NationalPolitics

ಬೆಂಗಳೂರಿನಲ್ಲಿ ನಡೆಯುತ್ತಿರೋದು ಕಡುಭ್ರಷ್ಟರ ಸಮ್ಮೇಳನ; ಪ್ರಧಾನಿ ಮೋದಿ

ನವದೆಹಲಿ; ಬೆಂಗಳೂರಿನಲ್ಲಿ ವಿರೋಧ ಪಕ್ಷಗಳು ಸಭೆ ನಡೆಸುತ್ತಿವೆ. ಅದು ಕಡುಭ್ರಷ್ಟರ ಸಮ್ಮೇಳನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ. ಅಂಡಮಾನ್-ನಿಕೋಬಾರ್ ದ್ವೀಪಗಳ ಪೋರ್ಟ್ ಬ್ಲೇರ್ ವಿಮಾನ ನಿಲ್ದಾಣದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಬೆಂಗಳೂರಲ್ಲಿ ಕಡು ಭ್ರಷ್ಟರ ಸಮ್ಮೇಳನ ನಡೆಯುತ್ತಿದೆ, ಅತಿಹೆಚ್ಚು ಭ್ರಷ್ಟಾಚಾರ ಮಾಡಿದ ವ್ಯಕ್ತಿಗೆ ಅಲ್ಲಿ ಹೆಚ್ಚು ಗೌರವ ನೀಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದರು. ಪ್ರಜಾಪ್ರಭುತ್ವ ಅಂದ್ರೆ ಜನರಿಂದ, ಜನರಿಗಾಗಿ, ಜನರಿಗೋಸ್ಕರ ನಡೆಸುವ ಆಡಳಿತವಾಗಿದೆ. ಆದ್ರೆ ವಿಪಕ್ಷಗಳ ಧ್ಯೇಯ ವಾಕ್ಯವೇ ಬೇರೆ ಇದೆ. ಅವರದ್ದು ಕುಟುಂಬದಿಂದ, ಕುಟುಂಬಕ್ಕಾಗಿ, ಕುಟುಂಬಕ್ಕೋಸ್ಕರ ಅಧಿಕಾರ ನಡೆಸುವುದಾಗಿದೆ ಎಂದು ಪ್ರಧಾನಿ ಮೋದಿ ಮೂದಲಿಸಿದ್ದಾರೆ.

ಬೆಂಗಳೂರಿನ ಸಭೆಯ ಇನ್ನೊಂದು ವಿಶೇಷ ಎಂದರೆ ಯಾರೂ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿ ಜಾಮೀನಿನ ಮೇಲೆ ಹೊರಗಿದ್ದಾರೂ ಅವರನ್ನು ಇಲ್ಲಿ ಗೌರವದಿಂದ ಕಾಣಲಾಗುತ್ತದೆ. ಇಡೀ ಕುಟುಂಬವೇ ಜಾಮೀನಿನ ಮೇಲೆ ಹೊರಗಿದ್ದರೆ ಅವರಿಗೆ ಗೌರವ ಇನ್ನೂ ಹೆಚ್ಚು ಎಂದು ಮೋದಿಯವರು ಲೇವಡಿ ಮಾಡಿದ್ದಾರೆ.

Share Post