DistrictsPolitics

ನೈಸ್‌ಗೆ ಕೊಟ್ಟ 554 ಎಕರೆ ಹೆಚ್ಚುವರಿ ಜಾಗ ವಾಪಸ್‌; ಸಚಿವ ದರ್ಶನಾಪುರ

ಬೆಳಗಾವಿ; ನೈಸ್ ಸಂಸ್ಥೆಗೆ ಕೊಟ್ಟಿರುವ ಹೆಚ್ಚುವರಿ ಭೂಮಿಯನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಲಿದೆ ಎಂದು ಸಣ್ಣ ಕೈಗಾರಿಕಾ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ಗೌಡ ದರ್ಶನಾಪುರ ಸದನಕ್ಕೆ ತಿಳಿಸಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ತುಳಸಿ ಮುನಿರಾಜುಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಉತ್ತರ ಕೊಟ್ಟರು.

ನೈಸ್‌ ಸಂಸ್ಥೆ ಕೊಟ್ಟ ಜಮೀನಿನಲ್ಲಿ 554 ಎಕರೆಯನ್ನು ಸರ್ಕಾರ ವಾಪಸ್‌ ಪಡೆಯುತ್ತದೆ. ಆದಷ್ಟು ಬೇಗ ಈ ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ಪರಿಶೀಲನೆ ನಡೆಸಲು ಸೂಚಿಸಲಾಗಿದೆ. ಸರ್ವೇ ಕಾರ್ಯ ಕೂಡಾ ನಡೆಯುತ್ತಿದ್ದು, ಸರ್ವೇ ಮುಗಿದ ಕೂಡಲೇ ಜಾಗ ವಶಪಡಿಸಿಕೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

Share Post