CrimeNational

ಬಾಡಿಗೆ ವಿಲ್ಲಾದಲ್ಲಿ ನೀಲಿ ಚಿತ್ರ ಚಿತ್ರೀಕರಣ; ಬಲೆಗೆ ಬಿತ್ತು ಖತರ್ನಾಕ್‌ ಗ್ಯಾಂಗ್‌

ಮುಂಬೈ; ನೀಲಿಚಿತ್ರ ನಿರ್ಮಾಣ ಆರೋಪದ ಮೇಲೆ ಶಿಲ್ಪಾಶೆಟ್ಟಿ ಪತಿ ರಾಜ್‌ ಕುಂದ್ರಾ ಅರೆಸ್ಟ್‌ ಆಗಿದ್ದನ್ನು ಈ ಹಿಂದೆ ನೋಡಿದ್ದೆವು.. ಮುಂಬೈನಲ್ಲಿ ಇಂತಹ ಕೃತ್ಯಗಳು ನಡೆಯುತ್ತಲೇ ಇರುತ್ತವೆ.. ಇದೀಗ ಇಂತಹದ್ದೇ ನೀಲಿ ಚಿತ್ರ ತಯಾರಿಕೆಯ ಗುಂಪು ಪೊಲೀಸ್‌ ಬಲೆಗೆ ಬಿದ್ದಿದೆ.. ಮನೆಯೊಂದರಲ್ಲಿ ನೀಲಿ ಚಿತ್ರ ತಯಾರಿಸುತ್ತಿರುವಾಗಲೇ ಪೊಲೀಸರು ದಾಳಿ ನಡೆಸಿ, ಇಡೀ ಗ್ಯಾಗ್‌ನ್ನು ಅರೆಸ್ಟ್‌ ಮಾಡಿದ್ದಾರೆ..

ಇದನ್ನೂ ಓದಿ; ಅತಿಯಾಗಿ ಉಪ್ಪು ಸೇವನೆ ಮಾಡಿದರೆ ʻಆʼ ಶಕ್ತಿ ಕಡಿಮೆಯಾಗುತ್ತಂತೆ!

ಐಶಾರಾಮಿ ವಿಲ್ಲಾದಲ್ಲಿ ನಡೆಯುತ್ತಿತ್ತು ಶೂಟಿಂಗ್‌;

ಮುಂಬೈನ ಲೊನಾವ್ಲಾದಲ್ಲಿ ಐಶಾರಾಮಿ ವಿಲ್ಲಾ ಬಾಡಿಗೆ ಪಡೆಯಲಾಗಿತ್ತು.. ಅದರಲ್ಲಿ ಗುಪ್ತವಾಗಿ ಈ ಗ್ಯಾಂಗ್‌ ನೀಲಿ ಚಿತ್ರಗಳನ್ನು ತೆಗೆಯುತ್ತಿತ್ತು.. ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಮಾಡಿ, ಹಣ ಮಾಡುತ್ತಿದ್ದರು.. ಇದರ ಮಾಹಿತಿ ಪಡೆದ ಪೊಲೀಸರು, ರೆಡ್‌ ಹ್ಯಾಂಡಾಗಿ ಗ್ಯಾಂಗ್‌ ನ್ನು ಬಂಧಿಸಲು ಕಾಯುತ್ತಿದ್ದರು.. ಕಳೆದ ರಾತ್ರಿ ನೀಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದೆ ಎಂಬ ಮಾಹಿತಿ ಲೊನಾವ್ಲಾ ಪೊಲೀಸರಿಗೆ ಸಿಕ್ಕಿದೆ.. ಕೂಡಲೇ ಪೊಲೀಸರು ದಾಳಿ ನಡೆಸಿದ್ದಾರೆ.. ಈ ವೇಳೆ ನೀಲಿ ಚಿತ್ರ ನಿರ್ಮಾಣದಲ್ಲಿ ತೊಡಗಿದ್ದ 13 ಮಂದಿಯನ್ನು ಬಂಧಿಸಲಾಗಿದೆ.. ಇದರಲ್ಲಿ ಐವರು ಯುವತಿಯರು ಕೂಡಾ ಇದ್ದಾರೆ..

ಇದನ್ನೂ ಓದಿ; ಕಡಿಮೆ ಬಡ್ಡಿ ದರದಲ್ಲಿ ಪರ್ಸನಲ್‌ ಲೋನ್‌ ಬೇಕಾ..?; ಹಾಗಾದರೆ ಈ ವಿಧಾನ ಅನುಸರಿಸಿ!

ನೀಲಿ ಚಿತ್ರಕ್ಕಾಗಿ ಐವರು ಯುವತಿಯರ ಬಳಕೆ;

ನೀಲಿ ಚಿತ್ರಗಳ ಚಿತ್ರೀಕರಣಕ್ಕಾಗಿ ಐವರು ಯುವತಿಯರನ್ನು ಈ ಗ್ಯಾಂಗ್‌ ಬಳಸಿಕೊಂಡಿತ್ತು.. ಇವರಿನ್ನಿಟ್ಟುಕೊಂಡು ಶೂಟಿಂಗ್‌ ನಡೆಯುತ್ತಿತ್ತು.. ಚಿತ್ರೀಕರಣ ಮಾಡಿ, ಅದನ್ನು ಎಡಿಟ್‌ ಮಾಡಿ ಡಿಜಿಟಲ್‌ ಫ್ಲಾಟ್‌ ಫಾರ್ಮ್‌ ಹಾಗೂ ನೀಲಿಚಿತ್ರಗಳ ಒಟಿಟಿಗಳಲ್ಲಿ ಈ ಚಿತ್ರಗಳನ್ನು ರಿಲೀಸ್‌ ಮಾಡುತ್ತಿದ್ದರು.. ಐಶಾರಾಮಿ ವಿಲ್ಲಾದಲ್ಲಿ ಸ್ಟುಡಿಯೋ, ಎಡಿಟ್‌ ಸೂಟ್‌ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನೂ ಮಾಡಿಕೊಂಡಿದ್ದರು.. ಚಿತ್ರೀಕರಣವಾದ ವಿಡಿಯೋಗಳನ್ನು ಎಡಿಟ್‌ ಮಾಡುವುದಕ್ಕಾಗಿ ಒಂದಷ್ಟು ಉದ್ಯೋಗಿಗಳನ್ನು ನೇಮಿಸಿಕೊಳ್ಳಲಾಗಿತ್ತು..

ಇದನ್ನೂ ಓದಿ; ಕೇಕ್‌ನಲ್ಲೇ ಇದ್ದ ಯಮರಾಯ; ಹುಟ್ಟಹಬ್ಬದಂದೇ ಬಾಲಕಿ ಕೇಕ್‌ಗೆ ಬಲಿ!

ಹಲವಾರು ವಿಡಿಯೋಗಳು ಪತ್ತೆ;

ಪೊಲೀಸರು ದಾಳಿ ನಡೆಸಿದಾಗ ಆ ವಿಲ್ಲಾದಲ್ಲಿ ಹಲವಾರು ನೀಲಿ ಚಿತ್ರಗಳ ಫುಟೇಜ್‌ ಸಿಕ್ಕಿದೆ.. ಜೊತೆಗೆ ಚಿತ್ರೀಕರಣ ನಡೆಯುತ್ತಿರುವಾಗಲೇ ರೆಡ್‌ ಹ್ಯಾಂಡಾಗಿ ಹಿಡಿಯಲಾಗಿದೆ.. ಪೊಲೀಸರು ಬಂಧಿತರಿಂದ ವಿಡಿಯೋ ಫುಟೇಜ್‌, ಡಿಜಿಟಲ್‌ ಕ್ಯಾಮರಾ, ಚಿತ್ರೀಕರಣ ಬಳಸುತ್ತಿದ್ದ ಇತರೆ ಐಟಂಗಳನ್ನು ಜಪ್ತಿ ಮಾಡಿದ್ದಾರೆ.. ಇದರ ಹಿಂದೆ ಯಾರಿದ್ದಾರೆ ಎಂಬುದರ ಕುರಿತು ಪೊಲೀಸರು ತೀವ್ರ ವಿಚಾರಣೆ ಆರಂಭಿಸಿದ್ದಾರೆ..

ಇದನ್ನೂ ಓದಿ; ಈ ತರಕಾರಿ ನೀರು ಕುಡಿದರೆ ಸ್ಲಿಮ್ ಆಗಬಹುದು!

ಈ  ಹಿಂದೆ ರಾಜ್‌ ಕುಂದ್ರಾ ಬಂಧಿಸಿದ್ದ ಪೊಲೀಸರು;

ನೀಲಿ ಚಿತ್ರ ನಿರ್ಮಾಣ ಹಾಗೂ ಅದರ ಬಿಡುಗಡೆಗೆ ಭಾರತದಲ್ಲಿ ನಿಷೇಧವಿದೆ.. ನೀಲಿ ಚಿತ್ರ ತಯಾರಿ ನಮ್ಮ ದೇಶದಲ್ಲಿ ಕಾನೂನು ಪ್ರಕಾರ ಅಪರಾಧ.. ಹೀಗಿದ್ದರೂ ಕೂಡಾ ಇಂತಹ ಚಟುವಟಿಕೆಗಳನ್ನು ನಡೆಯುತ್ತಲೇ ಇವೆ.. ಅದರಲ್ಲೂ ಮುಂಬೈನಂತಹ ಮಹಾನಗರಿಯಲ್ಲಿ ಇಂತಹ ಕೃತ್ಯಗಳು ಎಗ್ಗಿಲ್ಲದೆ ನಡೆಯುತ್ತಿವೆ.. ಈ ಹಿಂದೆ ಇದೇ ವಿಚಾರದಲ್ಲಿ ನಟಿ ಶಿಲ್ಪಾಶೆಟ್ಟಿ ಪತಿ ರಾಜ್‌ ಕುಂದ್ರಾ ಕೂಡಾ ಅರೆಸ್ಟ್‌ ಆಗಿದ್ದರು..

ಮುಂಬೈನ ಒಂದು ಬಂಗಲೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದರು.. ಈ ವೇಳೆಯೂ ಗ್ಯಾಂಗ್‌ ಒಂದು ಸಿಕ್ಕಿಬಿದ್ದಿತ್ತು.. ಆ ಗ್ಯಾಂಗ್‌ಗೆ ಬಂಡವಾಳ ನೀಡಿದ್ದವರು ರಾಜ್‌ ಕುಂದ್ರಾ ಎಂಬ ಆರೋಪ ಕೇಳಿಬಂದಿತ್ತು.. ಈ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪೊಲೀಸರು ರಾಜ್‌ ಕುಂದ್ರಾ ಅವರನ್ನು ಬಂಧಿಸಿದ್ದರು.. ನಂತರ ಅವರು ಬೇಲ್‌ ಮೇಲೆ ಬಿಡುಗಡೆಯಾಗಿದ್ದಾರೆ.

ಇದನ್ನೂ ಓದಿ; ಇದು ಬಡವರ ಸಂಜೀವಿನಿ; ತಪ್ಪದೇ ತಂದು ಕುಡಿಯಿರಿ..!

 

Share Post