NationalPolitics

Citizenship Amendment Act; ಚುನಾವಣೆಗೆ ಮೊದಲು CAA ಜಾರಿ; ಅಮಿತ್‌ ಶಾ

ನವದೆಹಲಿ; 2019ರಲ್ಲಿ ಸಂಸತ್ತಿನಲ್ಲಿ ಸಿಎಎ (Citizenship Amendment Act) ಅಂಗೀಕಾರಗೊಂಡಿತ್ತು. ಆದ್ರೆ ಇದುವರೆಗೂ ಜಾರಿ ಮಾಡಿರಲಿಲ್ಲ. ವಿರೋಧ ಪಕ್ಷಗಳು ಹಾಗೂ ಹಲವು ಸಂಘಟನೆಗಳು CAA ವಿರುದ್ಧ ಹೋರಾಟಗಳನ್ನು ಮಾಡಿದ್ದರು. ಆದ್ರೆ ಇದೀಗ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು CAA ಜಾರಿ ಮಾಡುವ ಭರವಸೆ ಕೊಟ್ಟಿದ್ದಾರೆ. ಲೋಕಸಭಾ ಚುನಾವಣೆಗೆ ಮೊದಲೇ CAA ಜಾರಿಗೆ ತರುತ್ತೇವೆ ಎಂದು ಹೇಳುವ ಮೂಲಕ ದೇಶದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.

ಮುಸ್ಲಿಂ ಸಹೋದರರನ್ನು ಮಿಸ್‌ಲೀಡ್‌ ಮಾಡುತ್ತಿದ್ದಾರೆ!;

ಮುಸ್ಲಿಂ ಸಹೋದರರನ್ನು ಮಿಸ್‌ಲೀಡ್‌ ಮಾಡುತ್ತಿದ್ದಾರೆ!; ಮುಂದುವರೆದು ಮಾತನಾಡಿರುವ ಅಮಿತ್‌ ಶಾ ಅವರು, CAA ಯಿಂದ ದೇಶದಲ್ಲಿ ಮುಸ್ಲಿಮರಿಗೆ ಯಾವುದೇ ತೊಂದರೆಯಾಗೋದಿಲ್ಲ. ಆದರೂ ಕೂಡಾ ಕೆಲವರು ವಿನಾಕಾರಣ ಮುಸ್ಲಿಮ್‌ ಸಹೋದರರನ್ನು ಮಿಸ್‌ ಲೀಡ್‌ ಮಾಡುತ್ತಿದ್ದಾರೆ.

ಈ ಕಾನೂನು ಜಾರಿಗೆ ಬರುವುದರಿಂದ ಭಾರತದಲ್ಲಿರುವ ಮುಸ್ಲಿಮರ ಪೌರತ್ವವನ್ನು ಯಾವ ಕಾರಣಕ್ಕೂ ಕಿತ್ತುಕೊಳ್ಳುವುದಿಲ್ಲ. ಈ ಕಾನೂನಿನ ಉದ್ದೇಶವೇ ಬೇರೆ ಇದೆ. ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶಗಳಿಂದ ಭಾರತಕ್ಕೆ ನುಸುಳುತ್ತಿದ್ದಾರೆ. ಆ ದೇಶಗಳಲ್ಲಿ ಕಿರುಕುಳು ಅನುಭವಿಸಿದವರು ಇಲ್ಲಿ ಬಂದು ಆಶ್ರಯ ಪಡೆಯುತ್ತಿದ್ದಾರೆ. ಅಂತಹವರಿಗೆ ನೀಡುತ್ತಿರುವ ಪೌರತ್ವ ರದ್ದಾಗುತ್ತದೆ. ಇಲ್ಲಿಯೇ ಇದ್ದವರು ಯಾಕೆ ದುಃಖ ಪಡೆಬೇಕು.ಇಲ್ಲಿರುವ ಮುಸಲ್ಮಾನರಿಗೆ ಯಾವುದೇ ತೊಂದರೆಯಾಗೋದಿಲ್ಲ ಎಂದು ಅಮಿತ್‌ ಶಾ ಭರವಸೆ ಕೊಟ್ಟಿದ್ದಾರೆ.

ಚುನಾವಣೆಯಲ್ಲಿ ನಮ್ಮದೇ ಗೆಲುವು, NDAಗೆ 400 ಸ್ಥಾನ!

ಚುನಾವಣೆಯಲ್ಲಿ ನಮ್ಮದೇ ಗೆಲುವು, NDAಗೆ 400 ಸ್ಥಾನ!;    ಲೋಕಸಭಾ ಚುನಾವಣೆಯಲ್ಲಿ ಮತ್ತೆ NDA ಅಧಿಕಾರ ಹಿಡಿಯಲಿದೆ. ಬಿಜೆಪಿಗೆ ಪಕ್ಷಕ್ಕೇ 370 ಸ್ಥಾನಗಳು ಬರಲಿವೆ. NDA ಗೆ ಕನಿಷ್ಠ 400 ಸ್ಥಾನಗಳು ಸಿಗಲಿವೆ. ನಮಗೆ ದೇಶದ ಜನ ಭರ್ಜರಿ ಬಹುಮತ ನೀಡಲಿದ್ದಾರೆ ಅಂತ ಅಮಿತ್‌ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಯಾರಿಗೆ ಬಹುಮತ ಸಿಗಲಿದೆ ಅನ್ನೋದು ಸಸ್ಪೆನ್ಸ್‌ ಆಗಿ ಎಲ್ಲಿಯೂ ಉಳಿದಿಲ್ಲ. ಎಲ್ಲರಿಗೂ ಇದು ಗೊತ್ತಾಗಿದೆ. ಮೋದಿಯವರೇ ಮೂರನೇ ಬಾರಿಯೂ ಪ್ರಧಾನಿಯಾಗುತ್ತಾರೆ ಎಂದು ಜನ ಮಾತಾಡುತ್ತಿದ್ದಾರೆ. ಯಾವ ಕಾರಣಕ್ಕೂ ಮೋದಿ ಮತ್ತೆ ಪ್ರಧಾನಿಯಾಗುವುದನ್ನು ತಪ್ಪಿಸೋದಕ್ಕೆ ಆಗೋದಿಲ್ಲ ಎಂದು ಅಮಿತ್‌ ಶಾ ಹೇಳಿದ್ದಾರೆ.

ಏನಿದು ಪೌರತ್ವ ಕಾಯ್ದೆ..?;

ಏನಿದು ಪೌರತ್ವ ಕಾಯ್ದೆ..?; 2019ರಲ್ಲೇ Citizenship Amendment Act ಸಂಸತ್ತಿನಲ್ಲಿ ಪಾಸ್‌ ಮಾಡಲಾಗಿದೆ. ಇನ್ನು ಅಧಿಸೂಚನೆ ಹೊರಡಿಸೋದು ಅಷ್ಟೇ ಬಾಕಿ ಇರೋದು. ಲೋಸಕಭಾ ಚುನಾವಣೆ ಒಳಗಾಗಿ ಅಧಿಸೂಚನೆ ಹೊರಡಿಸೋದಕ್ಕೆ ಕೇಂದ್ರ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅಂದಹಾಗೆ, ಈ ಮಸೂದೆಯಿಂದ ಯಾರಿಗೆ ಲಾಭ, ಯಾರಿಗೆ ನಷ್ಟ..? ಯಾಕೆ ಈ ಮಸೂದೆ ತರುತ್ತಿದ್ದಾರೆ ನೋಡೋಣ ಬನ್ನಿ..

ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದಲ್ಲಿ ಹಲವಾರು ಮಂದಿ ಧಾರ್ಮಿಕ ಕಿರುಕುಳ ಒಳ್ಳಗಾಗುತ್ತಿದ್ದಾರೆ. ಹಾಗೆ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ಭಾರತಕ್ಕೆ ಬಂದ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಭಾರತದ ಪೌರತ್ವ ನೀಡುವುದನ್ನು ಈ ಮಸೂದೆ ಪ್ರತಿಪಾದಿಸುತ್ತದೆ. ಆದ್ರೆ ಈ ಕಾಯ್ದೆಯಿಂದ ಮುಸ್ಲಿಮರನ್ನು ಮಾತ್ರ ದೂರ ಇಡಲಾಗಿದೆ. ಮುಸ್ಲಿಂ ರಾಷ್ಟ್ರಗಳಿಂದ ಕಿರುಕುಳ ಆಗಿದೆ ಎಂದು ಇಲ್ಲಿ ಬಂದವರಿಗೆ ಇಲ್ಲಿನ ಪೌರತ್ವ ನೀಡಲಾಗುವುದಿಲ್ಲ.  2014 ಡಿಸೆಂಬರ್ 31ರ ಮೊದಲು ಭಾರತಕ್ಕೆ ವಲಸೆ ಬಂದ ಮುಸ್ಲಿಮೇತರ ವಲಸಿಗರಿಗೆ ಭಾರತದ ಪೌರತ್ವ ನೀಡಲು ಈ ಮಸೂದೆಯಿಂದ ಅವಕಾಶವಿದೆ.

ಮಸೂದೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ. ಈ ಸಂದರ್ಭದಲ್ಲಿ ದೇಶದಲ್ಲಿ ದೊಡ್ಡ ದೊಡ್ಡ ಪ್ರತಿಭಟನೆಗಳು ನಡೆದಿದ್ದವು. ಇಲ್ಲಿರುವ ಮುಸ್ಲಿಮರನ್ನು ಒಕ್ಕಲೆಬ್ಬಿಸುವ ಮಸೂದೆ ಇದು ಎಂದು ಆರೋಪಿಸಲಾಗಿತ್ತು. ಇದಾದ ಮಾಡಿ ಈ ಬಗ್ಗೆ ಅಧಿಸೂಚನೆ ಹೊರಡಿಸಲು ಸರ್ಕಾರ ಸ್ವಲ್ಪ ಕಾದುನೋಡುವ ತಂತ್ರ ಅನುಸರಿಸಿತ್ತು. ಇದೀಗ ಕೇಂದ್ರ ಸರ್ಕಾರ ಈ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುತ್ತಿದೆ.

 

Share Post