ಹಳೇ ಸ್ನೇಹಿತರ ಒಗ್ಗೂಡಿಸುತ್ತಿರುವ ಸಿದ್ದರಾಮಯ್ಯ; ಬಸವೇಗೌಡ ಕಾಂಗ್ರೆಸ್ ಸೇರ್ಪಡೆ
ಬೆಂಗಳೂರು; ಇದು ಕೊನೆಯ ಚುನಾವಣೆ, ಭಾರಿ ಬಹುಮತದಲ್ಲಿ ಗೆಲ್ಲಲೇಬೇಕು ಎಂದು ಪಣ ತೊಟ್ಟಿರುವ ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜಕೀಯ ತಂತ್ರಕಾರಿಗೆ ಶುರು ಮಾಡಿದ್ದಾರೆ. ನಿನ್ನೆಯಷ್ಟೇ ವರುಣಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿ ಬಂದಿರುವ ಸಿದ್ದರಾಮಯ್ಯ ಅವರು ದೂರವಾಗಿದ್ದ ಹಳೇ ಸ್ನೇಹಿತರನ್ನೆಲ್ಲಾ ಒಟ್ಟಿಗೆ ಸೇರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದರ ಭಾಗವಾಗಿ, ಸಿದ್ದರಾಮಯ್ಯ ಅವರ ಹಳೆಯ ಸ್ನೇಹಿತ ಸಿ.ಬಸವೇಗೌಡ ಅವರು ಇಂದು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಬಸವೇಗೌಡ ಅವರನ್ನು ಕಾಂಗ್ರೆಸ್‌ಗೆ ಬರಮಾಡಿಕೊಳ್ಳಲಾಗಿದೆ. ಈ ವೇಳೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಂತಾದವರು ಇದ್ದರು.
ಬಸವರೇಗೌಡ ಅವರು ಮೈಸೂರು ಭಾಗದಲ್ಲಿ ಹಿರಿಯ ರಾಜಕಾರಣಿ. ಸಿದ್ದರಾಮಯ್ಯ ಅವರು ಜನತಾ ಪರಿವಾರದಲ್ಲಿದ್ದಾಗ ಅವರ ಜೊತೆ ಇದ್ದರು. ಅನಂತರ ಅವರು ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದ ಮೇಲೆ ಕಾಂಗ್ರೆಸ್‌ಗೆ ಬಂದಿದ್ದರು. ಆದ್ರೆ ಶ್ರೀನಿವಾಸ ಪ್ರಸಾದ್ ಅವರನ್ನು ಕಡೆಗಣಿಸಿದ ಕಾರಣದಿಂದಾಗಿ ಅವರು ಕಾಂಗ್ರೆಸ್ ತೊರೆದಿದ್ದರು. ಶ್ರೀನಿವಾಸ ಪ್ರಸಾದ್ ಅವರು ಜೊತೆ ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಈ ಹಿಂದೆ ಮೂಡಾ ಅಧ್ಯಕ್ಷರೂ ಆಗಿದ್ದ ಬಸವೇಗೌಡರಿಗೆ ಸಾಕಷ್ಟು ರಾಜಕೀಯ ಅನುಭವವಿದೆ. ಆದ್ರೆ ಬಿಜೆಪಿ ಸೇರಿದ ಮೇಲೂ ಅವರಿಗೆ ಅಲ್ಲೂ ಯಾವುದೇ ಬದಲಾವಣೆ ಕಂಡಿರಲಿಲ್ಲ. ಹೀಗಾಗಿ ಅವರು ತಟಸ್ಥವಾಗಿದ್ದರು. ಹೀಗಾಗಿ ಸಿದ್ದರಾಮಯ್ಯ ಅವರು ತಮ್ಮ ಹಳೇ ಸ್ನೇಹಿತನ ಮನೆಗೆ ಹೋಗಿ ಕುಟುಂಬದವರ ಜೊತೆ ಮಾತನಾಡಿದ್ದಾರೆ. ಎರಡು ಗಂಟೆಗಳ ಕಾಲ ಬಸವೇಗೌಡರ ಕುಟುಂಬದ ಜೊತೆ ಮಾತನಾಡಿರುವ ಸಿದ್ದರಾಮಯ್ಯ, ಕಾಂಗ್ರೆಸ್‌ಗೆ ಬರುವಂತೆ ಒಪ್ಪಿಸಿ ಕರೆತಂದಿದ್ದಾರೆ.