ಬಲವಂತದಿಂದ ನಿಶ್ಚಿತಾರ್ಥ ಮಾಡಿದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆ!
ತಾಯಿ ಬಲವಂತದಿಂದ ಹುಡುಗನೊಬ್ಬನ ಜೊತೆ ನಿಶ್ಚಿತಾರ್ಥ ಮಾಡಿದ್ದರಿಂದ ಮನನೊಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.. ಚೀನಾದಲ್ಲಿ ಈ ಘಟನೆ ನಡೆದಿದೆ.. 19 ವರ್ಷದ ಟಾಂಗ್ ಟಾಂಗ್ ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡ ಯುವತಿಯಾಗಿದ್ದಾಳೆ.. ಈಕೆಗೆ ಕಳೆದ ಐದು ದಿನಗಳ ಹಿಂದಷ್ಟೇ ತನ್ನ ತಾಯಿ ವ್ಯಕ್ತಿಯೊಬ್ಬನ ಜೊತೆ ಮದುವೆ ನಿಶ್ಚಿತಾರ್ಥ ಮಾಡಿಸಿದ್ದಳು.. ಆದ್ರೆ ಆತನ ಹವ್ಯಾಸಗಳ ಬಗ್ಗೆ ತಿಳಿದಿದ್ದ ಯುವತಿ, ಆತನೊಂದಿಗೆ ಜೀವಿಸಲು ಆಗೋದಿಲ್ಲ ಎಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ..
ಯುವತಿ ಹಾಗೂ ಆಕೆಯ ತಾಯಿ ಸಣ್ಣ ಬಟ್ಟೆ ಅಂಗಡಿಯನ್ನು ನಡೆಸುತ್ತಿದ್ದರು.. ಬಡ ಕುಟುಂಬವಾದ್ದರಿಂದ ಜೀವನ ನಡೆಸೋದು ಕಷ್ಟವಾಗಿತ್ತು.. ಇದನ್ನೇ ಬಂಡವಾಳ ಮಾಡಿಕೊಂಡ ವ್ಯಕ್ತಿಯೊಬ್ಬ ಸುಂದರಿಯಾಗಿದ್ದ ಟಾಂಗ್ ಟಾಂಗ್‌ಳನ್ನು ನೋಡಿ ಇಷ್ಟಪಟ್ಟಿದ್ದ.. ಆಕೆಯನ್ನು ಮದುವೆಯಾಗುವುದಾಗಿ ಆಕೆ ತಾಯಿ ಬಳಿ ಹೇಳಿದ್ದ.. ಜತೆಗೆ ಟಾಂಗ್ ಟಾಂಗ್ ತಾಯಿಗೆ ಸುಮಾರು 270,000 ಯುವಾನ್ (33,40,730 ರೂ.) ಕೂಡಾ ನೀಡಿದ್ದ.. ಹಣ ಆಸೆಗೆ ಬಿದ್ದ ತಾಯಿ ತನ್ನ ಮಗಳನ್ನು ಆತನೊಂದಿಗೆ ನಿಶ್ಚಿತಾರ್ಥ ಮಾಡಿಸಿದ್ದಳು ಎನ್ನಲಾಗಿದೆ..
ತಾಯಿಗೆ ಎಷ್ಟೇ ಅರ್ಥ ಮಾಡಿಸಲು ಹೋದರೂ ಆಕೆ ಕೇಳಿಲ್ಲ.. ನನಗೆ ಈಗಲೇ ಮದುವೆ ಬೇಡ.. ಜೊತೆಗೆ ಆತನ ಅಭ್ಯಾಸಗಳು ಸರಿ ಇಲ್ಲ.. ಹೀಗಾಗಿ ನನಗೆ ಈಗಲೇ ಮದುವೆ ಬೇಡ ಎಂದು ಪರಿಪರಿಯಾಗಿ ಆಕೆ ಬೇಡಿಕೊಂಡಿದ್ದಾಳೆ.. ಆದ್ರೆ ತಾಯಿ ಇದಕ್ಕೆ ಒಪ್ಪಿಲ್ಲ.. ಇದರಿಂದಾಗಿ ವಿಧಿಯಿಲ್ಲದೆ ಟಾಂಗ್‌ಟಾಂಗ್ ಹತ್ತಿರದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.. ಇತ್ತ ಹಣ ನೀಡಿದ್ದ ಆ ಹುಡುಗ ಕೊಟ್ಟ ಹಣ ವಾಪಸ್ ಜೊಡುವಂತೆ ಆ ಮಹಿಳೆಯನ್ನು ಪೀಡಿಸುತ್ತಿದ್ದಾನಂತೆ.. ಕೊಟ್ಟ ಹಣದಲ್ಲಿ ಆಕೆ ಸ್ವಲ್ಪ ಖರ್ಚು ಮಾಡಿಕೊಂಡಿದ್ದು, ಉಳಿದಿದ್ದನ್ನು ವಾಪಸ್ ಕೊಟ್ಟಿದ್ದಾಳೆ.. ಆದರೂ ಆತನ ಟಾರ್ಚರ್ ಮಾತ್ರ ನಿಂತಿಲ್ಲ..