Politics

ಕೊನೆಗೂ ಕೋಲಾರದಲ್ಲಿ 3 ನೇ ಅಭ್ಯರ್ಥಿ ಕಣಕ್ಕೆ; ಯಾರು ಈ ಗೌತಮ್‌?

ಕೋಲಾರ; ನಿನ್ನೆ ಸಚಿವ ಕೆ.ಹೆಚ್‌.ಮುನಿಯಪ್ಪ ಅವರು ಪದೇ ಪದೇ ಹೇಳಿ ಒಂದು ಹಿಂಟ್‌ ಕೊಟ್ಟಿದ್ದರು.. ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಎರಡೂ ಬಣಗಳನ್ನು ಬಿಟ್ಟು ಮೂರನೇ ಅಭ್ಯರ್ಥಿಗೆ ಟಿಕೆಟ್‌ ಕೊಡುವ ಸಾಧ್ಯತೆ ಬಗ್ಗೆ ಮಾತನಾಡಿದ್ದರು.. ಅದರಂತೆಯೇ ಆಗಿದೆ.. ಇಂದು ಕೋಲಾರ ಕ್ಷೇತ್ರಕ್ಕೆ ಕಾಂಗ್ರೆಸ್‌ ಟಿಕೆಟ್‌ ಘೋಷಣೆ ಮಾಡಿದ್ದು, ಕೆ..ವಿ.ಗೌತಮ್‌ ಎಂಬುವವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಲಾಗಿದೆ.. ಈ ಮೂಲಕ ಕೆ.ಹೆಚ್‌.ಮುನಿಯಪ್ಪ ಬಣ ಹಾಗೂ ರಮೇಶ್‌ ಕುಮಾರ್‌ ಬಣ ಎರಡಕ್ಕೂ ಬಿಟ್ಟು ಮೂರನೇ ವ್ಯಕ್ತಿಗೆ ಮಣೆ ಹಾಕಿದಂತಾಗಿದೆ..

ಇದನ್ನೂ ಓದಿ; ಕುಮಾರಸ್ವಾಮಿಗೆ ಆಪರೇಷನ್‌ ಆಗಿದ್ದರ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕಾಂಗ್ರೆಸ್‌ ಶಾಸಕ

ಯಾರು ಈ ಕೆ.ವಿ.ಗೌತಮ್‌..?;

ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಸಚಿವ ಕೆ.ಹೆಚ್‌.ಮುನಿಯಪ್ಪ ಅವರು ತಮ್ಮ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್‌ ಬಯಸಿದ್ದರು.. ಆದ್ರೆ ಇದಕ್ಕೆ ರಮೇಶ್‌ ಕುಮಾರ್‌ ಬಣದ ನಾಯಕರು ವಿರೋಧ ವ್ಯಕ್ತಪಡಿಸಿದ್ದರು.. ಅಷ್ಟೇ ಏಕೆ, ಐವರು ಶಾಸಕರು ರಾಜೀನಾಮೆಗೂ ಮುಂದಾಗಿದ್ದರು.. ಇದೀಗ ಇಬ್ಬರಿಗೂ ಬಿಟ್ಟು ಕೆ.ವಿ.ಗೌತಮ್‌ ಎಂಬುವವರಿಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ.. ಇವರ ಹೆಸರು ಇದುವರೆಗೂ ಚರ್ಚೆಗೇ ಬಂದಿರಲಿಲ್ಲ.. ಆದ್ರೆ ಇದ್ದಕ್ಕಿದ್ದಂತೆ ಈ ಹೆಸರನ್ನು ಘೋಷಣೆ ಮಾಡಲಾಗಿದೆ.. ಇವರದ್ದು ಕೂಡಾ ರಾಜಕೀಯ ಕುಟುಂಬವೇ.. ಇವರ ತಂದೆ ವಿಜಯ್‌ ಕುಮಾರ್‌ ಅವರು ಮೇಯರ್‌ ಆಗಿದ್ದವರು.. ಬೆಂಗಳೂರಿನಲ್ಲಿ ಅವರು ಹಲವು ವರ್ಷಗಳಿಂದ ನೆಲೆಸಿದ್ದು, ಅವರು ಕೋಲಾರ ಮೂದವರು ಎಂದು ತಿಳಿದುಬಂದಿದೆ.. ಪರಿಶಿಷ್ಟ ಜಾತಿಯ ಎಡಗೈ ಸಮುದಾಯದ ಗೌತಮ್‌ ಯುವಕರಾಗಿದ್ದು, ಇವರನ್ನು ಕಾಂಗ್ರೆಸ್‌ ಹೈಕಮಾಂಡ್‌ ಕಣಕ್ಕಿಳಿಸಿದೆ..

ಇದನ್ನೂ ಓದಿ; ಕಣ್ಣು ಮಂಜಾಗುತ್ತಿದೆಯಾ..?; ಹಾಗಾದರೆ ಈ ಟ್ರಿಕ್ಸ್‌ ಬಳಸಿ, ಕಣ್ಣುಗಳನ್ನು ಕಾಪಾಡಿ!

ಹೈಕಮಾಂಡ್‌ ಬಳಿ ತೀವ್ರ ಲಾಬಿ ಮಾಡಿದ್ದ ಕೆ.ಹೆಚ್‌.ಮುನಿಯಪ್ಪ;

ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯ ಸರ್ಕಾರದ ಹಾಲಿ ಸಚಿವ ಕೆ.ಹೆಚ್‌.ಮುನಿಯಪ್ಪ ಅವರು ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಸತತ ಏಳು ಬಾರಿ ಗೆದ್ದು ಬಂದಿದ್ದರು.. ಆದ್ರೆ ಕಳೆದ ಬಾರಿ ಅವರು ಬಿಜೆಪಿಯ ಮುನಿಸ್ವಾಮಿ ವಿರುದ್ಧ ಸೋತಿದ್ದರು.. ಆದ್ರೆ ಈ ಬಾರಿ ಅವರು ತಮ್ಮ ಅಳಿಯನಿಗೆ ಟಿಕೆಟ್‌ ಕೇಳಿದ್ದರು.. ಹೈಕಮಾಂಡ್‌ ಬಳಿ ತೀವ್ರ ಲಾಬಿ ಮಾಡಿದ್ದರು.. ಇದರಿಂದಾಗಿ ಹೈಕಮಾಂಡ್‌ ಕೂಡಾ ಇದಕ್ಕೆ ಒಪ್ಪಿಗೆ ಸೂಚಿಸಿತ್ತು ಎನ್ನಲಾಗಿದೆ.. ಇದು ತಿಳಿಯುತ್ತಿದ್ದಂತೆ ಸಚಿವ ಸುಧಾಕರ್‌ ಸೇರಿ ಐವರು ಶಾಸಕರು ರಾಜೀನಾಮೆಗೆ ಮುಂದಾಗಿದ್ದರು.. ಈ ಹಿನ್ನೆಲೆಯಲ್ಲಿ ಅಭ್ಯರ್ಥಿ ಘೋಷಣೆ ಮುಂದೂಡಲಾಗಿತ್ತು… ಕೊನೆಗೆ ಹೈಕಮಾಂಡ್‌ ಇಬ್ಬರಿಗೂ ಬೇಡ ಎಂದು ಮೂರನೆಯವರಿಗೆ ಟಿಕೆಟ್‌ ಕೊಟ್ಟಿದೆ..

ಇದನ್ನೂ ಓದಿ; ಈ ತರಕಾರಿ ನೀರು ಕುಡಿದರೆ ಸ್ಲಿಮ್ ಆಗಬಹುದು!

ಎಡಗೈ ಸಮುದಾಯಕ್ಕೆ ಯಾಕೆ ಟಿಕೆಟ್‌..?

ರಾಜ್ಯದ  28 ಲೋಕಸಭಾ ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳು ಪರಿಶಿಷ್ಟ ಜಾತಿಗೆ ಮೀಸಲಿವೆ.. ಕಾಂಗ್ರೆಸ್‌ ಪಕ್ಷ ಈ ಕ್ಷೇತ್ರಗಳಲ್ಲಿ ಇಬ್ಬರು ಎಡಗೈ, ಇಬ್ಬರು ಬಲಗೈ ಹಾಗೂ ಇನ್ನೊಂದು ಕ್ಷೇತ್ರ ಲಂಬಾಣಿ ಅಥವಾ ಭೋವಿ ಸಮುದಾಯಕ್ಕೆ ನೀಡುತ್ತಾ ಬಂದಿತ್ತು.. ಆದ್ರೆ ಈ ಬಾರಿ, ವಿಜಯಪುರ, ಕಲಬುರಗಿ, ಚಾಮರಾನಗರ ಕ್ಷೇತ್ರಗಳನ್ನು ಬಲಗೈ ಸಮುದಾಯಕ್ಕೆ ನೀಡಿದೆ.. ಕೋಲಾರದಲ್ಲೂ ಬಲಗೈ ಸಮುದಾಯಕ್ಕೇ ಟಿಕೆಟ್‌ ನೀಡಿದರೆ ಎಡೈ ಸಮಯದಾಯಕ್ಕೆ ಮೋಸ ಮಾಡಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಎಡಗೈ ಸಮುದಾಯದ ಗೌತಮ್‌ ಗೆ ಟಿಕೆಟ್‌ ನೀಡಲಾಗಿದೆ.. ಚಿತ್ರದುರ್ಗದಲ್ಲಿ ಕೂಡಾ ಎಡಗೈ ಸಮುದಾಯದ ಬಿ.ಎನ್‌.ಚಂದ್ರಪ್ಪಗೆ ಟಿಕೆಟ್‌ ನೀಡಲಾಗಿದೆ.. ಇದರಿಂದಾಗಿ ಮೂವರು ಬಲಗೈ ಹಾಗೂ ಇಬ್ಬರು ಎಡಗೈ ಸಮಯದಾಯದ ನಾಯಕರಿಗೆ ಟಿಕೆಟ್‌ ನೀಡಿದಂತಾಗುತ್ತದೆ..

ಇದನ್ನೂ ಓದಿ; ಇದು ಬಡವರ ಸಂಜೀವಿನಿ; ತಪ್ಪದೇ ತಂದು ಕುಡಿಯಿರಿ..!

3ನೇ ವ್ಯಕ್ತಿಗೆ ಕೊಟ್ಟರೆ ಗೆಲ್ಲೋದು ಕಷ್ಟವಾ..?

ನಿನ್ನೆ ಕೆ.ಹೆಚ್‌.ಮುನಿಯಪ್ಪ ಮಾತನಾಡುತ್ತಾ ಮೂರನೇ ವ್ಯಕ್ತಿ ಟಿಕೆಟ್‌ ಕೊಟ್ಟರೆ ಎರಡೂ ಬಣಗಳಿಗೂ ಬೇಸರ ಆಗುತ್ತದೆ.. ಇದರಿಂದಾಗಿ ಎರಡೂ ಕಡೆಯವರೂ ಕೆಲಸ ಮಾಡೋದಿಲ್ಲ.. ಆಗ ನಮ್ಮ ಅಭ್ಯರ್ಥಿ ಸೋಲು ದಾರಿಯಾಗುತ್ತದೆ ಎಂದು ಹೇಳಿದ್ದರು.. ಇದೀಗ ಹೈಕಮಾಂಡ್‌ ಹೊಸ ಅಭ್ಯರ್ಥಿಗೆ ಮಣೆ ಹಾಕಿದೆ.. ಜೊತೆಗೆ ಗೌತಮ್‌ ಅವರದ್ದು ಕೋಲಾರ ಮೂಲವಾದರೂ, ಅವರು ಬೆಂಗಳೂರಿನಲ್ಲಿ ನೆಲೆಸಿ ದಶಕಗಳೇ ಕಳೆದಿವೆ.. ಹೀಗಿರುವಾಗ ಅವರು ಗೆಲ್ಲುತ್ತಾರೆಯೇ..? ಎರಡೂ ಬಣದವರು ಗೌತಮ್‌ ಗೆ ಸಪೋರ್ಟ್‌ ಮಾಡುತ್ತಾರೆಯೇ ಎಂಬ ಪ್ರಶ್ನೆ ಎದ್ದಿದೆ..

ಇದನ್ನೂ ಓದಿ;ಈ ಲಕ್ಷಣಗಳಿದ್ದರೆ ನಿಮ್ಮ ಕಿಡ್ನಿಯಲ್ಲಿ ಸ್ಟೋನ್‌ ಇರಬಹುದು!

Share Post