಂದೂ ಧರ್ಮದ ಪರ ಹೋರಾಟ ಮಾಡುವವರನ್ನು ತುಳಿಯಲಾಗುತ್ತಿದೆ.. ನಾನು ಅಂತಹ  ನೊಂದವರ ಪರವಾಗಿ ಸ್ಪರ್ಧೆ ಮಾಡಿದ್ದೇನೆ ಎಂದು ಅಮಿತ್‌ ಶಾಗೆ ಹೇಳಿದ್ದೇನೆ ಎಂದು ಈಶ್ವರಪ್ಪ ಹೇಳಿದರು..

ಹಿಂದುಳಿದ ವರ್ಗಗಳವರಿಗೆ ಸೂಕ್ತ ಸ್ಥಾನಮಾನಗಳನ್ನು ಕೊಟ್ಟಿಲ್ಲ.. ಲೋಕಸಭಾ ಚುನಾವಣೆಯಲ್ಲೂ ಕಡೆಗಣಿಸಲಾಗಿದೆ.. ಹೀಗಾಗಿ ಹಿಂದುಳಿದ ವರ್ಗಗಳ ಪ್ರತಿನಿಧಿಯಾಗಿ ನಾನು ಕೆಲಸ ಮಾಡಲು ಈ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾಗಿ ಈಶ್ವರಪ್ಪ ಹೇಳಿದ್ದಾರೆ..

ಇದನ್ನೂ ಓದಿ; ಮೈಸೂರಿನಲ್ಲಿ ನಾಮಪತ್ರ ಸಲ್ಲಿಸಿದ ಯದುವೀರ್‌; ಅವರ ಆಸ್ತಿ ಎಷ್ಟಿದೆ ಗೊತ್ತಾ..?

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಚುನಾವಣಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ.. ಅವರು ಅಸಮಾಧಾನಿತ ನಾಯಕರಿಗೆ ಇಂದು ಕರೆ ಮಾಡಿ ಮಾತನಾಡಿದ್ದಾರೆ.. ಇದೇ ವೇಳೆ ಈಶ್ವರಪ್ಪ ಅವರಿಗೂ ಕರೆ ಮಾಡಿ ಮಾತನಾಡಿದ್ದಾರೆ.. ಈ ವೇಳೆ ಈಶ್ವರಪ್ಪ ಅವರು ಸಂಧಾನಕ್ಕೆ ಒಪ್ಪಿದ್ದಾರೆ. ಕಣದಿಂದ ಹಿಂದೆ ಸರಿಯುತ್ತಾರೆ ಎಂದೇ ಎಲ್ಲರೂ ಹೇಳುತ್ತಿದ್ದರು.. ಆದ್ರೆ ಈಶ್ವರಪ್ಪ ಅವರು ಅಚಲ ನಿರ್ಧಾರ ಹೊಂದಿದ್ದಾರೆ. ಸ್ಪರ್ಧೆ ಮಾಡಿಯೇ ತೀರುತ್ತೇನೆ ಎಂದು ಅವರು ಹೇಳುತ್ತಿದ್ದಾರೆ..

ಇದನ್ನೂ ಓದಿ; ಡಾ.ಕೆ.ಸುಧಾಕರ್‌ ಹೆಜ್ಜೆ ಇಟ್ಟಲ್ಲೆಲ್ಲಾ ಮುಳ್ಳು!; ಚಿಕ್ಕಬಳ್ಳಾಪುರದ ಅಗ್ನಿಪರೀಕ್ಷೆ ಗೆಲ್ತಾರಾ ಮಾಜಿ ಸಚಿವ..?

Share Post