ಅಕ್ಕಪಕ್ಕದ ರಾಜ್ಯಗಳಿಂದ ಸಿದ್ದರಾಮಯ್ಯಗೆ ಫುಲ್ ಡಿಮ್ಯಾಂಡ್; ಪ್ರಚಾರಕ್ಕೆ ಬರಲು ಡಿಮ್ಯಾಂಡ್
ಬೆಂಗಳೂರು; ರಾಜ್ಯದಲ್ಲಿ ಜಾರಿಯಾಗಿರುವ ಐದು ಗ್ಯಾರೆಂಟಿಗಳು ಬಗ್ಗೆ ರಾಜ್ಯದಲ್ಲಿಯೇ ಮಿಶ್ರ ಪ್ರತಿಕ್ರಿಯೆ ಇದೆ.. ಇನ್ನು ಸಿಎಂ ಸಿದ್ದರಾಮಯ್ಯ ಬಗ್ಗೆಯೂ ಪರ, ವಿರೋಧ ಮಾತನಾಡುವ ಜನ ಕರ್ನಾಟಕದಲ್ಲಿ ಸಾಕಷ್ಟಿದ್ದಾರೆ.. ಇದರ ನಡುವೆಯೂ ಸಿದ್ದರಾಮಯ್ಯ ಸಾಕಷ್ಟು ಜನಪ್ರಿಯ ರಾಜಕಾರಣಿ ಅನ್ನೋದು ಎಲ್ಲರಿಗೂ ಗೊತ್ತು.. ಇವರೀಗ ಕರ್ನಾಟಕಕ್ಕೆ ಸೀಮಿತವಾಗಿಲ್ಲ.. ಸಿದ್ದರಾಮಯ್ಯ ಅವರಿಗೆ ಅಕ್ಕಪಕ್ಕದ ರಾಜ್ಯಗಳಿಂದಲೂ ಬಹುಬೇಡಿಕೆ ಇದೆ.. ಸೋನಿಯಾಗಾಂಧಿ, ರಾಹುಲ್ ಗಾಂಧಿಗಿಂತ ಹೆಚ್ಚಾಗಿ ಸಿದ್ದರಾಮಯ್ಯ ಅವರನ್ನು ಪ್ರಚಾರಕ್ಕೆ ಕರೆಯುವವರು ಜಾಸ್ತಿಯಾಗಿದ್ದಾರೆ.. ಸಿದ್ದರಾಮಯ್ಯ ಸ್ಟಾರ್ ಕ್ಯಾಂಪೇನರ್ ಎಂದೇ ಅಕ್ಕಪಕ್ಕದ ರಾಜ್ಯಗಳ ಕಾಂಗ್ರೆಸ್ ನಾಯಕರು ಭಾವಿಸಿದ್ದಾರೆ..
ಇದನ್ನೂ ಓದಿ; ಗಂಡನೂ ಬೇಕು, ಪ್ರಿಯಕರನೂ ಬೇಕು; ವಿದ್ಯುತ್ ಕಂಬ ಏರಿದ ಮಹಿಳೆ!
ಪ್ರಚಾರಕ್ಕೆ ಬರುವಂತೆ ಸಿದ್ದರಾಮಯ್ಯಗೆ ಡಿಮ್ಯಾಂಡ್;
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದೆ.. ಇಲಿ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಿಸಿಕೊಳ್ಳುವುದಕ್ಕೆ ಸಿದ್ದರಾಮಯ್ಯ ಸೇರಿ ಎಲ್ಲಾ ಕಾಂಗ್ರೆಸ್ ನಾಯಕರು ಹರಸಾಹಸ ಮಾಡುತ್ತಿದ್ದಾರೆ.. ಹೀಗಿರುವಾಗಲೇ ಸಿದ್ದರಾಮಯ್ಯ ಅವರಿಗೆ ಬೇರೆ ರಾಜ್ಯಗಳಿಂದ ಬೇಡಿಕೆ ಬಂದಿದ್ದಾರೆ.. ತಮಿಳುನಾಡು, ಕೇರಳ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಚುನಾವಣಾ ಪ್ರಚಾರಕ್ಕೆ ಬರುವಂತೆ ಅಲ್ಲಿ ಕಾಂಗ್ರೆಸ್ ನಾಯಕರು ಸಿದ್ದರಾಮುಯ್ಯಗೆ ಡಿಮ್ಯಾಂಡ್ ಮಾಡುತ್ತಿದ್ದಾರೆ.. ಸಿದ್ದರಾಮಯ್ಯ ಅವರು ಬೇರೆ ಬೇರೆ ಕಾರಣಗಳಿಗಾಗಿ ದೇಶದಾದ್ಯಂತ ಹೆಸರು ಮಾಡಿದ್ದಾರೆ.. ಅವರ ಭಾಷಣದ ಶೈಲಿ, ಹಾವಭಾವ ದೇಶದ ಕೋಟ್ಯಂತರ ಜನರನ್ನು ಆಕರ್ಷಿಸಿದೆ.. ಹೀಗಾಗಿ ಸಿದ್ದರಾಮಯ್ಯ ಅವರು ಪ್ರಚಾರಕ್ಕೆ ಬಂದರೆ ಕಾಂಗ್ರೆಸ್‌ಗೆ ಅನುಕೂಲವಾಗಲಿದೆ ಎಂದು ಅಕ್ಕಪಕ್ಕದ ರಾಜ್ಯದ ನಾಯಕರು ಪ್ರಚಾರಕ್ಕೆ ಸಿದ್ದರಾಮಯ್ಯಗೆ ಆಹ್ವಾನ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ..
ಇದನ್ನೂ ಓದಿ; ಚಿಕ್ಕಬಳ್ಳಾಪುರದಲ್ಲಿ ರೆಡ್ಡಿ, ಮೊಯ್ಲಿ ಮುನಿಸು ಡಾ.ಕೆ.ಸುಧಾಕರ್‌ಗೆ ವರವಾಗುತ್ತಾ..?
ಅನ್ನರಾಮಯ್ಯ ಎಂದೇ ಅಕ್ಕಪಕ್ಕದ ರಾಜ್ಯಗಳಲ್ಲಿ ಫೇಮಸ್;
2013ರಲ್ಲಿ ಸಿದ್ದರಾಮಯ್ಯ ಅವರು ಮೊದಲ ಬಾರಿ ಸಿಎಂ ಆದಾಗ ಅನ್ನಭಾಗ್ಯ ಯೋಜನೆಯನ್ನು ಪ್ರಾರಂಭ ಮಾಡಿದ್ದರು.. ಇದು ಸಾಕಷ್ಟು ಜನಪ್ರಿಯ ಯೋಜನೆ.. ಇದನ್ನು ನೋಡಿಕೊಂಡು ಹಲವು ರಾಜ್ಯಗಳು ಈ ಯೋಜನೆಯನ್ನು ಅಳವಡಿಸಿಕೊಂಡಿವೆ.. ಉಚಿತವಾಗಿ ಬಡವರಿಗೆ ಅಕ್ಕಿ ವಿತರಿಸುವ ಯೋಜನೆ ಬಹುತೇಕ ಎಲ್ಲಾ ರಾಜ್ಯಗಳ ಬಡ ಜನರನ್ನೂ ಸೆಳೆದಿದೆ.. ಹೀಗಾಗಿಯೇ ಆಂಧ್ರಪ್ರದೇಶ, ತಮಿಳುನಾಡು ಮುಂತಾದ ಕಡೆ ಸಿದ್ದರಾಮಯ್ಯ ಅವರನ್ನು ಅನ್ನರಾಮಯ್ಯ ಎಂದೇ ಕರೆಯುತ್ತಾರೆ.. ಒಂದು ರೀತಿಯಲ್ಲಿ ಅಕ್ಕಪಕ್ಕದ ರಾಜ್ಯದಲ್ಲಿ ಸಿದ್ದರಾಮಯ್ಯ ಅವರನ್ನು ಬಡವರ ಪ್ರತಿನಿಧಿ ಎಂದು ಜನ ನಂಬಿದ್ದಾರೆ.. ಹೀಗಾಗಿಯೇ ಸಿದ್ದರಾಮಯ್ಯ ಅವರು ಪ್ರಚಾರಕ್ಕೆ ಬರಬೇಕೆಂದು ಅಲ್ಲಿನ ಕಾಂಗ್ರೆಸ್ ನಾಯಕರು ಕರೆಯುತ್ತಿದ್ದಾರೆ…
ಇದನ್ನೂ ಓದಿ; ಜರ್ಮನಿಗೆ 20 ಸಾವಿರ ಆನೆಗಳನ್ನು ನುಗ್ಗಿಸುತ್ತಂತೆ ಈ ದೇಶ..!
ಸಿಎಂ ಸಿದ್ದರಾಮಯ್ಯಗೆ ಭರ್ಜರಿ ಡಿಮ್ಯಾಂಡ್!;
ಮಹಾರಾಷ್ಟ್ರ, ತಮಿನಾಡು, ಆಂಧ್ರಪ್ರದೇಶ ಹಾಗೂ ಕೇರಳ ರಾಜ್ಯಗಳಿಂದ ಸಿದ್ದರಾಮಯ್ಯ ಅವರಿಗೆ ಡಿಮ್ಯಾಂಡ್ ಬಂದಿದೆ.. ಇಲ್ಲಿಗೆ ಬಂದು ಪ್ರಚಾರ ಮಾಡಿ ಎಂದು ಕರೆಯಾಗುತ್ತಿದೆ.. ಮಹಾರಾಷ್ಟ್ರದ 7-8 ಕ್ಷೇತ್ರಗಳಲ್ಲಿ ಪ್ರಚಾರ ಮಾಡಲು ಬರುವಂತೆ ಸಿದ್ದರಾಮಯ್ಯಗೆ ಕರೆ ಬಂದಿದೆ ಎನ್ನಲಾಗಿದೆ.. ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿ ರಮೇಶ್ ಚೆನ್ನಿತ್ತಲ ಅವರು ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದ್ದಾರೆ ಎಂದು ತಿಳಿದುಬಂದಿದೆ.. ರಾಹುಲ್ ಗಾಂಧಿ ಸ್ಪರ್ಧಿಸಿರುವ ವಯನಾಡು ಕ್ಷೇತ್ರದಲ್ಲೂ ಸಿದ್ದರಾಮಯ್ಯಗೆ ಭಾರಿ ಡಿಮ್ಯಾಂಡ್ ಇದೆ ಎಂದು ತಿಳಿದುಬಂದಿದೆ..
ಇದನ್ನೂ ಓದಿ; ಬೇಸಿಗೆಯಲ್ಲಿ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಹೀಗೆ ಮಾಡಿ…