Politics

ಡಾ.ಕೆ.ಸುಧಾಕರ್‌ ಹೆಜ್ಜೆ ಇಟ್ಟಲ್ಲೆಲ್ಲಾ ಮುಳ್ಳು!; ಚಿಕ್ಕಬಳ್ಳಾಪುರದ ಅಗ್ನಿಪರೀಕ್ಷೆ ಗೆಲ್ತಾರಾ ಮಾಜಿ ಸಚಿವ..?

ಬೆಂಗಳೂರು; ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ತೀವ್ರ ಕುತೂಹಲ ಕೆರಳಿಸುತ್ತಿದೆ.. ಯಾಕಂದ್ರೆ ಇಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್‌ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.. ವಿಧಾನಸಭಾ ಚುನಾವಣೆ ಸೋತ ಮೇಲೆ ಮಂಕಾಗಿದ್ದ ಸುಧಾಕರ್‌ ಈಗ ಲೋಕಸಭೆಗೆ ಟಿಕೆಟ್‌ ಗಿಟ್ಟಿಸಿಕೊಂಡು ಉತ್ಸಾಹದಿಂದ ಓಡಾಡುತ್ತಿದ್ದಾರೆ.. ಹಲವು ಕಾರಣಗಳಿಗಾಗಿ ಈ ಚುನಾವಣೆ ಗೆಲ್ಲಲೇಬೇಕಾದ ಅನಿವಾರ್ಯತೆ ಸುಧಾಕರ್‌ಗಿದೆ.. ಆದ್ರೆ ಬಿಜೆಪಿ ಟಿಕೆಟ್‌ ಗಿಟ್ಟಿಸಿಕೊಂಡಾಗಿನಿಂದ ಡಾ.ಕೆ.ಸುಧಾಕರ್‌ ಹೆಜ್ಜೆ ಇಟ್ಟಲ್ಲೆಲ್ಲಾ ಮುಳ್ಳುಗಳೇ ಕಾಣಿಸುತ್ತಿವೆ.. ಪ್ರತಿದಿನವೂ ಅವರಿಗೊಂದು ಸವಾಲು.. ಇದನ್ನು ಅವರು ಹೇಗೆ ಎದುರಿಸುತ್ತಾರೆ..? ಹೇಗೆ ಗೆಲುವಿನ ದಡ ಸೇರುತ್ತಾರೆ ಅನ್ನೋದೇ ಪ್ರಶ್ನೆ..

ಇದನ್ನೂ ಓದಿ; ಬಿಸಿಲಲ್ಲಿ ನೀವು ಮಾಡುವ ಮಿಸ್ಟೇಕ್‌ ಕ್ಯಾನ್ಸರ್‌ಗೆ ಕಾರಣವಾಗುತ್ತೆ ಹುಷಾರ್‌!

ಮೊದಲ ದಿನವೇ ಎದುರಾಗಿತ್ತು ವಿರೋಧ;

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್‌ಗಾಗಿ ಡಾ.ಕೆ.ಸುಧಾಕರ್‌ ಹಾಗೂ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಮಗ ಅಲೋಕ್‌ ವಿಶ್ವನಾಥ್‌ ನಡುವೆ ಫೈಟ್‌ ಇತ್ತು.. ಬಿಜೆಪಿಯ ಕೆಲ ನಾಯಕರು ಹಾಗೂ ಜೆಡಿಎಸ್‌ ವರಿಷ್ಠರ ಅಶೀರ್ವಾದ ಸಿಕ್ಕಿದ್ದರಿಂದ ಸುಧಾಕರ್‌ ಅವರಿಗೆ ಟಿಕೆಟ್‌ ಸಿಕ್ಕಿದೆ.. ಟಿಕೆಟ್ಟೇನೋ ಗಿಟ್ಟಿಸಿಕೊಂಡಿದ್ದಾರೆ.. ಆದ್ರೆ ಮುಂದೆ ಎದುರಾಗುತ್ತಿರುವ ಸವಾಲುಗಳನ್ನು ಎದುರೋದೇ ದೊಡ್ಡ ಸವಾಲು.. ಯಾಕಂದ್ರೆ, ಟಿಕೆಟ್‌ ಘೋಷಣೆಯಾದ ಮಾರನೇ ದಿನವೇ ಸುಧಾಕರ್‌ ಅವರು ನೆಲಮಂಗಲ ಹಾಗೂ ದೊಡ್ಡಬಳ್ಳಾಪುರಗಳಲ್ಲಿ ಸಭೆಗಳನ್ನು ನಡೆಸಿದ್ದರು.. ಈ ವೇಳೆ ಸುಧಾಕರ್‌ಗೆ ಬಿಜೆಪಿ ಕಾರ್ಯಕರ್ತರೇ ವಿರೋಧ ವ್ಯಕ್ತಪಡಿಸಿದ್ದರು.. ಗೋ ಬ್ಯಾಕ್‌ ಸುಧಾಕರ್‌ ಘೋಷಣೆಗಳನ್ನು ಕೂಗಿದ್ದರು… ಓ ನಲ್ಲ ನೀನಲ್ಲ.. ಚಿಕ್ಕಬಳ್ಳಾಪುರಕ್ಕೆ ನೀ ಲಾಯಕ್ಕಲ್ಲ ಎಂದು ಘೋಷಣೆಗಳನ್ನು ಕೂಗಿದ್ದರು.. ಅದನ್ನು ಶಾಂತಚಿತ್ತದಿಂದಲೇ ಸುಧಾಕರ್‌ ಎದುರಿಸಿದ್ದರು..

ಇದನ್ನೂ ಓದಿ; ಅಪ್ಪನಂತೆ ಕುದುರೆ ಸವಾರಿಗಿಳಿದ ನಟ ದರ್ಶನ್‌ ಮಗ ವಿನೀಶ್‌; ವಿಡಿಯೋ ವೈರಲ್‌

ಜೆಡಿಎಸ್‌ ನಾಯಕರು ಬೆಂಬಲ ನೀಡಲು ಹಿಂದೆ ಮುಂದೆ;

ಹೀಗಿರುವಾಗಲೇ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಜೆಡಿಎಸ್‌ ನಾಯಕರು ಕೂಡಾ ಡಾ.ಕೆ.ಸುಧಾಕರ್‌ಗೆ ಬೆಂಬಲ ವ್ಯಕ್ತಪಡಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ.. ಅದ್ರಲ್ಲೂ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಮಾಜಿ ಶಾಸಕ ಬಚ್ಚೇಗೌಡ ಅವರು, ಯಾವುದೇ ಕಾರಣಕ್ಕೂ ಸುಧಾಕರ್‌ಗೆ ಬೆಂಬಲವಿಲ್ಲ ಎಂದು ಹೇಳಿದ್ದಾರೆ.. ಅಷ್ಟೇ ಏಕೆ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.. ಇದೇ ವೇಳೆ ಮಾತನಾಡಿರುವ ಮಾಜಿ ಶಾಸಕ ಬಚ್ಚೇಗೌಡ ಅವರು, ಬಿಜೆಪಿ ಅಭ್ಯರ್ಥಿ ಡಾಕೆ ಸುಧಾಕರ್ ನಿಂದ ಸಾಕಷ್ಟು ನೋವು, ಸುಳ್ಳು ಕೇಸ್ ಗಳನ್ನು ಹಾಕಿಸಿಕೊಂಡಿದ್ದೇವೆ.. ಕಳೆದ 10 ತಿಂಗಳಿನಿಂದ ಕ್ಷೇತ್ರದಲ್ಲಿ ಸಾಕಷ್ಟು ನೆಮ್ಮದಿಯಿಂದ ಇದ್ದೇವೆ.. ಹೀಗಾಗಿ ಯಾವುದೇ ಕಾರಣಕ್ಕೂ ಸುಧಾಕರ್‌ ಗೆಲ್ಲಬಾರದು.. ಈ ಕಾರಣಕ್ಕಾಗಿ ನಾನು ಕಾಂಗ್ರೆಸ್‌ ಸೇರುತ್ತಿದ್ದೇನೆ.. ಅದರಂತೆ ಇಂದು ಕಾಂಗ್ರೆಸ್ ಸೇರ್ಪಡೆಗೊಂಡು ಅಭ್ಯರ್ಥಿ ರಕ್ಷಾ ರಾಮಯ್ಯನಿಗೆ ಬೆಂಬಲ ಸೂಚಿಸುತ್ತಿದ್ದೇವೆ ಎಂದು ಬಚ್ಚೇಗೌಡ ಹೇಳಿದ್ದಾರೆ..

ಇದನ್ನೂ ಓದಿ; ವಿದ್ಯುತ್‌ ಬಳಕೆದಾರರಿಗೆ ಗುಡ್‌ ನ್ಯೂಸ್‌; ಇಂದಿನಿಂದ ದರ ಕಡಿತ!

ಮನೆಯಲ್ಲಿದ್ದರೂ ಇಲ್ಲ ಎಂದ ಶಾಸಕ ಎಸ್‌.ಆರ್‌.ವಿಶ್ವನಾಥ್‌;

ಇನ್ನು ಯಲಹಂಕ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರು ತಮ್ಮ ಮಗ ಅಲೋಕ್‌ ವಿಶ್ವನಾಥ್‌ಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್‌ ಕೇಳಿದ್ದರು.. ಆದ್ರೆ ಅವರಿಗೆ ಟಿಕೆಟ್‌ ಕೈತಪ್ಪಿದೆ.. ಈ ಹಿನ್ನೆಲೆಯಲ್ಲಿ ವಿಶ್ವನಾತ್‌ ಅವರು ಮುನಿಸಿಕೊಂಡಿದ್ದಾರೆ.. ಈ ನಡುವೆಯೇ ಡಾ.ಕೆ.ಸುಧಾಕರ್‌ ಅವರು ಎಸ್‌.ಆರ್‌.ವಿಶ್ವನಾಥ್‌ ಅವರ ಮನವೊಲಿಸಲು ಅವರ ಮನೆಗೆ ಬಂದಿದ್ದರು.. ಆದ್ರೆ ಮನೆಯಲ್ಲೇ ವಿಶ್ವನಾತ್‌ ಇದ್ದರೂ ಇಲ್ಲ ಎಂದು ಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ.. ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಇಂದು ಸುದ್ದಿಘೋಷ್ಠಿ ನಡೆಸಿದರು.. ವಿಶ್ವನಾಥ್‌ ಮನೆಗೆ ಭೇಟಿಯಾಗಲು ಬರುತ್ತೇನೆ ಎಂದು ಕರೆ ಮಾಡಿದ್ದೆ. ಆದ್ರೆ ಅವರು ಪ್ರತಿಕ್ರಿಯೆ ನೀಡಲಿಲ್ಲ. ಎಂದು ಸುಧಾಕರ್‌ ಆರೋಪ ಮಾಡಿದ್ದರು.. ಇದಕ್ಕೆ ಪ್ರತಿಕ್ರಿಯೆ ನೀಡಿದ ಎಸ್‌.ಆರ್‌.ವಿಶ್ವನಾಥ್‌ ಅವರು ದಯವಿಟ್ಟು ಅವರ ಕಾಲ್ ಡಿಟೇಲ್ಸ್ ತೆಗೆಸಿಕೊಡಿ. ಅವರು ಒಂದು ಪಕ್ಷ ತನಗೆ ಕಾಲ್ ಮಾಡಿದ್ದಾರೆ ಅಂತ ಅದರಲ್ಲಿ ಸಾಬೀತಾದರೆ, ಯಲಹಂಕ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ ಎಂದು ಸವಾಲು ಹಾಕಿದ್ದಾರೆ.. ಸುಧಾಕರ್ ಅವರು ಈ ಬಗೆಯ ಗಿಮಿಕ್ ಮಾಡಿ ಜನರ ಸಹಾನುಭೂತಿ ಗಿಟ್ಟಿಸುವ ಪ್ರಯತ್ನ ಮಾಡುವುದು ಬೇಡ ಎಂದೂ ಶಾಸಕ ಎಸ್‌.ಆರ್‌.ವಿಶ್ವನಾತ್‌ ಹೇಳಿದ್ದಾರೆ.. ಸುಧಾಕರ್ ಕಳೆದ 5-6 ದಿನಗಳಲ್ಲಿ ಒಂದು ಮೆಸೇಜ್ ಕಳಿಸಿದ್ದು ಬಿಟ್ರೆ ಅವರ ಮತ್ತು ತನ್ನ ನಡುವೆ ಯಾವುದೇ ಕಮ್ಯುನಿಕೇಶನ್ ನಡೆದೇ ಇಲ್ಲ ಅಂತಾನೂ ವಿಶ್ವನಾಥ್‌ ಹೇಳಿದ್ದಾರೆ..

ಇದನ್ನೂ ಓದಿ; PF ಹೊಸ ರೂಲ್ಸ್; ಉದ್ಯೋಗಿಗಳಿಗೆ ಇದು ಗುಡ್ ನ್ಯೂಸ್

ಸೈಲೆಂಟ್‌ ಆದ್ರಾ ನವೀನ್‌ ಕಿರಣ್‌..?;

ಇನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ 1 ಲಕ್ಷ 80 ಸಾವಿರದಷ್ಟು ಬಲಿಜ ಸಮುದಾಯದ ಮತಗಳಿವೆ.. ಬಲಿಜ ಸಮುದಾಯದ ಅತಿದೊಡ್ಡ ನಾಯಕನಾದ ನವೀನ್‌ ಕಿರಣ್‌ ಅವರು ಇಷ್ಟು ದಿನ ಸುಧಾಕರ್‌ ಜೊತೆಗಿದ್ದರು.. ಕಾಂಗ್ರೆಸ್‌ ತೊರೆದು ಅವರು ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಬಿಜೆಪಿ ಸೇರಿದ್ದರು.. ಆದ್ರೆ ಯಾವಾಗ ಬಲಿಜ ಸಮುದಾಯದ ನಾಯಕ ರಕ್ಷಾ ರಾಮಯ್ಯಗೆ ಕಾಂಗ್ರೆಸ್‌ ಟಿಕೆಟ್‌ ಅನೌನ್ಸ್‌ ಆಯ್ತೋ ಅಂದಿನಿಂದ ನವೀನ್‌ ಕಿರಣ್‌ ಸೈಲೆಂಟ್‌ ಆದಂತೆ ಕಾಣುತ್ತಿದೆ.. ನೋಡುತ್ತಿದ್ದರೆ ಅವರೂ ಕೂಡಾ ಕೊನೇ ಹಂತದಲ್ಲಿ ಕಾಂಗ್ರೆಸ್‌ ಸೇರಿ ರಕ್ಷಾ ರಾಮಯ್ಯ ಪರ ಪ್ರಚಾರಕ್ಕೆ ನಿಲ್ಲಲೂ ಬಹುದು..

ಇದನ್ನೂ ಓದಿ; ಬಾಡಿಗೆ ವಿಲ್ಲಾದಲ್ಲಿ ನೀಲಿ ಚಿತ್ರ ಚಿತ್ರೀಕರಣ; ಬಲೆಗೆ ಬಿತ್ತು ಖತರ್ನಾಕ್‌ ಗ್ಯಾಂಗ್‌

ಎನ್‌.ಹೆಚ್‌.ಶಿವಶಂಕರರೆಡ್ಡಿ ಜೊತೆ ಕಿತ್ತಾಡಿಕೊಂಡಿದ್ದ ಸುಧಾಕರ್‌;

ಡಾ.ಕೆ.ಸುಧಾಕರ್‌ ಅವರು ಸಚಿವರಾಗಿದ್ದಾಗ ಕಾಂಗ್ರೆಸ್‌ ನಾಯಕ ಹಾಗೂ ಗೌರಿಬಿದನೂರಿನ ಮಾಜಿ ಶಾಸಕ ಎನ್‌.ಹೆಚ್‌.ಶಿವಶಂಕರರೆಡ್ಡಿ ಜೊತೆ ಕಿತ್ತಾಡಿಕೊಂಡಿದ್ದರು… ವೇದಿಕೆಗಳಲ್ಲಿ ಇಬ್ಬರು ನಡುವೆ ದೊಡ್ಡ ದೊಡ್ಡ ವಾಕ್ಸಮರಗಳೇ ನಡೆದಿದ್ದವು.. ಎನ್‌.ಹೆಚ್‌.ಶಿವಶಂಕರರೆಡ್ಡಿ ಯವರು ಕೂಡಾ ಕಾಂಗ್ರೆಸ್‌ ಟಿಕೆಟ್‌ ಬಯಸಿದ್ದರು.. ಆದ್ರೆ ಟಿಕೆಟ್‌ ಸಿಕ್ಕಿಲ್ಲ.. ಒಂದು ವೇಳೆ ಸುಧಾಕರ್‌ ಜೊತೆ ಶಿವಶಂಕರರೆಡ್ಡಿ ಚೆನ್ನಾಗಿದ್ದಿದ್ದರೆ, ಸುಧಾಕರ್‌ ಅವರ ಬೆಂಬಲ ಕೋರಬಹುದಿತ್ತು.. ಆದ್ರೆ ಈಗ ಸುಧಾಕರ್‌ಗೆ ಎನ್‌.ಹೆಚ್‌.ಶಿವಶಂಕರರೆಡ್ಡಿ ಬೆಂಬಲಿ ಸಿಗೋದು ಕಷ್ಟ ಕಷ್ಟ ಎಂದೇ ಹೇಳಲಾಗುತ್ತಿದೆ.. ಟಿಕೆಟ್‌ ಕೈತಪ್ಪಿದ್ದರೂ ಕೂಡಾ ಶಿವಶಂಕರರೆಡ್ಡಿ ಮುಂದೆ ಕಾಂಗ್ರೆಸ್‌ ಅಭ್ಯರ್ಥಿ ಪರ ಕೆಲಸ ಮಾಡಿ ಸುಧಾಕರ್‌ ಸೋಲಿಗೆ ಶ್ರಮಿಸುವ ಸಾಧ್ಯತೆಯೇ ಹೆಚ್ಚಿದೆ..

ಇದನ್ನೂ ಓದಿ; 12 ಕ್ಷೇತ್ರಗಳಲ್ಲಿ ರಾಜವಂಶಸ್ಥರನ್ನು ಕಣಕ್ಕಿಳಿಸಿದ ಬಿಜೆಪಿ; ಯಾರು ಅವರು..?

ಧೀರಜ್‌ ಮುನಿರಾಜುಗೆ ಟಿಕೆಟ್‌ ಬೇಡ ಎಂದಿದ್ದರಾ ಸುಧಾಕರ್‌..?;

ಇನ್ನು ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಶಾಸಕರಿದ್ದಾರೆ.. ಧೀರಜ್‌ ಮುನಿರಾಜು ಅವರು ದೊಡ್ಡಬಳ್ಳಾಪುರದಿಂದ ಟಿಕೆಟ್‌ ಬಯಸಿದಾಗ ಸುಧಾಕರ್‌ ಅವರು ಧೀರಜ್‌ಗೆ ಟಿಕೆಟ್‌ ಬೇಡ ಎಂದಿದ್ದರು ಎಂಬ ಆರೋಪವಿದೆ.. ಅದೆಷ್ಟು ನಿಜವೋ ಸುಳ್ಳೋ ಗೊತ್ತಿಲ್ಲ.. ಆದ್ರೆ ಸದ್ಯಕ್ಕೆ ಧೀರಜ್‌ ಮುನಿರಾಜು, ಸುಧಾಕರ್‌ ಪರ ನಿಂತಿದ್ದಾರೆ.. ಆದ್ರೆ ಒಳಗೊಳಗೆ ಏನು ನಡೆಯುತ್ತದೋ ಗೊತ್ತಿಲ್ಲ… ಇನ್ನು ದೊಡ್ಡಬಳ್ಳಾಪುರದಲ್ಲಿ ಜಾಲಪ್ಪ ಪುತ್ರ ನರಸಿಂಹಸ್ವಾಮಿ ನಡೆ ಏನು ಅನ್ನೋದು ಕೂಡಾ ಕುತೂಹಲಕ್ಕೆ ಕಾರಣವಾಗಿದೆ..

ಇದನ್ನೂ ಓದಿ; ಕಣದಲ್ಲಿರುವ ಮೂರೂ ಪಕ್ಷಗಳ ಅಭ್ಯರ್ಥಿಗಳ ಯಾರು..?; 28 ಕ್ಷೇತ್ರಗಳ ಫುಲ್‌ ಡಿಟೇಲ್ಸ್‌

ಎಲ್ಲರನ್ನೂ ಸೆಳೆದಿದ್ದ ಸುಧಾಕರ್‌ಗೆ ಯಾಕಿಷ್ಟು ವಿರೋಧ..?

ಸುಧಾಕರ್‌ ಅವರು ಚಿಕ್ಕಬಳ್ಳಾಪುರ ವಿಧಾನಸಭಾ ಚುನಾವಣೆಗೆ ಮೊದಲ ಬಾರಿ ನಿಂತಾಗ ಕ್ಷೇತ್ರದಲ್ಲಿರುವ ಬಹುತೇಕ ಜೆಡಿಎಸ್‌ ಮುಖಂಡರನ್ನು ಸೆಳೆದಿದ್ದರು.. ಜೆಡಿಎಸ್‌ ಹೇಳಿಕೊಳ್ಳೋದಕ್ಕೆ ಒಬ್ಬ ಮುಖಂಡನೂ ಇಲ್ಲದಂತೆ ಮಾಡಿದ್ದರು.. ನಂತರ ಅವರು ಬಿಜೆಪಿಗೆ ಹೋದಾಗಲೂ, ಎರಡೂ ಪಕ್ಷದವರನ್ನು ಕರೆದುಕೊಂಡು ಬಿಜೆಪಿಗೆ ಹೋಗಿದ್ದರು.. ಚಿಕ್ಕ ವಯಸ್ಸಿನಲ್ಲೇ ಭಾರಿ ರಾಜಕೀಯ ತಂತ್ರಗಾರಿಕೆ ಗೊತ್ತಿದ್ದ ಸುಧಾಕರ್‌ ಅಂದ್ರೆ ಎಲ್ಲರೂ ಜೈ ಎನ್ನುತ್ತಿದ್ದರು.. ಆದ್ರೆ ಒಂದೇ ಒಂದು ಸೋಲು ಸುಧಾಕರ್‌ಗೆ ಈ ಮಟ್ಟಕ್ಕೆ ತಂದು ನಿಲ್ಲಿಸಿದೆ.. ಹಾಗಂತ, ಸುಧಾಕರ್‌ ಶಕ್ತಿಹೀನರಾಗಿದ್ದಾರೆ ಎಂದೇನೂ ಇಲ್ಲ.. ಅವರ ತಂತ್ರಗಾರಿಕೆಗಳು ಯಾರಿಗೂ ಅರ್ಥವಾಗೋದಿಲ್ಲ.. ಯಾವಾಗ ಯಾರನ್ನು ಬೇಕಾದರೂ ಸೆಳೆಯುವಂತಹ ತಾಕತ್ತು ಸುಧಾಕರ್‌ಗಿದೆ.. ಹೀಗಾಗಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಕೊನೇ ಕ್ಷಣದವರೆಗೂ ಕುತೂಹಲ ಕೇಂದ್ರಬಿಂದುವಾಗಿರಲಿದೆ..

ಇದನ್ನೂ ಓದಿ; ನನ್ನದು ಗರ್ವ ಅಲ್ಲ, ಕನ್ನಡಿಗನ ಸಹಜ ಸ್ವಾಭಿಮಾನ; ಸಿದ್ದರಾಮಯ್ಯ

 

 

Share Post