ಮಹಿಳಾ ಎಸ್ಸೈ ಕುತ್ತಿಗೆ ಚಾಕುವಿನಿಂದ ಇರಿದ ವ್ಯಕ್ತಿ..!
ತಿರುನಲ್ವೇಲಿ: ತಮಿಳುನಾಡಿದ ತಿರುನಲ್ವೇಲಿ ಬಳಿಯ ಪಜಗೂರು ಗ್ರಾಮದಲ್ಲಿ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗೆ ವ್ಯಕ್ತಿಯೊಬ್ಬ ಚಾಕುವಿನಿಂದ ತಿವಿದಿರುವ ಘಟನೆ ನಡೆದಿದೆ. ಗ್ರಾಮದಲ್ಲಿ ಉತ್ಸವವೊಂದು ನಡೆಯುತ್ತಿದ್ದು, ಮಹಿಳಾ ಎಸ್ಸೈ ಮಾರ್ಗರೆಟ್ ಥೆರೆಸಾ ಅವರು ಅದರ ಭದ್ರತಾ ಉಸ್ತುವಾರಿ ವಹಿಸಿದ್ದರು. ಈ ವೇಳೆ ಆರುಮುಗಂ ಎಂಬಾತ, ಮಾರ್ಗರೆಟ್ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ.
ಆರುಮುಗಂ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಮಾರ್ಗರೇಟ್ ಅವರು ಆರುಮುಗಂ ವಿರುದ್ಧ ಕೇಸ್ ದಾಖಲಿಸಿ ಬಂಧಿಸಿದ್ದರು. ಇದ್ರಿಂದ ದ್ವೇಷ ಸಾಧಿಸಿದ್ದ ಆರುಮುಗಂ, ಎಸ್‌ಐ ಮಾರ್ಗರೆಟ್ ಉತ್ಸವ ಭದ್ರತಾ ವ್ಯವಸ್ಥೆ ನೋಡಿಕೊಳ್ಳುತ್ತಿದ್ದಾರೆ ಎಂದು ಗೊತ್ತಾಗಿ ಅಲ್ಲಿಗೆ ಬಂದಿದ್ದಾನೆ. ಮಾರ್ಗರೇಟ್ ಕುತ್ತಿಗೆಗೆ ಇರಿದಿದ್ದಾನೆ. ಇದ್ರಿಂದ ಮಾರ್ಗರೇಟ್ ಅಲ್ಲಿಯೇ ಕುಸಿದುಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದುಕೊಂಡಿರುವ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ಮಾರ್ಗರೇಟ್ ಅವರಿಗೆ ಉನ್ನತ ಮಟ್ಟದ ಚಿಕಿತ್ಸೆ ನೀಡುವಂತೆ ಆದೇಶ ಹೊರಡಿಸಿದ್ದಾರೆ.