CrimeDistricts

ತುಮಕೂರಿನಲ್ಲಿ ಬಿರಿಯಾನಿ ಹೋಟೆಲ್‌ಗೆ ಬೆಂಕಿ!; 25 ಲಕ್ಷ ರೂ. ನಷ್ಟ..!

ತುಮಕೂರು; ಅಡುಗೆ ಅನಿಲ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡು ಬಿರಿಯಾನಿ ಹೋಟೆಲ್‌ ಸಂಪೂರ್ಣವಾಗಿ ಭಸ್ಮವಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.. ತುಮಕೂರು ನಗರದ ಗಂಗೋತ್ರಿ ರಸ್ತೆಯಲ್ಲಿ ಈ ದುರಂತ ನಡೆದಿದ್ದು, 25 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಮೊಬೈಲ್‌ ಬ್ಲಾಸ್ಟ್‌; ಮಹಿಳೆ ದಾರುಣ ಸಾವು!

ತುಮಕೂರಿನ ಗಂಗೋತ್ರಿಯಲ್ಲಿರುವ ಬಿರಿಯಾನಿ ಹೌಸ್‌ ಹೋಟೆಲ್‌ನಲ್ಲಿ ಈ ದುರ್ಘಟನೆ ನಡೆದಿದೆ.. ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ಆವರಿಸಿದೆ.. ನೆಲ ಮಹಡಿಯಲ್ಲಿದ್ದ ಎಲ್ಲಾ ಸಾಮಗ್ರಿಗಳೂ ಬೆಂಕಿಗಾಹುತಿಯಾಗಿವೆ.. ಇದರಿಂದಾಗಿ 25 ಲಕ್ಷ ರೂಪಾಯಿಗೂ ಹೆಚ್ಚು ನಷ್ಟವಾಗಿದೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಪಟಾಕಿ ಕಿಡಿಯಿಂದ ಮದುವೆ ಚಪ್ಪರಕ್ಕೆ ಬೆಂಕಿ; ಒಂದೇ ಕುಟುಂಬದ ಆರು ಮಂದಿ ದುರ್ಮರಣ!

ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.. ಈ ಮೂಲಕ ಬೇರೆಡೆಗೆ ಬೆಂಕಿ ಹರಡುವುದನ್ನು ತಪ್ಪಿಸಿದ್ದಾರೆ.. ಹೊಸ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ..

Share Post