National

ಜಮ್ಮು-ಕಾಶ್ಮೀರದಲ್ಲಿ ಭಾರಿ ಅಗ್ನಿ ದುರಂತ; ಟೂರಿಸ್ಟ್‌ ರಿಸೆಪ್ಷನ್‌ ಸೆಂಟರ್‌ ಭಸ್ಮ

ಕಿಶ್ವಾರ್:‌ ಜಮ್ಮು-ಕಾಶ್ಮೀರದ ಚಾತ್ರೂನಲ್ಲಿ ಭಾರಿ ಅಗ್ನಿ ದುರಂತ ಸಂಭವಿಸಿದೆ. ಕಿಶ್ತ್‌ವಾರ್‌ ಜಿಲ್ಲೆಯ ಚಾತ್ರೂನಲ್ಲಿ ಟೂರಿಸ್ಟ್‌ ರಿಸೆಪ್ಷನ್‌ ಸೆಂಟರ್‌ನ ಬೆಂಕಿಗೆ ಆಹುತಿಯಾಗಿದೆ.

ಇದ್ದಕ್ಕಿದ್ದಂತೆ ಟೂರಿಸ್ಟ್‌ ರಿಸೆಪ್ಷನ್‌ ಸೆಂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೇ ಇಡೀ ಸೆಂಟರ್‌ಗೆ ಹರಡಿದೆ. ಅಗ್ನಿ ಶಾಮಕ ಸಿಬ್ಬಂದಿ ಬರುವ ವೇಳೆಗಾಗಲೇ ಬಹುತೇಕ ಸುಟ್ಟು ಕರಕಲಾಗಿದೆ. ಘಟನೆಯ ಬಗ್ಗೆ ಇನ್ನಷ್ಟು ಮಾಹಿತಿ ಬರಬೇಕಾಗಿದೆ.

 

Share Post