Politics

ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಮತದಾನ

ಹಾವೇರಿ: ಇಂದು ವಿಧಾನ ಪರಿಷತ್‌ ಚುನಾವಣೆ ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಮತ ಚಲಾಯಿಸಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕು ಪಂಚಾಯಿತಿಯ ಮತಗಟ್ಟೆ 297ರಲ್ಲಿ ಮತದಾನ ಮಾಡಿದ್ದಾರೆ. ಹುಬ್ಬಳ್ಳಿ ವಿಮಾಣ ನಿಲ್ದಾಣದಿಂದ ನೇರವಾಗಿ ರಸ್ತೆ ಮೂಲಕ ಶಿಗ್ಗಾವಿಗೆ ಭೇಟಿ ನೀಡಿದ್ದಾರೆ. ಪರಿಷತ್‌ ಚುನಾವಣೆ ಕುರಿತಂತೆ ಸಿಎಂ ಮಾತನಾಡಿ ಸ್ಪರ್ಧೆ ಮಾಡಿರುವ ಎಲ್ಲಾ ಕ್ಷೇತ್ರಗಳಲ್ಲಿ ವಿಜಯ ಪತಾಕೆ ಹಾರಿಸುವ ಸಾಧ್ಯತೆ ಇದೆ ಎಂದಿದ್ದಾರೆ.

Share Post