ಮೋದಿಯವರನ್ನು ವಿಶ್ವವೇ ಒಪ್ಪಿದೆ, ನೀವ್ಯಾಕೆ ಮೋದಿ ವಿರುದ್ಧ ಮಾತಾಡ್ತೀರಿ?; ಸಿದ್ದರಾಮಯ್ಯಗೆ ದೇವೇಗೌಡರ ಪ್ರಶ್ನೆ
ಬೆಂಗಳೂರು; ಪ್ರಧಾನಿ ನರೇಂದ್ರ ಮೋದಿಯವರನ್ನು ಇಡೀ ವಿಶ್ವವೇ ಒಪ್ಪಿಕೊ೦ಡಿದೆ. ಎಲ್ಲಾ ದೇಶಗಳ ಜನರೂ ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಂಡಾಡುತ್ತಿದ್ದಾರೆ. ಆದ್ರೆ, ಸಿದ್ದರಾಮಯ್ಯ ಮಾತ್ರ ಯಾವಾಗಲೂ ಬರೀ ಮೋದಿ ಮೋದಿ ಎಂದು ವಿರೋಧ ಮಾಡುತ್ತಿರುತ್ತಾರೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ. ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ದೇವೇಗೌಡರು ಸುದ್ದಿಗೋಷ್ಠಿ ನಡೆಸಿದರು. ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರ ನಮ್ಮ ತೆರಿಗೆ ಹಣ ವಾಪಸ್ ನೀಡಿಲ್ಲ ಎಂದು ಆರೋಪ ಮಾಡುತ್ತಾರೆ. ಆದ್ರೆ ಈ ಹಿಂದೆ ಇದ್ದ ಯುಪಿಎ ಸರ್ಕಾರದ ಪ್ರಧಾನಿ ಮನಮೋಹನ್ ಸಿಂಗ್ ಫೈನಾನ್ಸ್ ಕಮೀಟಿ ಸೂಚಿಸಿದ ಹಣ ಬಿಟ್ಟು ರಾಜ್ಯಕ್ಕೆ ಬೇರೆ ಏನು ಕೊಟ್ಟಿದ್ದಾರೆ ಎಂದು ದೇವೇಗೌಡರು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ; ಮಕ್ಕಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂವಾದ; ವೈಚಾರಿಕತೆ, ವೈಜ್ಞಾನಿಕತೆ ಬೆಳೆಸಿಕೊಳ್ಳಲು ಸಲಹೆ
ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಪರೀತ;
ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಪರೀತ; ಬೇಸಿಗೆ ಶುರುವಾಗುತ್ತಿದ್ದಂತೆ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗುತ್ತಿದೆ. ಜನ ಒಂದು ಟ್ಯಾಂಕರ್ ನೀರಿಗೆ ಎರಡೂವರೆ ಸಾವಿರ ರೂಪಾಯಿ ಕೇಳುತ್ತಿದ್ದಾರೆ. ಅದ್ರಲ್ಲೂ ಬೆಂಗಳೂರಂತ ಮಹಾನಗರದಲ್ಲಿ ಕುಡಿಯುವ ನೀರಿಗೆ ಈಗಲೇ ಹಾಹಾಕಾರ ಶುರುವಾಗಿದೆ. ನಿನ್ನೆ ಡಿಸಿಎಂ ಸಭೆ ಮಾಡಿ ಈ ಬಗ್ಗೆ ಮಾತನಾಡಿದ್ದಾರೆ. ನೀವು ಈಗ ಸಭೆ ಮಾಡಿದ್ದೀರಿ. ಇಷ್ಟು ದಿನ ನೀವು ಏನು ಮಾಡುತ್ತಿದ್ದಿರಿ ಎಂದು ದೇವೇಗೌಡರು ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡಿದ್ದಾರೆ.
ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಪಡೆಯೋದಕ್ಕೆ ನಾನು ನೀರಾವರಿ ಇಲಾಖೆಯ ಕಾರ್ಯದರ್ಶಿಗೆ ಕರೆ ಮಾಡಿದ್ದೆ. ಆದರೆ ಅವರು ನನ್ನ ಕರೆ ಸ್ವೀಕಾರ ಮಾಡಲಿಲ್ಲ. ನಾನು ಸ್ವಂತ ಕೆಲಸಕ್ಕೆ ಕರೆ ಮಾಡಿರಲಿಲ್ಲ. ರಾಜ್ಯದ ಜನರ ಸಮಸ್ಯೆ ಕೇಳಲು ಕರೆ ಮಾಡಿದ್ದೆ. ಆ ಅಧಿಕಾರಿ ಯಾರು ಎಂದು ವಿಚಾರ ಮಾಡಿದೆ. ಅವರು ಸಿದ್ದರಾಮಯ್ಯ ನವರ ದೂರದ ಸಂಬಂಧಿ ಇರಬೇಕು. ಆಡಳಿತ ಹೇಗೆ ನಡಿತಿದೆ ಎಂಬುವುದಕ್ಕೆ ಇದೇ ಉದಾಹರಣೆ ಸಾಕು ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ.
ಇದನ್ನೂ ಓದಿ; ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರಿಗೆ ಬಾಂಬ್ ಬೆದರಿಕೆ; ಇ-ಮೇಲ್ ರವಾನೆ
95 ಜನರಿಗೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನ;
95 ಜನರಿಗೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನ; ನಿನ್ನ ಸರ್ಕಾರದಲ್ಲಿ 95 ಜನರಿಗೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ಕೊಟ್ಟಿದ್ದೀರಿ. ನಾನು ಕೂಗಿದರೆ ಹಾಸನ ಮಂಡ್ಯ ಚಿಕ್ಕಮಗಳೂರು, ಮೈಸೂರಿನಲ್ಲಿ ಸೌಂಡ್ ಆಗಬೇಕು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನೀವು ಕೂಗಿ ಯಾರು ಬೇಡ ಅಂತಾರೆ. ಆದ್ರೆ ನಿಮಗೆ ನಾಚಿಕೆ ಆಗಬೇಕು. ಜನ ನಿಮ್ಮನ್ನು ನಂಬುತ್ತಾರಾ ಎಂದು ಮಾಜಿ ಪ್ರಧಾನಿ ದೇವೇಗೌಡರು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ; ಮಕ್ಕಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂವಾದ; ವೈಚಾರಿಕತೆ, ವೈಜ್ಞಾನಿಕತೆ ಬೆಳೆಸಿಕೊಳ್ಳಲು ಸಲಹೆ