Politics

14 ಕ್ಷೇತ್ರಗಳ ಮತದಾನ ಅಂತ್ಯ; ಮತದಾರ ಬರೆದ ಭವಿಷ್ಯ ಯಾರ ಪರ..?

ಬೆಂಗಳೂರು; ಕರ್ನಾಟಕ ಸೇರಿ ದೇಶದ 88 ಲೋಕಸಭಾ ಕ್ಷೇತ್ರಗಳ ಮತದಾನ ಇಂದು ಮುಕ್ತಾಯವಾಗಿದೆ.. ರಾಜ್ಯದಲ್ಲಿ ಬಹುತೇಕ ಶಾಂತಿಯುತವಾಗಿ ಮತದಾನ ನಡೆದಿದೆ.. ನಗರ ಪ್ರದೇಶಗಳಲ್ಲಿ ಕೊಂಚ ಮತದಾನ ಕಡಿಮೆಯಾಗಿದ್ದರೂ, ಗ್ರಾಮೀಣ ಪ್ರದೇಶದಲ್ಲಿ ಜನರು ಉತ್ಸಾಹದಿಂದ ಮತ ಚಲಾವಣೆ ಮಾಡಿದ್ದಾರೆ.. ರಾಜ್ಯದ 14 ಕ್ಷೇತ್ರಗಳಿಗೆ ಇಂದು ಮತದಾನ ನಡೆದಿದೆ.. ಉಳಿದ 14 ಕ್ಷೇತ್ರಗಳಿಗೆ ಮೇ 7 ರಂದು ಮತದಾನ ನಡೆಯಲಿದೆ..

ಒಟ್ಟು 7 ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಈಗ ಎರಡು ಹಂತದ ಮತದಾನ ಮುಕ್ತಾಯವಾದಂತಾಗಿದೆ.. ಮೊದಲ ಹಂತದಲ್ಲಿ 102 ಕ್ಷೇತ್ರಗಳಿಗೆ ಮತದಾನ ನಡೆದಿತ್ತು.. ಎರಡನೇ ಹಂತವಾದ ಇಂದು 88 ಕ್ಷೇತ್ರಗಳಿಗೆ ಮತದಾನ ನಡೆದಿದೆ.. ಇನ್ನೂ ಐದು ಹಂತಗಳ ಮತದಾನ ನಡೆಯೋದು ಬಾಕಿ ಇದೆ.. ಜೂನ್‌ 2 ರಂದು ಫಲಿತಾಂಶ ಬರಲಿದೆ..

14 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ವಿವರ;
================================
ಬೆಂಗಳೂರು ಕೇಂದ್ರ; ಪಿ.ಸಿ.ಮೋಹನ್​ ಅಭ್ಯರ್ಥಿ-ಬಿಜೆಪಿ, ಮನ್ಸೂರ್ ಅಲಿಖಾನ್-ಕಾಂಗ್ರೆಸ್‌
ಬೆಂಗಳೂರು ದಕ್ಷಿಣ; ತೇಜಸ್ವಿ ಸೂರ್ಯ-ಬಿಜೆಪಿ, ಸೌಮ್ಯಾ ರೆಡ್ಡಿ-ಕಾಂಗ್ರೆಸ್‌
ಬೆಂಗಳೂರು ಉತ್ತರ; ಶೋಭಾ ಕರಂದ್ಲಾಜೆ-ಬಿಜೆಪಿ, ರಾಜೀವ್​ ಗೌಡ-ಕಾಂಗ್ರೆಸ್‌
ಬೆಂಗಳೂರು ಗ್ರಾಮಾಂತರ; ಡಾ.ಸಿ.ಎನ್.ಮಂಜುನಾಥ್-ಬಿಜೆಪಿ​, ಡಿ.ಕೆ.ಸುರೇಶ್-ಕಾಂಗ್ರೆಸ್‌
ಕೋಲಾರ; ಮಲ್ಲೇಶ್​ ಬಾಬು-ಜೆಡಿಎಸ್‌, ಕೆ.ವಿ.ಗೌತಮ್-ಕಾಂಗ್ರೆಸ್‌
ತುಮಕೂರು; ವಿ.ಸೋಮಣ್ಣ-ಬಿಜೆಪಿ, ಮುದ್ದಹನುಮೇಗೌಡ-ಕಾಂಗ್ರೆಸ್‌
ಮೈಸೂರು-ಕೊಡಗು; ಯದುವೀರ್ ಒಡೆಯರ್-ಬಿಜೆಪಿ, ಲಕ್ಷ್ಮಣ್​-ಕಾಂಗ್ರೆಸ್‌
ಚಾಮರಾಜನಗರ; ಬಾಲರಾಜ್‌-ಬಿಜೆಪಿ, ಸುನಿಲ್‌ ಬೋಸ್‌-ಕಾಂಗ್ರೆಸ್‌
ದಕ್ಷಿಣ ಕನ್ನಡ; ಕ್ಯಾ.ಬ್ರಿಜೇಶ್‌ ಚೌಟ-ಬಿಜೆಪಿ, ಪದ್ಮರಾಜ್‌-ಕಾಂಗ್ರೆಸ್‌
ಚಿಕ್ಕಮಗಳೂರು-ಉಡುಪಿ; ಕೋಟ ಶ್ರೀನಿವಾಸ್ ಪೂಜಾರಿ-ಬಿಜೆಪಿ, ಜಯಪ್ರಕಾಶ್ ಹೆಗ್ಡೆ-ಕಾಂಗ್ರೆಸ್‌
ಹಾಸನ; ಪ್ರಜ್ವಲ್​ ರೇವಣ್ಣ-ಜೆಡಿಎಸ್‌, ಶ್ರೇಯಸ್-ಕಾಂಗ್ರೆಸ್‌​
ಮಂಡ್ಯ; ಹೆಚ್‌.ಡಿ.ಕುಮಾರಸ್ವಾಮಿ-ಜೆಡಿಎಸ್‌, ಸ್ಟಾರ್​ ಚಂದ್ರು (ವೆಂಕಟರಮಣೇಗೌಡ)-ಕಾಂಗ್ರೆಸ್‌
ಚಿಕ್ಕಬಳ್ಳಾಪುರ; ಡಾ.ಕೆ.ಸುಧಾಕರ್-ಬಿಜೆಪಿ​, ರಕ್ಷಾ ರಾಮಯ್ಯ-ಕಾಂಗ್ರೆಸ್‌
ಚಿತ್ರದುರ್ಗ; ಗೋವಿಂದ ಕಾರಜೋಳ-ಬಿಜೆಪಿ, ಬಿ.ಎನ್.ಚಂದ್ರಪ್ಪ-ಕಾಂಗ್ರೆಸ್‌

Share Post