12 ಕ್ಷೇತ್ರಗಳಲ್ಲಿ ರಾಜವಂಶಸ್ಥರನ್ನು ಕಣಕ್ಕಿಳಿಸಿದ ಬಿಜೆಪಿ; ಯಾರು ಅವರು..?
ದೇಶದಲ್ಲಿ ರಾಜರ ಆಳ್ವಿಕೆ ಹೋಗಿ ಪ್ರಜೆಗಳ ಆಳ್ವಿಕೆ ಬಂದು ಮುಕ್ಕಾಲು ಶತಮಾನ ಕಳೆದಿದೆ… ಈಗ ಜನರಿಂದ ಆಯ್ಕೆಯಾಗಿ ಪ್ರತಿನಿಧಿಗಳು ನಮ್ಮ ದೇಶವನ್ನು ಆಳುತ್ತಿದ್ದಾರೆ.. ಇನ್ನು ಅಧಿಕಾರವನ್ನು ಕಳೆದುಕೊಂಡು ಎಷ್ಟೋ ರಾಜ ಕುಟುಂಬಗಳ ಸದಸ್ಯರು ಈಗಲೂ ನಾಯಕರಾಗಿ ಮೆರೆಯುತ್ತಿದ್ದಾರೆ.. ಪ್ರಜಾಪ್ರಭುತ್ವದಲ್ಲಿ ಜನರಿಂದ ಆಯ್ಕೆಯಾಗುತ್ತಾ ಬಂದಿದ್ದಾರೆ.. ಈ ಬಾರಿಯೂ ಕೂಡಾ ಹಲವು ರಾಜ ಮನೆಗಳ ಸದಸ್ಯರು ಲೋಕಸಭಾ ಚುನಾವಣೆಯ ಅಖಾಡದಲ್ಲಿದ್ದಾರೆ.. ಅದರ ವಿವರವನ್ನು ನಾವು ಇಲ್ಲಿ ನಿಮಗೆ ಕೊಡುತ್ತಿದ್ದೇವೆ.
12 ಕ್ಷೇತ್ರಗಳಲ್ಲಿ ರಾಜವಂಶಸ್ಥರನ್ನು ಕಣಕ್ಕಿಳಿಸಿರುವ ಬಿಜೆಪಿ;
ದೇಶದ ಮೂಲೆ ಮೂಲೆಯಲ್ಲಿ ಈ ಬಾರಿ ರಾಜವಂಶಸ್ಥರು ಅಧಿಕಾರದಲ್ಲಿದ್ದಾರೆ… ಅದ್ರಲ್ಲೂ ಬಿಜೆಪಿ ಪಕ್ಷ ಈ ಬಾರಿ 12 ರಾಜವಂಶಸ್ಥರಿಗೆ ಟಿಕೆಟ್ ನೀಡಿದೆ.. ಅದರಲ್ಲಿ 5 ರಾಜವಂಶಸ್ಥರು ಇದೇ ಮೊದಲ ಬಾರಿಗೆ ಪ್ರಜಾಪ್ರಭುತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ.. ಉಳಿದವರು ಈಗಾಗಲೇ ಚುನಾವಣಾ ರಾಜಕಾರಣದಲ್ಲಿದ್ದು, ಹಲವು ಹುದ್ದೆಗಳನ್ನು ಅಲಂಕರಿಸಿದ್ದಾರೆ.
ಮೈಸೂರಿನ ಯದುವೀರ್ ಕೃಷ್ಣದತ್ತ ಒಡೆಯರ್;
ಮೈಸೂರು ಒಡೆಯರ್ ಸಂಸ್ಥಾನದ ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್ ಅವರಿಗೆ ಬಿಜೆಪಿ ಈ ಬಾರಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡಿದೆ.. ಹಾಲಿ ಸಂಸದ ಪ್ರತಾಪ ಸಿಂಗ ಅವರಿಗೆ ಟಿಕೆಟ್ ನಿರಾಕರಣೆ ಮಾಡಿ ಯದುವೀರ್ ಅವರನ್ನು ಬಿಜೆಪಿ ಕರೆತಂದು ಅಖಾಡಕ್ಕಿಳಿಸಲಾಗಿದೆ.. ಹಾಗಂತ ಈ ವಂಶದಿಂದ ಇವರೇ ಮೊದಲು ರಾಜಕೀಯಕ್ಕೆ ಬಂದವರಲ್ಲ.. ಈ ಹಿಂದಿನ ರಾಜವಂಶಸ್ಥರಾದಂತಹ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಕೂಡಾ ದಶಕಗಳ ಕಾಲ ರಾಜಕೀಯದಲ್ಲಿದ್ದರು.. ಶ್ರೀಕಂಠದತ್ತ ಒಡೆಯರ್ ಅವರು 1999 ರವರೆಗೆ ಮೈಸೂರು ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಕಾಂಗ್ರೆಸ್ ಪಕ್ಷದಿಂದ ಸಂಸದರಾಗಿ ಆಯ್ಕೆಯಾಗಿದ್ದರು.. 2004ರ ಲೋಕಸಭೆ ಚುನಾವಣೆಯಲ್ಲಿ ಅವರು ಸೋಲು ಕಂಡರು.. ಅನಂತರ ಚುನಾವಣಾ ರಾಜಕಾರಣದಿಂದ ಹಿಂದೆ ಸರಿದಿದ್ದರು.. ಶ್ರೀಕಂಠದತ್ತ ಒಡೆಯರ್ ಸಾವಿನ ನಂತರ ಯದುವೀರ್ ಅವರನ್ನು ದತ್ತು ಪಡೆದು, ರಾಜರನ್ನಾಗಿ ನೇಮಿಸಲಾಗಿತ್ತು.
ಬಂಗಾಳದಲ್ಲಿ ರಾಜಮಾತಾ ಅಮೃತಾ ರಾಯ್;
ಇನ್ನು ಪಶ್ಚಿಮ ಬಂಗಾಳದಲ್ಲಿ ಕೃಷ್ಣಾನಗರ ರಾಜಮನೆತನದವರಾದ ರಾಜಮಾತಾ ಅಮೃತಾ ರಾಯ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.. ಕೃಷ್ಣಾನಗರ ಲೋಕಸಭಾ ಕ್ಷೇತ್ರದಿಂದ ಅಮೃತಾ ರಾಯ್ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.. ಇಲ್ಲಿ ತೃಣಮೂಲ ಕಾಂಗ್ರೆಸ್ ವತಿಯಿಂದ ಮಹುವಾ ಮೊಯಿತ್ರಾ ಅಖಾಡದಲ್ಲಿದ್ದಾರೆ.. ಅಮೃತಾ ರಾಯ್ ಅವರನ್ನು ಇಲ್ಲಿನ ಜನ ಈಗಲೂ ರಾಜಮಾತೆ ಎಂದೇ ಕರೆಯುತ್ತಾರೆ.. ಇವರು ಇದೇ ಮೊದಲ ಬಾರಿಗೆ ಚುನಾವಣಾ ಅಖಾಡದಲ್ಲಿದ್ದಾರೆ..
ತ್ರಿಪುರದ ರಾಣಿ ಕೀರ್ತಿ ಸಿಂಗ್ ದೇವ್ ವರ್ಮಾ;
ಇನ್ನು ತ್ರಿಪುರ ಪೂರ್ವ ಲೋಕಸಭಾ ಕ್ಷೇತ್ರದಿಂದ ಕೀರ್ತಿ ಸಿಂಗ್ ದೇವ್ ವರ್ಮಾ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.. ಹಾಲಿ ಸಂಸದೆ ರೇವತಿ ಅವರಿಗೆ ಟಿಕೆಟ್ ನಿರಾಕರಿಸಿ ಕೀರ್ತಿ ಸಿಂಗ್ ದೇವ್ ವರ್ಮಾ ಅವರಿಗೆ ಟಿಕೆಟ್ ನೀಡಲಾಗಿದೆ.. ಇವರು ಮಾಣಿಕ್ಯ ರಾಜಮನೆತನದ ಯುವ ರಾಣಿಯಾಗಿದ್ದು, ತಿಪ್ರಾ ಮೋಟಾ ಪಕ್ಷದ ನಾಯಕ ಪ್ರದ್ಯೋತ್ ದೇವ್ ವರ್ಮಾ ಅವರ ಸಹೋದರಿಯಾಗಿದ್ದಾರೆ. ಈ ಪಕ್ಷ ಇತ್ತೀಚೆಗೆ ಎನ್ಡಿಎ ಮೈತ್ರಿಕೂಟ ಸೇರಿದೆ..
ಕಲಹಂಡಿ ರಾಜಮನೆತನದ ಮಾಳವಿಕಾ ಕೇಶರಿದೇವ್;
ಇನ್ನು ಒಡಿಶಾದಲ್ಲಿ ಕೂಡಾ ಬಿಜೆಪಿ ಪಕ್ಷ ಒಬ್ಬರು ರಾಜವಂಶಸ್ಥರನ್ನು ಲೋಕಸಭಾ ಅಖಾಡಕ್ಕಿಳಿಸಿದೆ.. ಅವರ ಹೆಸರೇ ಮಾಳವಿಕಾ ಕೇಶರಿ ದೇವ್.. ಇವರು ಕಲಹಂಡಿಯ ರಾಜಮನೆತನದ ಕುಡಿ. ಮಾಳವಿಕಾ ಅವರು ಬಿಜು ಜನತಾ ದಳ (ಬಿಜೆಡಿ)ದ ಮಾಜಿ ಸಂಸದ ಅರ್ಕಾ ಕೇಶರಿ ದೇವ್ ಅವರ ಪತ್ನಿಯಾಗಿದ್ದಾರೆ. 2023ರಲ್ಲಿ ಈ ದಂಪತಿ ಬಿಜೆಪಿ ಪಕ್ಷವನ್ನು ತೊರೆದು ಬಿಜೆಪಿಗೆ ಸೇರಿದ್ದರು.
ಪಟಿಯಾಲ ರಾಜಮನೆತನದ ಪ್ರಣೀತ್ ಕೌರ್;
ಪಟಿಯಾಲ ರಾಜಮನೆತನದ ಪ್ರಣೀತ್ ಕೌರ್ ಅವರು ಈಗಾಗಲೇ ರಾಜಕೀಯದಲ್ಲಿದ್ದವರು.. ಇವರು ಕಾಂಗ್ರೆಸ್ನಿಂದ ಈ ಹಿಂದೆ ಸಂಸದೆಯಾಗಿದ್ದರು.. ಇವರು ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಪತ್ನಿಯೂ ಕೂಡಾ ಹೌದು.. ಇವರೀಗ ಬಿಜೆಪಿ ಸೇರಿದ್ದು, ಪಟಿಯಾಲ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ ಬಯಸಿದ್ದಾರೆ..
ಗ್ವಾಲಿಯರ್ ಸಂಸ್ಥಾನದ ಜ್ಯೋತಿರಾದಿತ್ಯ ಸಿಂಧಿಯಾ;
ಇನ್ನು ಗ್ವಾಲಿಯರ್ ಮಹಾರಾಜ ಜ್ಯೋತಿರಾದಿತ್ಯ ಸಿಂಧಿಯಾ ಕೂಡಾ ಈ ಬಾರಿ ಚುನಾವಣಾ ಅಖಾಡಲ್ಲಿದ್ದಾರೆ.. ಇವರು ಹಾಲಿ ರಾಜ್ಯಸಭಾ ಸದಸ್ಯರು, ಜೊತೆಗೆ ಕೇಂದ್ರ ಸಚಿವರೂ ಆಗಿದ್ದಾರೆ.. ಈ ಬಾರಿ ನೇರ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.. ಬಿಜೆಪಿ ಅಭ್ಯರ್ಥಿಯಾಗಿ ‘ಗುಣ’ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಜ್ಯೋತಿರಾದಿತ್ಯ ಸಿಂಧಿಯಾ ಸಂಸತ್ತಿಗೆ ಜನರಿಂದ ಆಯ್ಕೆ ಬಯಸುತ್ತಿದ್ದಾರೆ.
ಮೇವಾರ ರಾಜಮನೆತನದ ಮಹಿಮಾ ಕುಮಾರಿ;
ರಾಜಸಮಂದ್ ಲೋಕಸಭಾ ಕ್ಷೇತ್ರದಿಂದ ಮಹಿಮಾ ಕುಮಾರಿ ವಿಶ್ವರಾಜ್ ಸಿಂಗ್ ಮೇವಾರ್ ಕಣದಲ್ಲಿದ್ದಾರೆ.. ಮೇವಾರ ರಾಜಮನೆತನದ ವಿಶ್ವರಾಜ್ ಸಿಂಗ್ ಅವರ ಪತ್ನಿ ಇವರು. ರಾಜಸ್ಥಾನ ವಿಧಾನಸಭಾ ಚುನಾವಣೆ ಸಮಯದಲ್ಲಿ ವಿಶ್ವರಾಜ್ ಸಿಂಗ್ ಅವರು ಬಿಜೆಪಿ ಪಕ್ಷಕ್ಕೆ ಸೇರಿದ್ದರು.. ಹೀಗಾಗಿ ರಜಪೂತ ಪ್ರಾಬಲ್ಯವಿರುವ ರಾಜಸಮಂದ್ ಕ್ಷೇತ್ರದಿಂದ ವಿಶ್ವರಾಜ್ ಸಿಂಗ್ ಅವರ ಪತ್ನಿ ಮಹಿಮಾಗೆ ಬಿಜೆಪಿ ಟಿಕೆಟ್ ನೀಡಿದೆ.
ಛತ್ರಪತಿ ವಂಶಸ್ಥ ಉದಯ್ರಾಜ್ ಭೊಸಲೆ;
ಛತ್ರಪತಿ ಶಿವಾಜಿ ಅವರ ಉತ್ತರಾಧಿಕಾರಿ ಉದಯರಾಜ್ ಭೋಸಲೆ ಕೂಡಾ ಲೋಕಸಭಾ ಕಣಕ್ಕೆ ಇಳಿಯುತ್ತಿದ್ದಾರೆ.. ಅವರೀಗ ಹಾಲಿ ರಾಜ್ಯಸಭಾ ಸದಸ್ಯರಾಗಿದ್ದಾರೆ.. ಈಗ ಸತಾರಾ ಲೋಕಸಭಾ ಕ್ಷೇತ್ರದಿಂದ ನೇರ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. 2019 ರಲ್ಲಿ, ಉದಯ್ ರಾ ಭೋಸಲೆ ಅವರಯ ಎನ್ಸಿಪಿಯಿಂದ ಗೆದ್ದಿದ್ದರು. ನಂತರ ಬಿಜೆಪಿ ಸೇರುವುದಕ್ಕಾಗಿ ರಾಜೀನಾಮೆ ನೀಡಿ, ಉಪಚುನಾವಣೆಯಲ್ಲಿ ಸೋತಿದ್ದರು.. ಹೀಗಾಗಿ ಬಿಜೆಪಿ ಅವರನ್ನು ರಾಜ್ಯಸಸಭೆಗೆ ಆಯ್ಕೆ ಮಾಡಿತ್ತು.
ಪಟ್ನಾಗರ್-ಬೋಲಂಗಿರ್ ರಾಜ ಕುಟುಂಬ;
ಒಡಿಶಾದಲ್ಲಿ ಪಟ್ನಾಗರ್-ಬೋಲಂಗೀರ್ ರಾಜಮನೆತನಕ್ಕೆ ಸೇರಿದ ಬೋಲಂಗೀರ್ ಹಾಲಿ ಸಂಸದೆ ಸಂಗೀತಾ ಕುಮಾರಿ ಸಿಂಗ್ ದೇವ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಪಟ್ನಾಗರ್ ಲೋಕಸಭಾ ಕ್ಷೇತ್ರದಿಂದ ಸಂಗೀತಾ ಕುಮಾರಿ ಸಿಂಗ್ ದೇವ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ..
ಧೋಲ್ಪುರ ರಾಜಮನೆತನದ ದುಷ್ಯಂತ ಸಿಂಗ್;
ಇನ್ನು ಧೋಲ್ಪುರ ರಾಜಮನೆತನದ ದುಷ್ಯಂತ್ ಸಿಂಗ್ ಮತ್ತೊಮ್ಮೆ ಚುನಾವಣಾ ಅಖಾಡಕ್ಕಿಳಿದಿದ್ದಾರೆ.. ಇವರು ರಾಜಸ್ಥಾನದ ಜಲಾವರ್-ಬರನ್ ನಿಂದ ಮೂರು ಬಾರಿ ಸಂಸದರಾಗಿದ್ದಾರೆ.. ಈಗ ನಾಲ್ಕನೇ ಬಾರಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಶಾದೋಲ್ ರಾಜಮನೆತನದ ಹಿಮಾದ್ರಿ ಸಿಂಗ್;
ಛತ್ತೀಸ್ ಗಢದ ಶಾದೋಲ್ ರಾಜಮನೆತನಕ್ಕೆ ಸೇರಿದ ಹಿಮಾದ್ರಿ ಸಿಂಗ್ ಹೆಸರೂ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿದೆ. 2019ರಲ್ಲೂ ಹಿಮಾದ್ರಿ ಸಿಂಗ್ ಬಿಜೆಪಿ ಟಿಕೆಟ್ನಲ್ಲಿ ಗೆದ್ದಿದ್ದರು. ಉತ್ತರಾಖಂಡದ ತೆಹ್ರಿ ರಾಜಮನೆತನದ ರಾಣಿ ಲಕ್ಷ್ಮಿ ಶಾ ಅವರೂ ಈ ಬಾರಿ ಕಣಕ್ಕಿಳಿಯುತ್ತಿದ್ದಾರೆ. ಮಹಾರಾಣಿ ಮಾಲಾ ರಾಜಲಕ್ಷ್ಮಿ ಶಾ ಅವರು ಈ ಹಿಂದೆ ತೆಹ್ರಿ ಗರ್ವಾಲ್ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿದ್ದರು.
ಇದನ್ನೂ ಓದಿ; ಮೀನು ಅಡುಗೆ ಮಾಡುವಾಗ ವಾಸನೆ ಬರ್ತಿದೆಯಾ..?; ಹಾಗಾದ್ರೆ ಹೀಗೆ ಮಾಡಿ..