ನೀರು ಕುಡಿಯಲು ಹೋಗಿ ಟ್ಯಾಂಕ್‌ಗೆ ಬಿದ್ದು 30 ಕೋತಿಗಳ ಸಾವು!
ಹಳ್ಳಿಗಳಲ್ಲಿ ಮಂಗಗಳು ಮನುಷ್ಯರಿಗೆ ಕಾಟ ಕೊಡುವುದು ಸಾಮಾನ್ಯ.. ಮನೆಗಳಿಗೂ ನುಗ್ಗಿ ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲಾ ಚೆಲ್ಲಾಡುತ್ತಿರುತ್ತವೆ.. ಫಸಲಿನ ಮೇಲೂ ದಾಳಿ ಮಾಡುತ್ತಿರುತ್ತವೆ.. ಆಹಾರ ತೆಗೆದುಕೊಂಡು ಹೋಗುವ ಜನರ ಮೇಲೆ ದಾಳಿ ಮಾಡುವ, ಕಚ್ಚುವ ಪ್ರಸಂಗಗಳೂ ನಡೆಯುತ್ತಿರುತ್ತವೆ.. ಆದ್ರೆ, ಈಗ ಬೇಸಿಗೆ ಮುನುಷ್ಯನಿಗೇ ಬಾಯಾರಿಕೆಗೆ ತಡೆಯೋದಕ್ಕೆ ಆಗೋದಿಲ್ಲ.. ಇನ್ನು ಮೂಕ ಪ್ರಾಣಿಗಳು ಏನು ಮಾಡುತ್ತವೆ.. ಹೀಗಾಗಿ ತೊಟ್ಟು ನೀರು ಗಿಟ್ಟಿಸಿಕೊಳ್ಳಲು ಹೋಗಿ ಬರೋಬ್ಬರಿ 30 ಕೋತಿಗಳು ಸಾವನ್ನಪ್ಪಿವೆ..
ಇದನ್ನೂ ಓದಿ; ಹೊಸ ಚುನಾವಣಾ ಸಮೀಕ್ಷೆ; ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲೋದೆಷ್ಟು..?
ಟ್ಯಾಂಕ್‌ನಲ್ಲಿ ಬಿದ್ದು 30 ಕೋತಿಗಳ ಸಾವು..!;
ಬಿಸಿಲಿನ ಹಿನ್ನೆಲೆಯಲ್ಲಿ ಬಾಯಾರಿಕೆಯಾಗಿದ್ದು, ನೀರು ಕುಡಿಯಲು ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ಓವರ್ ಹೆಡ್ ಟ್ಯಾಂಕ್‌ಗೆ ಕೋತಿಗಳು ಇಳಿದಿವೆ.. ಆದ್ರೆ ಅಲ್ಲಿಂದ ಹೊರಬರಲಾರದೆ ಅವು ಅಲ್ಲೇ ಸಾವನ್ನಪ್ಪಿವೆ.. ಸುಮಾರು 30 ಕೋತಿ ಈ ರೀತಿಯಾಗಿ ದಾರುಣವಾಗಿ ಸಾವನ್ನಪ್ಪಿವೆ.. ಈ ಘಟನೆ ಆಂಧ್ರಪ್ರದೇಶದ ನಲ್ಗೊಂಡ ಜಿಲ್ಲೆಯ ನಾಗಾರ್ಜುನ ಸಾಗರದ ಹಿಲ್ ಕಾಲೋನಿ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ; 40 ಲಕ್ಷ ರೂ. ಸಂಬಳವಿರುವ 37ರ ಮಹಿಳೆಗೆ ವರ ಬೇಕಂತೆ; ಷರತ್ತು ಏನು ಗೊತ್ತಾ..?
ಟ್ಯಾಂಕ್‌ಗೆ ಮುಚ್ಚಳ ಇರಲಿಲ್ಲ;
ಹಿಲ್ ಕಾಲೋನಿಯ ವಿಜಯವಿಹಾರ ಬಳಿ ಬೃಹತ್ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ.. ಆದ್ರೆ ಅದಕ್ಕೆ ಮುಚ್ಚಳ ಹಾಕಿರಲಿಲ್ಲ.. ಹೀಗಾಗಿ ಮಧ್ಯಾಹ್ನದ ಮೇಲೆ ಕೋತಿಗಳು ನೀರು ಕುಡಿಯಲು ಅದರೊಳಗೆ ಇಳಿದಿವೆ.. ನೀರು ಕುಡಿದ ಮೇಲೆ ಮೇಲೆ ಬರಲು ಆಗಿಲ್ಲ.. ಅವು ಅಲ್ಲೇ ಸಾವನ್ನಪ್ಪಿವೆ,.. ನಂತರ ಜನರು ಅದೇ ನೀರನ್ನು ಕುಡಿದಿದ್ದಾರೆ ಎಂದು ತಿಳಿದುಬಂದಿದೆ.. ಕೆಲ ದಿನಗಳ ನಂತರ ಮಂಗಗಳು ಟ್ಯಾಂಕ್ ನಲ್ಲಿ ಸಾವನ್ನಪ್ಪಿರುವುದು ತಿಳಿದು ಭಯಬೀತರಾಗಿದ್ದಾರೆ..
ಇದನ್ನೂ ಓದಿ; ರಾಹುಲ್ ಗಾಂಧಿಗೆ ವಯನಾಡು ಗೆಲ್ಲೋದು ಅಷ್ಟು ಸುಲಭವಲ್ಲ..!; ಏನೇಳ್ತಾರೆ ಜನ..?
ಟ್ಯಾಂಕ್ ಮೇಲೆ ಹತ್ತಿ ನೋಡಿದಾಗ ವಿಚಾರ ಬೆಳಕಿಗೆ;
ಅಧಿಕಾರಿಗಳು ಬುಧವಾರ ಗ್ರಾಮಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ವೇಳೆ ಕೋತಿಗಳು ಟ್ಯಾಂಕ್ ನಲ್ಲಿ ಬಿದ್ದು ಸಾವನ್ನಪ್ಪಿರುವುದು ಗೊತ್ತಾಗಿದೆ.. 30 ಮಂಗಗಳ ಮೃತ ದೇಹಗಳನ್ನು ಆ ಟ್ಯಾಂಕ್‌ನಿಂದ ಹೊರ ತೆಗೆಯಲಾಯಿತು. ಮಂಗಗಳು ನೀರಿನ ಟ್ಯಾಂಕ್‌ಗೆ ಬಿದ್ದು ಸಾವನ್ನಪ್ಪಿರುವ ಘಟನೆ ತಿಳಿದು ಗ್ರಾಮಸ್ಥರು ಭಯಗೊಂಡಿದ್ದಾರೆ. ಆ ಮಂಗಗಳು ಸತ್ತು ಸುಮಾರು 10 ದಿನಗಳಾಗಿವೆ.. ಅಂದಿನಿಂದ ಅದೇ ನೀರನ್ನು ಜನರು ಕುಡಿಯುತ್ತಿದ್ದರು.. ಇದರಿಂದ ಏನಾದರೂ ಕಾಯಿಲೆಗಳು ಬರಬಹುದು ಎಂದು ಜನ ಭಯಭೀತರಾಗಿದ್ದಾರೆ..
ಇದನ್ನೂ ಓದಿ; ಬಿಎಂಟಿಸಿ ಬಸ್ ಚಾಲಕನ ಮೇಲೆ ಚಿರತೆ ಅಟ್ಯಾಕ್..!; ಬಸ್‌ಗೆ ನುಗ್ಗಿದ ಕಾಡುಮೃಗ!
ಹತ್ತು ದಿನಗಳಾದರೂ ಜನಕ್ಕೆ ಗೊತ್ತಿರಲಿಲ್ಲ;
ಮಂಗಗಳು ಸತ್ತಿರುವ ನೀರು ಕುಡಿದರೆ ಏನಾದ್ರೂ ಕಂಗಾಲಾಗುತ್ತೆ ಎಂದು ಗ್ರಾಮಸ್ಥರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಸಮಸ್ಯೆ ಉಂಟಾಗಬಹುದು ಎಂದು ಅವರು ಹೆದರುತ್ತಾರೆ. ಪ್ರತಿ 6 ತಿಂಗಳಿಗೊಮ್ಮೆ ನೀರಿನ ತೊಟ್ಟಿಗಳನ್ನು ಸ್ವಚ್ಛಗೊಳಿಸಬೇಕು. ಆದರೆ ಅಧಿಕಾರಿಗಳು ಒಂದು ದಿನವೂ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಘಟನೆಯಲ್ಲಿ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.
ಇದನ್ನೂ ಓದಿ; ಆರ್‌ಸಿಬಿಯಲ್ಲಿ ಕನ್ನಡಿಗ ಆಟಗಾರರಿಗೆ ಬೆಲೆಯೇ ಇಲ್ಲವೇ..?; ವಿಜಯ್‌ಗೆ ಅವಕಾಶ ಸಿಗದಿದ್ದು ಯಾಕೆ..?