CrimeHealth

ಪಟಾಕಿ ಕಿಡಿಯಿಂದ ಮದುವೆ ಚಪ್ಪರಕ್ಕೆ ಬೆಂಕಿ; ಒಂದೇ ಕುಟುಂಬದ ಆರು ಮಂದಿ ದುರ್ಮರಣ!

ಬಿಹಾರ; ಪಟಾಕಿ ಕಿಡಿ ಸಿಡಿದು ಮದುವೆ ಚಪ್ಪರಕ್ಕೆ ಬೆಂಕಿ ಬಿದ್ದಿದ್ದು, ಒಂದೇ ಕುಟುಂಬದ ಆರು ಮಂದಿ ಸಜೀವದಹನವಾಗಿದ್ದಾರೆ… ಇದರಿಂದಾಗಿ ಮದುವೆ ಮನೆ ಸಾವಿನ ಮನೆಯಾಗಿ ಮಾರ್ಪಟ್ಟಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ..

ಬಿಹಾರದ ದರ್ಬಾಂಗ ಪ್ರದೇಶದ ಅಲಿನಗರದಲ್ಲಿ ಈ ದುರಂತ ನಡೆದಿದೆ.. ಘಟನೆಯಲ್ಲಿ ಸುನಿಲ್ ಪಾಸ್ವಾನ್ (26), ಲಿಲಾ ದೇವಿ (23), ಕಾಂಚನ್ ದೇವಿ (26), ಸಿದ್ದಾರ್ಥ್ ಕುಮಾರ್ (4), ಶಶಾಂಕ್ ಕುಮಾರ್ (3), ಸಾಕ್ಷಿ ಕುಮಾರಿ (5) ಮೃತಪಟ್ಟಿದ್ದಾರೆ..

ನರೇಶ್‌ ಪಾಸ್ವಾನ್‌ ಎಂಬುವವರ ಮಗಳ ಮದುವೆಗೆ ಊರಿನಲ್ಲಿ ಸಿದ್ಧತೆ ನಡೆದಿತ್ತು.. ಮರನ ಕಡೆಯವರನ್ನು ಸ್ವಾಗತಿಸಲು ಪಟಾಕಿ ತರಿಸಲಾಗಿತ್ತು.. ಪಟಾಕಿ ಸಿಡಿಸಿದಾಗ, ಅದರ ಕಿಡಿ ಪೆಂಡಾಲ್‌ಗೆ ತಗುಲಿದೆ.. ಬೆಂಕಿ ಹೊತ್ತಿ ಉರಿಯುತ್ತಿದ್ದಾಗ ಎಲ್ಲರೂ ಅದನ್ನು ನಂದಿಸಲು ಹೋಗಿದ್ದಾರೆ.. ಇದೇ ವೇಳೆ ಬೆಂಕಿ ಗ್ಯಾಸ್‌ ಸಿಲಿಂಡರ್‌ಗೂ ತಗುಲಿದೆ..

ಇನ್ನು ಹತ್ತಿರದಲ್ಲೇ ಡೀಸೆಲ್‌ ಕೂಡಾ ಸಂಗ್ರಹಿಸಲಾಗಿತ್ತು.. ಅದಕ್ಕೂ ಬೆಂಕಿ ತಗುಲಿದ್ದರಿಂದ ದೊಡ್ಡ ಅನಾಹುತ ನಡೆದಿದೆ.. ದುರಂತದಲ್ಲಿ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿದ್ದಾರೆ.. ಹಲವರು ಸುಟ್ಟು ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ..

 

Share Post