NationalTechTechnology

ನದಿಯಾಳದಲ್ಲಿ ಓಡಲಿದೆ ಮೆಟ್ರೋ ರೈಲು; ಪ್ರಧಾನಿ ಮೋದಿ ಉದ್ಘಾಟನೆ!

ಮೆಟ್ರೋ ರೈಲು ಬಂದ ಮೇಲೆ ಕಾಸ್ಮೋಪಾಲಿಟನ್ ಸಿಟಿಗಳ ಸ್ವರೂಪವೇ ಬದಲಾಗಿದೆ… ನಗರವಾಸಿಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಸುಲಭವಾಗಿದೆ. ಟ್ರಾಫಿಕ್‌ ಕಿರಿಕಿರಿಯಿಂದ ನಗರಗಳ ಜನರು ತಪ್ಪಿಸಿಕೊಂಡಿದ್ದಾರೆ. ಇನ್ನು ಮೆಟ್ರೋ ರೈಲುಗಳು ಹೈದರಾಬಾದ್‌, ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ಹಲವು ನಗರಗಳಲ್ಲಿ ಓಡಾಡುತ್ತಿವೆ.. ಭೂಮಿಯ ಒಳಗೆ ಹಾಗೂ ಪಿಲ್ಲರ್‌ಗಳ ಮೇಲೆ ಮೆಟ್ರೋಗಳ ರೈಲುಗಳನ್ನು ಓಡಿಸಲಾಗುತ್ತಿದೆ. ಆದ್ರೆ ಇಂದು ಪಶ್ಚಿಮಬಂಗಾಳದಲ್ಲಿ ಮೆಟ್ರೋ ರೈಲು ಮಾರ್ಗವೊಂದನ್ನು ಉದ್ಘಾಟಿಸಲಾಗಿದೆ. ಈ ರೈಲು ಮಾರ್ಗದಲ್ಲಿ ನದಿಯೊಂದು ಬರಲಿದ್ದು, ರೈಲು ನದಿ ನೀರಿನಾಳದಲ್ಲಿ ಸಂಚಾರ ಮಾಡಲಿದೆ.

ಇದನ್ನೂ ಓದಿ; Loksabha; ಡಿ.ಕೆ.ಸುರೇಶ್‌ ವಿರುದ್ಧ ಡಾ.ಸಿ.ಎನ್‌.ಮಂಜುನಾಥ್‌ ಸ್ಪರ್ಧೆ ಫಿಕ್ಸ್‌!

ಹೂಗ್ಲಿ ನದಿಯಾಳದಲ್ಲಿ ಮೆಟ್ರೋ ರೈಲು ಓಡಾಟ;

ಹೂಗ್ಲಿ ನದಿಯಾಳದಲ್ಲಿ ಮೆಟ್ರೋ ರೈಲು ಓಡಾಟ;  ಕೋಲ್ಕತ್ತಾದಲ್ಲಿ ಇಂದಿನಿಂದ ನೀರೊಳಗಿನ ಮೆಟ್ರೋ ಸೇವೆಗಳು ಲಭ್ಯವಿದ್ದು, ಎಲ್ಲರಲ್ಲೂ ಉತ್ಸಾಹ ಮೂಡಿಸಿದೆ. ಹೂಗ್ಲಿ ನದಿಯಲ್ಲಿ ನಿರ್ಮಿಸಿರುವ ಸುರಂಗದಲ್ಲಿ ಬುಲೆಟ್ ವೇಗದಲ್ಲಿ ಮೆಟ್ರೋ ರೈಲು ಓಡಲಿದೆ. ಹೂಗ್ಲಿ ನದಿಯ ತಳದಿಂದ ಸುಮಾರು 5 ಕಿಮೀ ಮೆಟ್ರೋ ರೈಲು ಓಡುತ್ತಿದೆ. ಕೋಲ್ಕತ್ತಾ ಮೆಟ್ರೋ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ನಡೆಸುತ್ತಿದೆ. ಮೆಟ್ರೋ ರೈಲುಗಳು ನೀರಿನ ಮೇಲ್ಮೈಯಿಂದ 16 ಮೀಟರ್ ಕೆಳಗೆ ಓಡುತ್ತವೆ. 120 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ನೀರೊಳಗಿನ ಮೆಟ್ರೋ ರೈಲು ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಉದ್ಘಾಟಿಸಿದರು. 4.8 ಕಿಮೀ ಪೂರ್ವ-ಪಶ್ಚಿಮ ಮೆಟ್ರೋ ವಿಸ್ತರಣೆ ಕಾಮಗಾರಿಯನ್ನು ಒಟ್ಟು 4,965 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಗುರುವಾರದಿಂದ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ; Rahul Gandhi; ತೆಲಂಗಾಣದ ಖಮ್ಮಂನಿಂದ ರಾಹುಲ್‌ ಗಾಂಧಿ ಸ್ಫರ್ಧೆ ಬಹುತೇಕ ಫಿಕ್ಸ್‌!

ಕೋಲ್ಕತ್ತಾ-ಹೌರಾ ನಡುವೆ ಚಲಿಸುವ ಮೆಟ್ರೋ;

ಕೋಲ್ಕತ್ತಾ-ಹೌರಾ ನಡುವೆ ಚಲಿಸುವ ಮೆಟ್ರೋ; ದೇಶದ ಮೊದಲ ಮೆಟ್ರೋ ರೈಲು ಕೋಲ್ಕತ್ತಾದಲ್ಲಿ ಪ್ರಾರಂಭವಾಯಿತು. ಇದೀಗ ಈ ಅದ್ಭುತ ನೀರೊಳಗಿನ ಮೆಟ್ರೋ ರೈಲು ಕೂಡ ಕೋಲ್ಕತ್ತಾದ ಖಾತೆಗೆ ಸೇರಿದೆ. ಈ ನೀರೊಳಗಿನ ಮೆಟ್ರೋ ಕೋಲ್ಕತ್ತಾ-ಹೌರಾ ನಡುವೆ ಚಲಿಸುತ್ತದೆ. ಈ ಯೋಜನೆಯನ್ನು 2009 ರಲ್ಲಿ ಪ್ರಸ್ತಾಪಿಸಲಾಯಿತು. ಸುರಂಗದ ನಿರ್ಮಾಣವು 2017 ರಲ್ಲಿ ಪೂರ್ಣಗೊಂಡಿತು. ದಿಂಡಿ – ಹೌರಾ ಭಾರತದ ಅತ್ಯಂತ ಆಳವಾದ ಮೆಟ್ರೋ ನಿಲ್ದಾಣವನ್ನು ಹೊಂದಿದೆ.. ನೆಲಮಟ್ಟದಿಂದ 30 ಮೀಟರ್ ಕೆಳಗೆ. ಐಟಿ ಹಬ್ ಸಾಲ್ಟ್ ಲೇಕ್ ಸೆಕ್ಟರ್ ವಿ ನಂತಹ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸಲು ಕಾರಿಡಾರ್ ಸಹಾಯ ಮಾಡುತ್ತದೆ.

ಇದನ್ನೂ ಓದಿ; ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರಿಗೆ ಬಾಂಬ್‌ ಬೆದರಿಕೆ; ಇ-ಮೇಲ್‌ ರವಾನೆ

15,400 ಕೋಟಿ ರೂ. ಯೋಜನೆಗಳಿಗೆ ಚಾಲನೆ;

15,400 ಕೋಟಿ ರೂ. ಯೋಜನೆಗಳಿಗೆ ಚಾಲನೆ; ಪಶ್ಚಿಮ ಬಂಗಾಳದ ಭೇಟಿಯ ಭಾಗವಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಕೋಲ್ಕತ್ತಾದಲ್ಲಿ ರೂ.15,400 ಕೋಟಿ ಮೌಲ್ಯದ ವಿವಿಧ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಐದು ದಿನಗಳಲ್ಲಿ ಪಶ್ಚಿಮ ಬಂಗಾಳಕ್ಕೆ ಇದು ಅವರ ಎರಡನೇ ಭೇಟಿಯಾಗಿದೆ.

1970ರಲ್ಲಿ ಕೋಲ್ಕತ್ತಾ ಮೆಟ್ರೋ ಕಾಮಗಾರಿ ಶುರು ಮಾಡಲಾಗಿತ್ತು. ಆದರೆ, ಮೋದಿ ಸರ್ಕಾರ ಬಂದ ಮೇಲೆ ಮೆಟ್ರೋ ಕಾಮಗಾರಿಗಳು ವೇಗ ಪಡೆದುಕೊಂಡವು. ಈಗ ಕೋಲ್ಕತ್ತಾದಲ್ಲಿ ನಿತ್ಯ 7 ಲಕ್ಷ ಜನ ಪ್ರಯಾಣಿಸುತ್ತಿದ್ದಾರೆ.

ಇದನ್ನೂ ಓದಿ; ಮೋದಿಯವರನ್ನು ವಿಶ್ವವೇ ಒಪ್ಪಿದೆ, ನೀವ್ಯಾಕೆ ಮೋದಿ ವಿರುದ್ಧ ಮಾತಾಡ್ತೀರಿ?; ಸಿದ್ದರಾಮಯ್ಯಗೆ ದೇವೇಗೌಡರ ಪ್ರಶ್ನೆ

 

Share Post