ಕುಮಾರಸ್ವಾಮಿಗೆ ಆಪರೇಷನ್ ಆಗಿದ್ದರ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕಾಂಗ್ರೆಸ್ ಶಾಸಕ
ಮಂಡ್ಯ; ಮಂಡ್ಯದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅಖಾಡಕ್ಕಿಳಿಯೋದು ಕನ್ಫರ್ಮ್ ಆಗುತ್ತಿದ್ದಂತೆ ಮಂಡ್ಯ ರಾಜಕೀಯ ರಂಗೇರುತ್ತಿದೆ.. ಆಗಲೇ ವಾಕ್ಸಮರಗಳು ಶುರುವಾಗಿವೆ.. ಕಾಂಗ್ರೆಸ್ ಶಾಸಕರು, ಮುಖಂಡರು ಆಗಲೇ ಕುಮಾರಸ್ವಾಮಿ ವಿರುದ್ಧ ಮುಗಿ ಬೀಳುತ್ತಿದ್ದಾರೆ.. ಅದ್ರಲ್ಲೂ ಕೂಡಾ ಶ್ರೀರಂಗಪಟ್ಟಣದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ಕುಮಾರಸ್ವಾಮಿಯವರ ಆರೋಗ್ಯ ಹಾಗೂ ಶಸ್ತ್ರಚಿಕಿತ್ಸೆ ಬಗ್ಗೆಯೇ ವ್ಯಂಗ್ಯವಾಗಿ ಮಾತನಾಡಿದ್ದಾರೆ..
ಇದನ್ನೂ ಓದಿ; ಕಣ್ಣು ಮಂಜಾಗುತ್ತಿದೆಯಾ..?; ಹಾಗಾದರೆ ಈ ಟ್ರಿಕ್ಸ್ ಬಳಸಿ, ಕಣ್ಣುಗಳನ್ನು ಕಾಪಾಡಿ!
ಶಸ್ತ್ರಚಿಕಿತ್ಸೆ ನಡೆದಿದ್ದರ ಬಗ್ಗೆಯೇ ಅನುಮಾನ;
ಕುಮಾರಸ್ವಾಮಿಯವರು ಮಾರ್ಚ್ 21ರಂದು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು.. ಅಂದೇ ಅವರಿಗೆ ಹೃದಯ ಶಸ್ತ್ರ ಚಿಕಿತ್ಸೆ ನಡೆದಿತ್ತು.. ಇದಾದ ಮೂರು ದಿನಕ್ಕೆ ಅವರು ಆಸ್ಪತ್ರೆಯಿಂದ ಡಿಸ್‌ಜಾರ್ಜ್ ಆಗಿದ್ದರು.. ಬೆಂಗಳೂರಿಗೆ ಬರುತ್ತಿದ್ದಂತೆ ಅವರು ರಾಜಕೀಯ ಚಟುವಟಿಕೆ ಶುರು ಮಾಡಿಕೊಂಡಿದ್ದಾರೆ.. ಜೊತೆಗೆ ನಿನ್ನೆ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಕೂಡಾ ಅವರು ಪಾಲ್ಗೊಂಡಿದ್ದರು.. ಅದಕ್ಕೂ ಮೊದಲು ಕುಮಾರಸ್ವಾಮಿಯವರು ಮಂಡ್ಯ ಹಾಗೂ ಚನ್ನಪಟ್ಟಣ ಕಾರ್ಯಕರ್ತರೊಂದಿಗೂ ಸಭೆಗಳನ್ನು ನಡೆಸಿದ್ದರು.. ಇದನ್ನು ಮುಂದಿಟ್ಟುಕೊಂಡೇ ಶಸ್ತ್ರಚಿಕಿತ್ಸೆಯಾದ ನಾಲ್ಕು ದಿನಕ್ಕೇ ರಾಜಕೀಯದಲ್ಲಿ ಸಕ್ರಿಯರಾಗುತ್ತಾರೆ.. ಇದು ಹೇಗೆ ಸಾಧ್ಯ ಎಂಬ ರೀತಿಯಲ್ಲಿ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅನುಮಾನ ವ್ಯಕ್ತಪಡಿಸಿದ್ದಾರೆ..
ಇದನ್ನೂ ಓದಿ; ಈ ತರಕಾರಿ ನೀರು ಕುಡಿದರೆ ಸ್ಲಿಮ್ ಆಗಬಹುದು!
ನಾಲ್ಕೇ ದಿನದಲ್ಲಿ ರಾಜ್ಯ ಸುತ್ತಲು ಹೇಗೆ ಸಾಧ್ಯ..?;
ಕುಮಾರಸ್ವಾಮಿಯವರಿಗೆ ಮೂರೇ ದಿನದಲ್ಲಿ ಹೃದಯ ಶಸ್ತ್ರಚಿಕಿತ್ಸೆಯಾಗುತ್ತದೆ.. ನಾಲ್ಕನೇ ದಿನವೇ ರಾಜ್ಯ ಸುತ್ತುತ್ತಾರೆ.. ಅದು ಹೇಗೆ ಸಾಧ್ಯವಾಗುತ್ತದೆ ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರ ಅಭಿಪ್ರಾಯ.. ಈ ಮೂಲಕ ಅವರು ಕುಮಾರಸ್ವಾಮಿಯವರಿಗೆ ಆಪರೇಷನ್ ಆಗಿದೆಯೋ, ಇಲ್ಲವೋ ಎಂಬ ರೀತಿಯಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.. ಶಾಸಕ ರಮೇಶ್ ಬಂಡಿಸಿದ್ದೇಗೌಡರ ಈ ಮಾತು ರಾಜಕೀಯ ಕೆಸಾರೆರಚಾಟಕ್ಕೆ ಕಾರಣವಾಗುವ ಸಾಧ್ಯತೆ ಹೆಚ್ಚಿದೆ..
ಇದನ್ನೂ ಓದಿ; ಇದು ಬಡವರ ಸಂಜೀವಿನಿ; ತಪ್ಪದೇ ತಂದು ಕುಡಿಯಿರಿ..!
ಚುನಾವಣೆ ಬಂದರೆ ಆಸ್ಪತ್ರೆಗೆ ದಾಖಲಾಗುತ್ತಾರೆ..!;
ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಳವಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಿತು.. ಈ ಸಭೆಯಲ್ಲಿ ಮಾತನಾಡಿರುವ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು, ಮಾಜಿ ಸಿಎಂ ಕುಮಾರಸ್ವಾಮಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.. ಕುಮಾರಸ್ವಾಮಿಯವರು ಚುನಾವಣೆ ಬಂದರೆ ಸಾಕು ಆಸ್ಪತ್ರೆ ಸೇರುತ್ತಾರೆ.. ಹೃದಯ ಆಪರೇಷನ್ ಎಂದು ಹೇಳುತ್ತಾರೆ ಎಂದು ವ್ಯಂಗ್ಯವಾಗಿ ಮಾತನಾಡಿದ್ದಾರೆ..
ಇದನ್ನೂ ಓದಿ; ಈ ಲಕ್ಷಣಗಳಿದ್ದರೆ ನಿಮ್ಮ ಕಿಡ್ನಿಯಲ್ಲಿ ಸ್ಟೋನ್ ಇರಬಹುದು!
ಚಲುವರಾಯ ಸ್ವಾಮಿ ಒಂದು ತಿಂಗಳು ಆಚೆ ಬರಲ್ಲ;
ಸಚಿವ ಚಲುವರಾಯಸ್ವಾಮಿಯವರು ಕೂಡಾ ಹೃದಯ ಕಾಯಿಲೆಯಿಂದಲೇ ಬಳಲುತ್ತಿದ್ದಾರೆ.. ಅವರ ಆಸ್ಪತ್ರೆಗೆ ದಾಖಲಾದರೆ ಒಂದು ತಿಂಗಳು ಆಚೆ ಬರುವುದಿಲ್ಲ.. ಚಲುವರಾಯಸ್ವಾಮಿಯವರಿಗೆ ಏನು ಸಮಸ್ಯೆ ಇದೆಯೋ ಅದೇ ಸಮಸ್ಯೆ ಕುಮಾರಸ್ವಾಮಿಯವರಿಗೂ ಇದೆ.. ಆದ್ರೆ ಅವರು ಹೃದಯ ಶಸ್ತ್ರಚಿಕಿತ್ಸೆಯಾದ ಎರಡನೇ ದಿನಕ್ಕೇ ಹೇಗೆ ಆಚೆ ಬರುತ್ತಾರೆ ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ ಪ್ರಶ್ನೆ ಮಾಡುತ್ತಿದ್ದಾರೆ.. ಇದು ಅಭಿವೃದ್ಧಿ ವರ್ಸಸ್ ಕಣ್ಣೀರಿಡುವ ಜನರ ನಡುವಿನ ಚುನಾವಣೆ ಎಂದಿರುವ ಶಾಸಕರು, ನನಗೆ ಆ ತೊಂದರೆ ಇದೆ, ಈ ತೊಂದರೆ ಇದೆ ಎಂದರೇ ಜನ ಕೇಳಬಾರದು. ಅಧಿಕಾರದಲ್ಲಿ ಇದ್ದಾಗ ಏನ್ ಮಾಡಿದ್ದೀರಿ ಎಂದು ಪ್ರಶ್ನೆ ಮಾಡಬೇಕು ಎಂದೂ ರಮೇಶ್ ಬಂಡಿಸಿದ್ದೇಗೌಡ ಹೇಳಿದ್ದಾರೆ..
ಇದನ್ನೂ ಓದಿ; Breaking; ಕಾಂಗ್ರೆಸ್ ಪಟ್ಟಿ ರಿಲೀಸ್; ಚಿಕ್ಕಬಳ್ಳಾಪುರಕ್ಕೆ ರಕ್ಷಾ ರಾಮಯ್ಯ
ಮಂಡ್ಯ ಮುಖಂಡರ ಒತ್ತಡಕ್ಕೆ ಸ್ಪರ್ಧೆ;
ಮಾಜಿ ಸಿಎಂ ಕುಮಾರಸ್ವಾಮಿಯವರು ಮಂಡ್ಯದಲ್ಲಿ ಸ್ಪರ್ಧೆ ಮಾಡಲು ಮುಂದಾಗಿರಲಿಲ್ಲ.. ಅವರು ಆಸ್ಪತ್ರೆಗೆ ಹೋಗಿ ಬಂದ ಮೇಲೆ ಮಂಡ್ಯದ ಮುಖಂಡರು ಕುಮಾರಸ್ವಾಮಿಯವರೇ ಸ್ಪರ್ಧೆ ಮಾಡಬೇಕೆಂದು ಪಟ್ಟು ಹಿಡಿದಿದ್ದರು.. ಈ ಹಿನ್ನೆಲೆಯಲ್ಲಿ ಅವರು ಸ್ಪರ್ಧೆ ಮಾಡುತ್ತಿದ್ದಾರೆ.. ಇನ್ನೊಂದೆಡೆ ಬಿಜೆಪಿ ಹೈಕಮಾಂಡ್‌ನಿಂದಲೂ ಕುಮಾರಸ್ವಾಮಿಯವರೇ ಸ್ಪರ್ಧಿಸಲಿ ಎಂಬ ಒತ್ತಡ ಇತ್ತು ಎನ್ನಲಾಗಿದೆ.. ಒಟ್ಟಿನಲ್ಲಿ ಮಂಡ್ಯದಲ್ಲಿ ಕುಮಾರಸ್ವಾಮಿ ಸ್ಪರ್ಧೆಯಿಂದ ಅಖಾಡ ಸಾಕಷ್ಟು ರಂಗೇರಿದಂತಾಗಿದೆ.,.
ಇದನ್ನೂ ಓದಿ; ಮುಖ ಸುಕ್ಕುಗಟ್ಟದಂತೆ ಯಾವಾಗಲೂ ಯಂಗ್ ಆಗಿ ಕಾಣುಲು ಹೀಗೆ ಮಾಡಿ!