ಬೆಂಗಳೂರಿಗರ ಸಮಸ್ಯೆ ನಿವಾರಣೆಗೆ ʻಸಹಾಯ ಹಸ್ತʼ ವೆಬ್‌ಸೈಟ್; ಡಿ.ಕೆ.ಶಿವಕುಮಾರ್
ಬೆಂಗಳೂರು; ಬೆಂಗಳೂರಿನಲ್ಲಿ ಸಹಾಯ ಹಸ್ತ ವೆಬ್‌ಸೈಟ್ ಶುರು ಮಾಡುತ್ತಿದ್ದು, ಇದರ ಮೂಲಕ ನೀರು, ವಿದ್ಯುತ್, ಕಸ ಇತ್ಯಾದಿ ಬಗ್ಗೆ ಜನರು ದೂರು ಸಲ್ಲಿಸಬಹುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಾಗರೀಕರ ಧ್ವನಿಯೇ ಸರ್ಕಾರ ಧ್ವನಿ ಎಂಬ ಶೀರ್ಷಿಕೆಯಡಿ ನಡೆದ ಬ್ರ್ಯಾಂಡ್ ಬೆಂಗಳೂರು ಸಮ್ಮೇಳನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೆಂಗಳೂರು ನಗರದಲ್ಲಿ 1 ಕೋಟಿ 40 ಜನರಿದ್ದಾರೆ. ಹೊಸ ಮನೆಗಳು ಕೂಡಾ ಹೆಚ್ಚಾಗುತ್ತಿದ್ದು, ನೀರಿನ ಬೇಡಿಕೆ ಕೂಡ ಜಾಸ್ತಿ ಆಗುತ್ತಿದೆ ಎಂದು ಹೇಳಿದರು. ಟ್ರಾಫಿಕ್ ಸಮಸ್ಯೆ ಸಹ ದಟ್ಟವಾಗಿ ಕಾಡುತ್ತಿದೆ. ಹೀಗಾಗಿ ಎಂಟು ಜನರ ತಂಡ ರಚಿಸಲಾಗಿದ್ದು, ಟ್ರಾಫಿಕ್ ಸಮಸ್ಯೆ ಪರಿಹರಿಸಲು ಕ್ರಮ ವಹಿಸಲಾಗುವುದು ಎಂದರು.