InternationalLifestyle

Missworld-2024; ಭಾರತದಲ್ಲಿ 71ನೇ ವಿಶ್ವ ಸುಂದರಿ ಸ್ಪರ್ಧೆ; ಹೇಗೆ ನಡೆಯುತ್ತೆ ಗೊತ್ತಾ ಸ್ಪರ್ಧೆ..?

ನವದೆಹಲಿ;  27 ವರ್ಷಗಳ ಬಳಿಕ ಭಾರತ ವಿಶ್ವ ಸುಂದರಿ ಸ್ಪರ್ಧೆಯ ಆತಿಥ್ಯ ವಹಿಸಿಕೊಂಡಿದೆ. ಇದೇ ಫೆಬ್ರವರಿ 18 ರಿಂದ ಮಾರ್ಚ್‌ 9 ರವರೆಗೆ ಭಾರತದಲ್ಲಿ ಈ ವಿಶ್ವಸುಂದರಿ ಸ್ಪರ್ಧೆ ನಡೆಯಲಿದೆ. ಈ ಬಾರಿ ದೆಹಲಿಯ ಭಾರತ್‌ ಮಂಟಪ ಹಾಗೂ ಇತರೆ ವಿವಿಧ ಸ್ಥಳಗಳಲ್ಲಿ ಈ ಸ್ಪರ್ಧೆ ನಡೆಸಲಾಗುತ್ತದೆ. ಸುಮಾರು 120 ದೇಶಗಳಿಂದ ಸ್ಪರ್ಧಿಗಳು ಆಗಮಿಸುತ್ತಿದ್ದಾರೆ. ಈ ಸಂಬಂಧ ಮಾಹಿತಿ ನೀಡಲು ನಿನ್ನೆ ಸುದ್ದಿಗೋಷ್ಠ ನಡೆಸಲಾಗಿದೆ. ಇದರಲ್ಲಿ ಹಾಲಿಮ ವಿಶ್ವ ಸುಂದರಿ, ಪೋಲೆಂಡ್‌ನ ಕರೋಲಿನಾ ಬಿಲಾವ್ಸ್ಕಾ, ಮಾಜಿ ವಿಜೇತರಾದ ಟೋನಿ ಆನ್ ಸಿಂಗ್, ವನೆಸ್ಸಾ ಪೊನ್ಸ್ ಡಿ ಲಿಯಾನ್, ಮತ್ತು ಭಾರತದ ಮಾನುಷಿ ಛಿಲ್ಲರ್ ಭಾಗವಹಿಸಿದ್ದರು.

ಇದನ್ನೂ ಓದಿ; Clown Fish; ಈ ಮೀನುಗಳು ಗಂಡಾಗಿ ಹುಟ್ಟುತ್ತೆ.. ಹೆಣ್ಣಾಗಿ ಬದಲಾಗುತ್ತೆ..!

1996ರಲ್ಲಿ ಬೆಂಗಳೂರಿನಲ್ಲಿ ನಡೆದಿತ್ತು ವಿಶ್ವಸುಂದರ ಸ್ಪರ್ಧೆ;

1996ರಲ್ಲಿ ಬೆಂಗಳೂರಿನಲ್ಲಿ ನಡೆದಿತ್ತು ವಿಶ್ವಸುಂದರ ಸ್ಪರ್ಧೆ; 1996ರಲ್ಲಿ ಬೆಂಗಳೂರಿನಲ್ಲಿ ವಿಶ್ವಸುಂದರಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಮೊದಲ ಭಾರತ ಅಂಧು ಭಾರತ ವಿಶ್ವಸುಂದರಿ ಸ್ಪರ್ಧೆಯ ಆತಿಥ್ಯ ವಹಿಸಿತ್ತು. ಬಾಲಿವುಡ್‌ ಹಿರಿಯ ನಟ ಅಮಿತಾ ಭಚ್ಚನ್‌ ಅವರು ಈ ಸ್ಪರ್ಧೆಯ ನೇತೃತ್ವ ವಹಿಸಿಕೊಂಡಿದ್ದರು. ಅಂದು ಕೂಡಾ ಸುಮಾರು 130 ದೇಶಗಳ ಸುಂದರಿಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ; Early Retirement Plan; 45 ವರ್ಷಕ್ಕೇ ನಿವೃತ್ತಿ, ಸಾಯೋವರೆಗೂ ಸುಖದ ಸುಪ್ಪತ್ತಿಗೆಯಲ್ಲಿ ಜೀವಿಸಬಹುದು!

ಈವರೆಗೆ ಭಾರತದ ಆರು ಮಂದಿಗೆ ವಿಶ್ವಸುಂದರಿ ಕಿರೀಟ!

ಈವರೆಗೆ ಭಾರತದ ಆರು ಮಂದಿಗೆ ವಿಶ್ವಸುಂದರಿ ಕಿರೀಟ!; ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾರತೀಯ ಸ್ಪರ್ಧಿಗಳು ಭಾಗವಹಿಸುತ್ತಾರೆ. ಇದುವರೆಗೂ ಭಾರತದ ಆರು ಮಂದಿ ಸುಂದರಿಯರು ವಿಶ್ವಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

1966ರಲ್ಲಿ ಮೊದಲ ಬಾರಿಗೆ ರೀಟಾ ಫರಿಯಾ ಅವರು ಭಾರತಕ್ಕೆ ಪ್ರತಿಷ್ಠಿತ ವಿಶ್ವ ಸುಂದರಿ ಪ್ರಶಸ್ತಿ ತಂದುಕೊಟ್ಟಿದ್ದರು. ಅನಂತರ 1994 ರಲ್ಲಿ ಕರ್ನಾಟಕದ ಮಂಗಳೂರು ಮೂಲದವರಾದ ನಟಿ ಐಶ್ವರ್ಯಾ ರೈಗೆ ವಿಶ್ವಸುಂದರಿ ಕಿರೀಟ ಒಲಿದಿತ್ತು.  1997ರಲ್ಲಿ ಡಯಾನಾ ಹೇಡನ್ ಹಾಗೂ 1999ರಲ್ಲಿ ಯುಕ್ತಾ ಮುಖಿ ಅವರಿಗೆ ವಿಶ್ವಸುಂದರಿ ಕಿರೀಟ ದಕ್ಕಿತ್ತು. ಇನ್ನು  2000ರಲ್ಲಿ ಪ್ರಿಯಾಂಕಾ ಚೋಪ್ರಾ ಹಾಗೂ 2017ರಲ್ಲಿ ಮಾನುಷಿ ಚಿಲ್ಲರ್ ಈ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ; Tattoo Aftercare; ಟ್ಯಾಟೂ ಹಾಕಿಸಿಕೊಂಡ ಮೇಲೆ ಈ ಜಾಗ್ರತೆ ಇರಲೇಬೇಕು!

ಏನಿದು ವಿಶ್ವಸುಂದರಿ ಸ್ಪರ್ಧೆ..? ಯಾರು, ಹೇಗೆ ನಡೆಸುತ್ತಾರೆ..?;

ಏನಿದು ವಿಶ್ವಸುಂದರಿ ಸ್ಪರ್ಧೆ..? ಯಾರು, ಹೇಗೆ ನಡೆಸುತ್ತಾರೆ..?; ವಿಶ್ವಸುಂದರಿ ಸ್ಪರ್ಧೆಯನ್ನು 1951ರಲ್ಲಿ ಎರಿಕ್ ಮೊರ್ಲೆ ಅವರು ಯುನೈಟೆಡ್ ಕಿಂಗ್‌ಡಂನಲ್ಲಿ ಶುರು ಮಾಡಿದರು. ಫೆಸ್ಟಿವಲ್‌ ಆಫ್‌ ಬ್ರಿಟನ್‌ ಆಚರಣೆಗಳು ನಡೆಯುತ್ತಿದ್ದವು. ಈ ವೇಳೆ ಎರಿಕ್‌ ಮೊರ್ಲಿ ಅವರು ಬಿಕಿನಿ ಸ್ಪರ್ಧೆ ಏರ್ಪಾಟು ಮಾಡಿದ್ದರು. ಇದು ಸಾಕಷ್ಟು ಪ್ರಚಾರ ಪಡೆದುಕೊಂಡಿತ್ತು. ಅದನ್ನೇ ನಂತರ ಮಿಸ್‌ ವರ್ಲ್ಡ್‌ ಎಂದು ಕರೆಯಲಾಯಿತು.

 

Share Post