50ವಷರ್ಗಳ ಅಸ್ಸಾಂ-ಮೇಘಾಲಯ ಗಡಿ ವಿವಾದಕ್ಕೆ ಫುಲ್ ಸ್ಟಾಪ್: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಗೃಹ ಸಚಿವ
ದೆಹಲಿ: ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳ ನಡುವಿನ ಗಡಿ ವಿವಾದಕ್ಕೆ ಪರಿಹಾರ ಸಿಕ್ಕಿದೆ. ಕಳೆದ 50 ವರ್ಷಗಳಿಂದ ಎದುರಿಸುತ್ತಿರುವ ಈ ವಿವಾದವನ್ನು ಬಗೆಹರಿಸಲು ಎರಡು ರಾಜ್ಯಗಳ ಮುಖ್ಯಮಂತ್ರಿಗಳಾದ ಹಿಮಂತ ಬಿಸ್ವಾ ಶರ್ಮಾ ಮತ್ತು ಕಾನ್ರಾಡ್ ಸಂಗ್ಮಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಒಪ್ಪಂದಗಳಿಗೆ ಸಹಿ ಹಾಕಿದರು. ಈಶಾನ್ಯ ರಾಜ್ಯಗಳಿಗೆ ಇದೊಂದು ಐತಿಹಾಸಿಕ ದಿನ ಎಂದು ಶಾ ಬಣ್ಣಿಸಿದರು. ವಿವಾದದಲ್ಲಿನ 12 ಸಮಸ್ಯೆಗಳ ಪೈಕಿ ಆರು ಸಮಸ್ಯೆಗಳು ಬಗೆಹರಿದಿದ್ದು, ಉಳಿದ ಆರು ಸಮಸ್ಯೆಗಳನ್ನು ಸಾಧ್ಯವಾದಷ್ಟು ಬೇಗ ಪರಿಹರಿಸಲಾಗುವುದು ಎಂದು ಶಾ ಹೇಳಿದರು.
ಪ್ರಧಾನಿ ಮೋದಿ ಅವರು 2014 ರಿಂದ ಈಶಾನ್ಯ ಅಭಿವೃದ್ಧಿಗೆ ಹಲವಾರು ಪ್ರಯತ್ನಗಳನ್ನು ಮಾಡಿದ್ದಾರೆ ಮತ್ತು ಸಮಸ್ಯೆಗಳನ್ನು ಪರಿಹರಿಸಲು ಒಪ್ಪಂದಗಳಿಗೆ ಸಹಿ ಹಾಕುತ್ತಿರುವ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಅವರ ತಂಡವನ್ನು ಶ್ಲಾಘಿಸಿದರು. ಒಪ್ಪಂದವು ಎರಡು ರಾಜ್ಯಗಳ ನಡುವಿನ 884.9 ಕಿ.ಮೀ. ಆರು ಕಡೆ ದೀರ್ಘಕಾಲಿಕ ಉಳಿದು ಹೋದ ವಿವಾದವನ್ನು ಪರಿಹರಿಸಲಿದ್ದಾರೆ. 36.79 ಚ.ಕಿ.ಮೀ. ಕ್ಷೇತ್ರದಲ್ಲಿ 36 ಗ್ರಾಮಗಳಿವೆ. ಮುಂದಿನ ಆರರಿಂದ ಏಳು ತಿಂಗಳುಗಳಲ್ಲಿ ಗಡಿಯುದ್ದಕ್ಕೂ ಉಳಿದ ಆರು ಪ್ರದೇಶಗಳಲ್ಲಿನ ವಿವಾದಗಳನ್ನು ಪರಿಹರಿಸಲು ಮತ್ತು ಈಶಾನ್ಯವನ್ನು ಬೆಳವಣಿಗೆಯ ಎಂಜಿನ್ ಆಗಿ ಪರಿವರ್ತಿಸಲು ನಾವು ಬಯಸುತ್ತೇವೆ ಎಂದು ಅಸ್ಸಾಂ ಸಿಎಂ ಹೇಳಿದರು.
ಇದೊಂದು ಐತಿಹಾಸಿಕ ದಿನ ಎಂದು ಸಿಎಂ ಹಿಮಂತ ಬಿಸ್ವಶರ್ಮಾ ಬಣ್ಣಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವರ ಸತತ ಪ್ರಯತ್ನದಿಂದ ಈ ಐತಿಹಾಸಿಕ ಮೈಲಿಗಲ್ಲು ಸಾಧಿಸಲಾಗಿದೆ ಎಂದು ಹೇಳಿದರು. ಇದರಿಂದ ಗಡಿ ಭಾಗದಲ್ಲಿ ಶಾಂತಿ ನೆಲೆಸಲಿದೆ ಎಂದ ಅವರು, ಆದಷ್ಟು ಬೇಗ ಎರಡು ರಾಜ್ಯಗಳ ನಡುವಿನ ವಿವಾದ ಬಗೆಹರಿಯಬೇಕು. ಭಾರತ-ಬಾಂಗ್ಲಾದೇಶ ಗಡಿ ಸಮಸ್ಯೆಗಳು ಯಾವಾಗ ಬಗೆಹರಿಯುತ್ತವೆ ಎಂದಾಗ ಎರಡು ರಾಜ್ಯಗಳ ಸಮಸ್ಯೆ ಏಕೆ ಪರಿಹರಿಸಲಾಗಲಿಲ್ಲ ಎಂಬ ಒತ್ತಡ ಇದೆ ಎಂದರು.