CinemaNational

ಒಡಿಯಾ ಖ್ಯಾತ ನಟ ರೈಮೋಹನ್‌ ಪರಿದಾ ಆತ್ಮಹತ್ಯೆ

ಒಡಿಶಾ; ಹಿರಿಯ ಒಡಿಯಾ ನಟ ರೈಮೋಹನ್ ಪರಿದಾ(56) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಳನಟನ ಪಾತ್ರಗಳಲ್ಲಿ ನಟಿಸುತ್ತಿದ್ದ ರೈಮೋಹನ್‌ ಪರಿದಾ ಭುವನೇಶ್ವರದ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆಂದು ತಿಳಿದುಬಂದಿದೆ. ಆದ್ರೆ ಘಟನೆಗೆ ಕಾರಣ ಮಾತ್ರ ಗೊತ್ತಿಲ್ಲ.

 

ಜುಲೈ 10, 1963ರಂದು ಜನಿಸಿದ ರೈಮೋಹನ್ ಪರಿದಾ ಅವರು ಈವರೆಗೆ 40ಕ್ಕೂ ಹೆಚ್ಚು ಒಡಿಯಾ ಚಿತ್ರಗಳು ಮತ್ತು 15 ಬೆಂಗಾಲಿ ಚಿತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ಸ್ಟೇಜ್‌ ಕಾರ್ಯಕ್ರಮಗಳನ್ನೂ ಅವರು ನೀಡುತ್ತಿದ್ದರು. ಒಡಿಶಾದಲ್ಲಿ ತುಂಬಾ ಫೇಮಸ್‌ ಆಗಿದ್ದ ನಟ, ಇದ್ದಕ್ಕಿದ್ದಂತೆ ಈ ರೀತಿ ಜೀವನ ಕೊನೆಯಾಗಿಸಿಕೊಂಡಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

Share Post