Lifestyle

ಗಂಡ-ಹೆಂಡತಿ ನಡುವೆ ಜಗಳ ತಂದಿಡೋರು ಈ ವ್ಯಕ್ತಿಗಳೇನಂತೆ!

ಗಂಡ-ಹೆಂಡತಿಯರ ನಡುವೆ ಜಗಳ ಕಾಮನ್‌.. ಆದ್ರೆ ಗಂಡ-ಹೆಂಡತಿಯರ ಜಗಳಗಳ ಬಹುತೇಕವಾಗಿ ಬೇರೆಯವರ ಕಾರಣಕ್ಕಾಗಿಯೇ ನಡೆಯುತ್ತವೆಯಂತೆ.. ಇಬ್ಬರ ನಡುವೆ ತಂದಿಕ್ಕುವವರೇ ಜಾಸ್ತಿ ಇರುತ್ತಾರಂತೆ.. ಬೇರೆಯವರ ಕಾರಣಕ್ಕಾಗಿಯೇ ನಡೆಯುವ ಜಗಳಗಳಿಂದ ಗಂಡ-ಹೆಂಡತಿಯ ನಡುವಿನ ಸಂಬಂಧಗಳು ಹಾಳಾಗುತ್ತಿವೆ ಎಂದು ಹೇಳಲಾಗುತ್ತಿದೆ..

ಅಂದಹಾಗೆ, ದಾಂಪತ್ಯ ಬಾಂಧವ್ಯ ಬಹುಕಾಲ ಚೆನ್ನಾಗಿರಬೇಕಾದರೆ ಪ್ರೀತಿಯ ಜೊತೆಗೆ ನಂಬಿಕೆಯೂ ಇರಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಗಂಡ-ಹೆಂಡತಿಯ ನಡುವೆ ಪ್ರೀತಿಯೇ ಕಡಿಮೆಯಾಗುತ್ತಿದೆ.. ಹೀಗೆ, ಗಂಡ-ಹೆಂಡತಿ ನಡುವೆ ಜಗಳಗಳು ಹೆಚ್ಚಾಗಿ ಅದು ವಿಚ್ಛೇದನದವರೆಗೂ ಹೋಗುತ್ತಿವೆ.. ಕೆಲವೊಮ್ಮೆ ಯಾವುದೇ ಸಮಸ್ಯೆ ಇಲ್ಲದಿದ್ದರೂ ಮೂರನೇ ವ್ಯಕ್ತಿಯ ಕಾರಣದಿಂದಾಗಿ ಸಂಘರ್ಷಗಳು ಉಂಟಾಗುತ್ತವೆ. ಅತ್ತಿಗೆ, ಸ್ನೇಹಿತರು, ಕುಟುಂಬ ಸದಸ್ಯರು ಮತ್ತು ಸಹೋದ್ಯೋಗಿಗಳ ಕಾರಣದಿಂದ ಗಂಡ-ಹೆಂಡತಿ ನೆಡುವೆ ಜಗಳಗಳು ಏರ್ಪಡುತ್ತವೆ..

ತಾಯಂದಿರು;
ತಾಯಂದಿರು ತಮ್ಮ ಮಕ್ಕಳನ್ನು ಪ್ರೀತಿಸುತ್ತಾರೆ.. ಅವರನ್ನು ಪ್ರಾಣಕ್ಕಿಂತ ಹೆಚ್ಚಾಗಿ ನೋಡಿಕೊಳ್ಳುತ್ತಾರೆ..ಆದ್ರೆ ಯಾವಾಗಲೂ ಈ ರೀತಿಯ ವರ್ತನೆ ಒಳ್ಳೆಯದಲ್ಲ.. ಆದರೆ ಅತಿಯಾದ ಪ್ರೀತಿಯಿಂದ ನಿಮ್ಮ ಮಗ ಅಥವಾ ಮಗಳ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಬಾರದು. ಅವರ ಬದುಕು ಅವರು ಕಟ್ಟಿಕೊಳ್ಳಲು ಬಿಡಬೇಕು.. ಯಾವುದೇ ಸಮಸ್ಯೆಯ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಮೊದಲು ಮಾತನಾಡಿ ಮತ್ತು ಅದನ್ನು ಪರಿಹರಿಸುವುದು ಉತ್ತಮ ಎಂದು ನೆನಪಿಡಿ. ಇಲ್ಲದಿದ್ದರೆ ಅದು ಘರ್ಷಣೆಗೆ ಕಾರಣವಾಗುತ್ತದೆ.

ಅತ್ತೆಯಂದಿರು;

ಸೊಸೆಯಾಗಿರಲಿ ಅಥವಾ ಅಳಿಯನಾಗಿರಲಿ, ಅತ್ತೆ ಮಾಡುವ ಕೆಲವು ಕೆಲಸಗಳು ಅವರಿಗೆ ಇಷ್ಟವಾಗುವುದಿಲ್ಲ. ಸೊಸೆ ಅಥವಾ ಅಳಿಯನಿಗೆ ಅವರ ನಡೆ ತಪ್ಪು ಎಂದು ಅನಿಸುತ್ತದೆ.. ಆದ್ದರಿಂದ, ಈ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಮುಂಚಿತವಾಗಿ ಮಾತನಾಡಿ. ಯಾರೇ ಬಂದರೂ, ಏನು ಹೇಳಲಿ, ಏನು ಮಾಡಿದರೂ ಇಬ್ಬರೂ ಒಬ್ಬರಿಗೊಬ್ಬರು ಆದ್ಯತೆ ನೀಡಬೇಕು.

ಸಹೋದ್ಯೋಗಿಗಳು;
ಇಂದಿನ ದಿನಗಳಲ್ಲಿ ಪುರುಷರು ಮತ್ತು ಮಹಿಳೆಯರು ಇಬ್ಬರೂ ಕೆಲಸ ಮಾಡುತ್ತಿದ್ದಾರೆ. ಪರಿಣಾಮವಾಗಿ, ಮನೆಗಿಂತ ಹೆಚ್ಚಿನ ಸಮಯವನ್ನು ಕಚೇರಿಯಲ್ಲಿ ಕಳೆಯುತ್ತಾರೆ.. ಈ ಹಿನ್ನೆಲೆಯಲ್ಲಿ ಸಹೋದ್ಯೋಗಿಗಳ ನಡುವೆ ಆತ್ಮೀಯತೆ ಬೆಳೆಯುವುದು ಸಹಜ. ಆದರೆ, ಇವುಗಳಿಂದ ನಿಮ್ಮ ದಾಂಪತ್ಯದಲ್ಲಿ ಯಾವುದೇ ಜಗಳಗಳು ಆಗದಂತೆ ನೋಡಿಕೊಳ್ಳಿ. ಯಾವಾಗಲೂ ನಿಮ್ಮ ಕುಟುಂಬಕ್ಕೆ ಮೊದಲ ಆದ್ಯತೆ ನೀಡಿ.

ಮಕ್ಕಳು;
ಮಕ್ಕಳ ಜನನದ ನಂತರ, ಪತಿ ಮತ್ತು ಹೆಂಡತಿಯ ಜವಾಬ್ದಾರಿ ಹೆಚ್ಚಾಗುತ್ತದೆ. ಇಬ್ಬರಿಗೂ ಸಮಯವಿರುವುದಿಲ್ಲ. ಮಕ್ಕಳನ್ನು ಹೇಗೆ ಬೆಳೆಸುವುದು. ಹೇಗೆ ಕಾಳಜಿ ವಹಿಸಬೇಕು ಎಂಬುದರ ಕುರಿತು ವಾದಗಳು ಇರುತ್ತವೆ. ಆದರೆ, ವೈವಾಹಿಕ ಜೀವನವನ್ನು ಪರಿಗಣಿಸದೆ ಮಕ್ಕಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಮಕ್ಕಳಿಗಾಗಿ ಮಾಡುವ ಎಲ್ಲವನ್ನೂ ಮಾಡಬೇಡಿ. ಪತಿ ಪತ್ನಿಯರ ಬಗ್ಗೆ ಕಾಳಜಿ ವಹಿಸುವುದು ಒಳ್ಳೆಯದು.

ಸ್ನೇಹಿತರು;
ಎಲ್ಲರಿಗೂ ಸ್ನೇಹಿತರಿರುತ್ತಾರೆ. ಆದರೆ ಕೆಲವೊಮ್ಮೆ ನಿಮ್ಮ ಸ್ನೇಹಿತರ ಕಾರಣದಿಂದ ಜಗಳಗಳು ಉಂಟಾಗಬಹುದು. ಪತಿ-ಪತ್ನಿ ಇಬ್ಬರೂ ಪೊಸೆಸಿವ್ ಅನಿಸಬಹುದು. ಆದ್ದರಿಂದ, ನಿಮ್ಮ ಸ್ನೇಹಿತರಿಗಿಂತ ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ಮರೆಯಬೇಡಿ. ಅದು ಸ್ನೇಹಿತರನ್ನು ದೂರ ಮಾಡಿ ಎಂದು ಹೇಳುತ್ತಿಲ್ಲ. ಆದ್ರೆ ಎರಡನ್ನೂ ಬ್ಯಾಲೆನ್ಸ್ ಮಾಡುವುದು ಉತ್ತಮ.

Share Post