HealthNational

ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಮೊಬೈಲ್‌ ಬ್ಲಾಸ್ಟ್‌; ಮಹಿಳೆ ದಾರುಣ ಸಾವು!

ಕಾನ್ಪುರ; ಮಹಿಳೆಯೊಬ್ಬರು ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಆಕೆಯ ಬಳಿ ಇದ್ದ ಮೊಬೈಲ್‌ ಬ್ಲಾಸ್ಟ್‌ ಆಗಿದ್ದು, ಮಹಿಳೆ ಸಾವನ್ನಪ್ಪಿದ್ದಾಳೆ.. ಮೊಬೈಲ್‌ ಬ್ಲಾಸ್ಟ್‌ ಆಗಿದ್ದರಿಂದಾಗಿ ಸ್ಕೂಟರ್‌ ನಿಯಂತ್ರಣ ತಪ್ಪಿದ್ದು, ಮಹಿಳೆ ಸ್ಕೂಟರ್‌ನಿಂದ ಹೊರಗೆ ಎಸೆಯಲ್ಪಟ್ಟಿದ್ದಾಳೆ.. ಇದರಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ..

ಇದನ್ನೂ ಓದಿ; ಪಟಾಕಿ ಕಿಡಿಯಿಂದ ಮದುವೆ ಚಪ್ಪರಕ್ಕೆ ಬೆಂಕಿ; ಒಂದೇ ಕುಟುಂಬದ ಆರು ಮಂದಿ ದುರ್ಮರಣ!

ಉತ್ತರ ಪ್ರದೇಶದ ಕಾನ್ಪುರದಲ್ಲಿ ಈ ದುರ್ಘಟನೆ ನಡೆದಿದೆ.. ಮಹಿಳೆ ಸ್ಕೂಟರ್‌ ನಲ್ಲಿ ಹೋಗುವಾಗ ಹೆಲ್ಮೆಟ್‌ ಧರಿಸಿರಲಿಲ್ಲ.. ಇಯರ್‌ ಫೋನ್‌ ಹಾಕಿಕೊಂಡು ಮೊಬೈಲ್‌ನಲ್ಲಿ ಹಾಡು ಕೇಳುತ್ತಾ ಸಂಚರಿಸುತ್ತಿದ್ದಳು.. ಈ ವೇಳೆ ಮೊಬೈಲ್‌ ಸ್ಫೋಟಗೊಂಡಿದೆ.. ಮೊಬೈಲ್‌ ಸ್ಫೋಟವಾಗುತ್ತಿದ್ದಂತೆ, ಮಹಿಳೆ ರಸ್ತೆಗೆ ಎಸೆಯಲ್ಪಟ್ಟಿದ್ದಾಳೆ.. ಹೆಲ್ಮೆಟ್‌ ಹಾಕದಿದ್ದರಿಂದ ಆಕೆಯ ತಲೆಗೆ ತೀವ್ರ ಪೆಟ್ಟಾಗಿತ್ತು.. ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರು.. ಆದ್ರೆ ಆಸ್ಪತ್ರೆಯಲ್ಲಿ ಮಹಿಳೆ ಮೃತಪಟ್ಟಿದ್ದಾಳೆ..

ಇದನ್ನೂ ಓದಿ; 14 ಕ್ಷೇತ್ರಗಳ ಮತದಾನ ಅಂತ್ಯ; ಮತದಾರ ಬರೆದ ಭವಿಷ್ಯ ಯಾರ ಪರ..?

ಫರೂಖಾಬಾದ್​​ ಜಿಲ್ಲೆಯ ನೆಹ್ರರಿಯಾ ಗ್ರಾಮದ ಪೂಜಾ(28) ಸಾವನ್ನಪ್ಪಿದ ಮಹಿಳೆಯಾಗಿದ್ದಾರೆ.. ಈಕೆ ರೈಲು ನಿಲ್ದಾಣಕ್ಕೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದಳು.. ಈ ವೇಳೆ ಈ ದುರ್ಘಟನೆ ನಡೆದಿದೆ..

ಇದನ್ನೂ ಓದಿ; ಮತದಾನದ ವೇಳೆ ಹೃದಯಾಘಾತ; ರಾಜ್ಯದಲ್ಲಿ ಮೂವರ ಸಾವು!

Share Post