BengaluruCrime

ಉಗ್ರ ಚಟುವಟಿಕೆಗೆ ಸಂಚು; ಮೂವರನ್ನು ವಶಕ್ಕೆ ಪಡೆದ ಎನ್‌ಐಎ ಅಧಿಕಾರಿಗಳು!

ಬೆಂಗಳೂರು; ಎನ್‌ಐಎ ಅಂದ್ರೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ನಿನ್ನೆ ಬೆಂಗಳೂರು ಸೇರಿ ಹಲವು ಕಡೆ ದಾಳಿ ಮಾಡಿದ್ದರು.. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಹಾಗೂ ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯ ಹಲವು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ್ದರು.. ಈ ವೇಳೆ ಮೂವರನ್ನು ವಶಕ್ಕೆ ಪಡೆದಿದ್ದು, ಹಲವು ಪೂರಕ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ; ನದಿಯಾಳದಲ್ಲಿ ಓಡಲಿದೆ ಮೆಟ್ರೋ ರೈಲು; ಪ್ರಧಾನಿ ಮೋದಿ ಉದ್ಘಾಟನೆ!

ಮೂವರನ್ನು ವಿಚಾರಣೆ ನಡೆಸುತ್ತಿರುವ ಎನ್‌ಐಎ;

ಮೂವರನ್ನು ವಿಚಾರಣೆ ನಡೆಸುತ್ತಿರುವ ಎನ್‌ಐಎ; ಬೆಂಗಳೂರಿನಲ್ಲಿ ಸೈಯದ್ ಖೈಲ್ ಎಂಬಾತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಇನ್ನು ಕೇರಳ ಇಡುಕ್ಕಿ ನಿವಾಸಿ, ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಬಿಜು ಅಬ್ರಹಾಂ ಹಾಗೂ ಅತ್ತಾವರ ಗ್ರಾಮದ ನಬೀದ್ ಎಂಬಾತನನ್ನು ಕೂಡಾ ಎನ್‌ಐಎ ಅಧಿಕಾರಿಗಳು ಉಗ್ರ ಚಟುವಟಿಕೆ ನಡೆಸುತ್ತಿದ್ದಾರೆಂಬ ಅನುಮಾನದ ಮೇರೆಗೆ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ನಾಸೀರ್‌ ಖಾನ್‌ಗಾಗಿ ಎನ್‌ಐಎ ಅಧಿಕಾರಿಗಳ ಹುಡುಕಾಟ;

ನಾಸೀರ್‌ ಖಾನ್‌ಗಾಗಿ ಎನ್‌ಐಎ ಅಧಿಕಾರಿಗಳ ಹುಡುಕಾಟ; ಇನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿ ನಾಸಿರ್ ಖಾನ್ ಎಂಬಾತನಿಗಾಗಿ ಎನ್‌ಐಎ ಅಧಿಕಾರಿಗಳು ಹುಡುಕಾಡಿದ್ದಾರೆ. ಆದ್ರೆ ಪತ್ತೆಯಾಗಿಲ್ಲ. ಇದೇ ವೇಳೆ ಹಲವು ಪೂರಕ ದಾಖಲೆಗಳು ಎನ್‌ಐಎ ಅಧಿಕಾರಿಗಳಿಗೆ ಲಭ್ಯವಾಗಿವೆ ಎಂದು ತಿಳಿದುಬಂದಿದೆ. ಎನ್‌ಐಎ ಅಧಿಕಾರಿಗಳು ಎರಡು ತಂಡಗಳು ಏಕಕಾಲದಲ್ಲಿ ದಾಳಿ ನಡೆಸಿದ್ದವು. ಮಂಗಳೂರು ಹಾಗೂ ಅಂಕೋಲಾದಲ್ಲಿ ಶೋಧ ಕಾರ್ಯ ನಡೆಸಿದ್ದವು.

ಇದನ್ನೂ ಓದಿ; Loksabha; ಡಿ.ಕೆ.ಸುರೇಶ್‌ ವಿರುದ್ಧ ಡಾ.ಸಿ.ಎನ್‌.ಮಂಜುನಾಥ್‌ ಸ್ಪರ್ಧೆ ಫಿಕ್ಸ್‌!

ಶಂಕಿತ ಉಗ್ರನನ್ನು ಬಂಧಿಸಿದ್ದ ಅಧಿಕಾರಿಗಳು;

ಶಂಕಿತ ಉಗ್ರನನ್ನು ಬಂಧಿಸಿದ್ದ ಅಧಿಕಾರಿಗಳು; 2022ರ ಜುಲೈನಲ್ಲಿ ಕೇಂದ್ರ ಅಪರಾಧ ವಿಭಾಗ ಅಧಿಕಾರಿಗಳು ಶಂಕಿತ ಉಗ್ರ ಅಖ್ತರ್‌ ಹುಸೇನ್‌ ಎಂಬಾತನನ್ನು ಬಂಧಿಸಿದ್ದರು. ಈತನಿಗೆ ಲಷ್ಕರ್-ಎ-ತೊಯ್ಬಾ ಸಂಘಟನೆ ಜೊತೆ ನಂಟಿರುವ ಬಗ್ಗೆ ಸಾಕ್ಷ್ಯಗಳು ಸಿಕ್ಕಿದ್ದವು. ತಿಲಕ ನಗರದ ತಿಲಕ ನಗರದ ಬಹು ಮಹಡಿ ಕಟ್ಟಡದ ಮೂರನೇ ಮಹಡಿಯಲ್ಲಿರುವ ಫ್ಲ್ಯಾಟ್‌ನಲ್ಲಿ ಈತ ವಾಸವಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆತನನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ; Rahul Gandhi; ತೆಲಂಗಾಣದ ಖಮ್ಮಂನಿಂದ ರಾಹುಲ್‌ ಗಾಂಧಿ ಸ್ಫರ್ಧೆ ಬಹುತೇಕ ಫಿಕ್ಸ್‌!

ಕಳೆದ ವರ್ಷ ಐವರು ಶಂಕಿತರ ಬಂಧನ;

ಕಳೆದ ವರ್ಷ ಐವರು ಶಂಕಿತರ ಬಂಧನ; ಕಳೆದ ವರ್ಷ ಕೂಡಾ ಐವರು ಶಂಕಿತರನ್ನು ಬಂಧಿಸಲಾಗಿತ್ತು. ಸಿಸಿಬಿ ಅಧಿಕಾರಿಗಳು 2023ರ ಜುಲೈ 18ರಂದು ಆರ್‌ಟಿ ನಗರದ ಸುಲ್ತಾನ್ ಪಾಳ್ಯದಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿದ್ದರು. ಅಲ್ಲಿದ್ದ ಐದು ಮಂದಿ ಶಂಕಿತ ಉಗ್ರರನ್ನು ಬಂಧಿಸಿದ್ದರು. ಇವರು ಬೆಂಗಳೂರಿನಲ್ಲಿ ದೊಡ್ಡ ಭಯೋತ್ಪಾದಕ ಸಂಚು ರೂಪಿಸಿದ್ದರು ಎನ್ನಲಾಗಿದೆ. ಈ ವೇಳೆ ಒಬ್ಬನ ಮನೆಯಲ್ಲಿ ನಾಲ್ಕು ಜೀವಂತ ಗ್ರೆನೇಡ್‌ಗಳು,  7 ನಾಡ ಬಂದೂಕುಗಳು ಮತ್ತು 45 ಸುತ್ತು ಜೀವಂತ ಮದ್ದುಗುಂಡುಗಳು ಪತ್ತೆಯಾಗಿದ್ದವು.

ಉಗ್ರ ಕೃತ್ಯಕ್ಕೆ ಸಹ ಕೈದಿಗಳ ಬಳಕೆ;

ಉಗ್ರ ಕೃತ್ಯಕ್ಕೆ ಸಹ ಕೈದಿಗಳ ಬಳಕೆ; 2017ರಲ್ಲಿ ಉದ್ಯಮಿಯೊಬ್ಬರ ಕೊಲೆ ಪ್ರಕರಣದಲ್ಲಿ ಶಂಕಿತ ಉಗ್ರ ಜುನೈದ್​ ಮತ್ತು ಆತನ ಐವರು ಸಹಚರರನ್ನು ಬಂಧಿಸಲಾಗಿತ್ತು. ಪರಪ್ಪನ ಅಗ್ರಹಾರ ಜೈಲಿನಲ್ಲಿ ಇವರನ್ನು ಇರಿಸಲಾಗಿತ್ತು. ಇದೇ ವೇಳೆ 2008ರ ಬೆಂಗಳೂರು ಸರಣಿ ಸ್ಫೋಟದ ಆರೋಪಿ ಟಿ.ನಜೀರ್ ಎಂಬಾತ, ಜುನೈದ್ ಅಹಮದ್ ನ ಸಂಪರ್ಕಕ್ಕೆ ಬಂದಿದ್ದ. ಅದಾದ ನಂತರ ಜುನೈದ್ ತನ್ನ ಐವರು ಸಹಚರರನ್ನು ಉಗ್ರ ಚಟುವಟಿಕೆಗೆ ಪ್ರೇರೇಪಿಸಿದ್ದ ಎಂದು ತಿಳಿದುಬಂದಿದೆ.

ಜೈಲಿನಿಂದ ಹೊರಬಂದ ಮೇಲೆ ಸ್ಫೋಟಕ್ಕೆ ಸಂಚು;

ಜೈಲಿನಿಂದ ಹೊರಬಂದ ಮೇಲೆ ಸ್ಫೋಟಕ್ಕೆ ಸಂಚು; ಕೊಲೆ ಆರೋಪದ ಮೇಲೆ ಜೈಲು ಸೇರಿದ್ದವರು ಬೇಲ್‌ ಪಡೆದು ಹೊರಬಂದಿದ್ದರು. ಅನಂತರ ಐವರೂ ಜುನೈದ್ ನಜೀರ್ ಸೂಚನೆಯಂತೆ ಉಗ್ರ ಚಟುವಟಿಕೆ ಆರಂಭಿಸಿದ್ದರು. ಇನ್ನು ಇದೇ ಜುನೈದ್‌ ನಜೀರ್‌, ಲವರ ಮೂಲಕ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಈ ಐವರು ಸಹಚರರಿಗೆ ಪೂರೈಕೆ ಮಾಡಿದ್ದ. ಇದೀಗ ಜುನೈದ್‌ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಐವರು ಸಹಚರರು ಈಗ ಜೈಲಿನಲ್ಲಿದ್ದಾರೆ. ಸಿಸಿಬಿ ತನಿಖೆ ನಡೆಸುತ್ತಿದ್ದ ಈ ಪ್ರಕರಣವನ್ನು ಕೂಡಾ ಎನ್‌ಐಎ ಹಸ್ತಾಂತರ ಮಾಡಲಾಗಿದೆ.

ಇದನ್ನೂ ಓದಿ; ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರಿಗೆ ಬಾಂಬ್‌ ಬೆದರಿಕೆ; ಇ-ಮೇಲ್‌ ರವಾನೆ

 

Share Post