ರಾಹುಲ್ ಗಾಂಧಿಗೆ ವಯನಾಡು ಗೆಲ್ಲೋದು ಅಷ್ಟು ಸುಲಭವಲ್ಲ..!; ಏನೇಳ್ತಾರೆ ಜನ..?
ವಯನಾಡು; ಉತ್ತರ ಪ್ರದೇಶದ ಅಮೇಥಿಯಿಂದ ಸ್ಪರ್ಧೆ ಮಾಡುತ್ತಿದ್ದ ರಾಹುಲ್ ಗಾಂಧಿಯವರು ಈಗ ಕೇರಳದ ವಯನಾಡಿಗೆ ಫಿಕ್ಸ್ ಆಗಿದ್ದಾರೆ.. ಇಂದು ಅವರು ಭರ್ಜರಿ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.. ಕಳೆದ ಲೋಕಸಭಾ ಚುನಾವಣೆ ಅಂದ್ರೆ 2019ರಲ್ಲಿ ರಾಹುಲ್ ಗಾಂಧಿಯವರು ಭಾರೀ ಬಹುಮತದೊಂದಿಗೆ ವಯನಾಡು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು.. ಅಮೇಥಿಯಲ್ಲಿ ಸೋಲುಂಡಿದ್ದರು.. ಹೀಗಾಗಿ ಈ ಬಾರಿ ಉತ್ತರ ಭಾರತ ಬೇಡವೇ ಬೇಡ ಎಂದು ವಯನಾಡಿಗೆ ಫಿಕ್ಸ್ ಆಗಿದ್ದಾರೆ.. ಆದ್ರೆ ಈ ಬಾರಿ ರಾಹುಲ್ ಗಾಂಧಿಗೆ ವಯನಾಡಿನಲ್ಲಿ ಗೆಲುವು ಅಷ್ಟು ಸುಲಭವಲ್ಲ ಎಂದು ಹೇಳಲಾಗುತ್ತಿದೆ..
ಇದನ್ನೂ ಓದಿ; ಬೆಂಗಳೂರಲ್ಲಿ ಇವತ್ತು ಮಳೆ ಬರುತ್ತೆ; ಮುಂದಿನ 5 ತಂಪೆರೆಯುವ ವರುಣ!
ವಯನಾಡಲ್ಲಿ ರಾಹುಲ್ ಗೆಲ್ಲಲು ಹರಸಾಹಸಪಡಬೇಕಾ..?;
ವಯನಾಡಿನಲ್ಲಿ ಕಳೆದ ಬಾರಿ ರಾಹುಲ್ ಗಾಂಧಿಗೆ ಗೆಲುವು ಅತ್ಯಂತ ಸುಲಭವಾಗಿತ್ತು.. ಆದ್ರೆ ಈ ಬಾರಿ ಗೆಲ್ಲುವುದಕ್ಕೆ ಹರಸಾಹಸಪಡಬೇಕಾದ ಅನಿವಾರ್ಯತೆ ಇದೆ.. ಯಾಕಂದ್ರೆ ಬಿಜೆಪಿ ಪಕ್ಷ ಅಮೇಥಿಯಂತೆ ಇಲ್ಲೂ ರಾಹುಲ್‌ಗಾಂಧಿಯನ್ನು ಸೋಲಿಸಲು ರಣತಂತ್ರ ರೂಪಿಸುತ್ತಿದೆ.. ಅದಕ್ಕಾಗಿ ಕೇರಳದ ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರನ್ ಅವರನ್ನೇ ವಯನಾಡಿನಲ್ಲಿ ಅಖಾಡಕ್ಕಿಳಿಸಿದೆ.. ಇನ್ನು ಸಿಪಿಐ ಪಕ್ಷ ವಯನಾಡು ಕ್ಷೇತ್ರವನ್ನು ತನಗೆ ಬಿಟ್ಟುಕೊಡುವಂತೆ ಕೇಳಿತ್ತು.. ಅದ್ರೆ ಕಾಂಗ್ರೆಸ್ ಬಿಟ್ಟುಕೊಟ್ಟಿಲ್ಲ.. ಹೀಗಾಗಿ, ಸಿಪಿಐ ಜನಪ್ರಿಯ ನಾಯಕಿಯಾಗಿರುವ ಅನ್ನಿ ರಾಜಾ ಅವರನ್ನು ಅಖಾಡಕ್ಕಿಳಿಸಲಾಗಿದೆ.. ಬಿಜೆಪಿ ಹಾಗೂ ಸಿಪಿಐ ಅಭ್ಯರ್ಥಿಗಳು ಸ್ಟ್ರಾಂಗ್ ಇರುವುದರಿಂದ ರಾಹುಲ್ ಗಾಂಧಿಗೆ ಈ ಬಾರಿ ಗೆಲುವು ಸುಲಭವಾಗುವುದಿಲ್ಲ ಎಂದೇ ಹೇಳಲಾಗುತ್ತಿದೆ..
ಇದನ್ನೂ ಓದಿ; ಬಿಎಂಟಿಸಿ ಬಸ್ ಚಾಲಕನ ಮೇಲೆ ಚಿರತೆ ಅಟ್ಯಾಕ್..!; ಬಸ್‌ಗೆ ನುಗ್ಗಿದ ಕಾಡುಮೃಗ!
ವಯನಾಡಿಗೆ ಬರಲಿರುವ ಸ್ಮೃತಿ ಇರಾನಿ;
ಬಿಜೆಪಿ ನಾಯಕಿ ಸ್ಮೃತಿ ಇರಾನಿಯವರು ಅಮೇಥಿಯಲ್ಲಿ ರಾಹುಲ್ ಗಾಂಧಿಯವರನ್ನು ಕಳೆದ ಚುನಾವಣೆಯಲ್ಲಿ ಸೋಲಿಸಿದ್ದರು.. ಇದಾದ ಮೇಲೆ ರಾಹುಲ್ ಗಾಂಧಿ ಆ ಕಡೆಗೆ ಹೆಜ್ಜೆ ಇಟ್ಟಿಲ್ಲ.. ಈ ಬಾರಿ ಅಮೇಥಿ ಬೇಡವೇ ಬೇಡ ಎಂದುಕೊಂಡಿದ್ದಾರೆ.. ವಯನಾಡು ಸೇಫ್ ಅಂತ ಇಲ್ಲಿಯೇ ಸ್ಪರ್ಧೆ ಮಾಡುತ್ತಿದ್ದಾರೆ.. ಇಲ್ಲೂ ಕೂಡಾ ರಾಹುಲ್ ಗಾಂಧಿಗೆ ಸೋಲುಣಿಸಲು ಬಿಜೆಪಿ ಭರ್ಜರಿ ಪ್ಲ್ಯಾನ್ ಮಾಡಿದಂತೆ ಕಾಣುತ್ತಿದೆ.. ಅದಕ್ಕಾಗಿಯೇ ಸ್ಮೃತಿ ಇರಾನಿಯುವರೇ ಬಿಜೆಪಿ ಅಭ್ಯರ್ಥಿ ಸುರೇಂದ್ರನ್ ಪರವಾಗಿ ಪ್ರಚಾರ ಮಾಡಲು ಬರುತ್ತಿದ್ದಾರೆ.. ನಾಳೆ ಸುರೇಂದ್ರನ್ ಅವರು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.. ಈ ವೇಳೆ ಸ್ಮೃತಿ ಇರಾನಿಯವರೂ ಕೂಡ ಸಾಥ್ ನೀಡುತ್ತಿದ್ದಾರೆ. ಈ ಬಿಗ್‌ಫೈಟ್‌ನಲ್ಲಿ ವಯನಾಡು ಲೋಕಸಭಾ ಕ್ಷೇತ್ರದ ರಿಸಲ್ಟ್ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ; ಆರ್‌ಸಿಬಿಯಲ್ಲಿ ಕನ್ನಡಿಗ ಆಟಗಾರರಿಗೆ ಬೆಲೆಯೇ ಇಲ್ಲವೇ..?; ವಿಜಯ್‌ಗೆ ಅವಕಾಶ ಸಿಗದಿದ್ದು ಯಾಕೆ..?
ಕಳೆದ ಚುನಾವಣೆಯಲ್ಲಿ ರಾಹುಲ್ ಗಾಂಧಿ ಗಳಿಸಿದ್ದೆಷ್ಟು..?
2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ಸಿಪಿಐನಿಂದ ಪಿ.ಪಿ,ಸುನೀರ್ ಅಖಾಡಕ್ಕಿಳಿದಿದ್ದರು.. ಈ ಚುನಾವಣೆಯಲ್ಲಿ ರಾಹುಲ್ ಗಾಂಧಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು.. ಈ ಕೇತ್ರದಲ್ಲಿ 2019ರಲ್ಲಿ 10 ಲಕ್ಷ 92 ಸಾವಿರ ಮತಗಳು ಚಲಾವಣೆಯಾಗಿದ್ದರೆ, ಅದರಲ್ಲಿ ರಾಹುಲ್ ಗಾಂಧಿಯವರಿಗೆ 7.06 ಲಕ್ಷ ಮತಗಳು ಬಂದಿದ್ದರು.. ಎದುರಾಳಿ ಅಭ್ಯರ್ಥಿ ಸುನೀರ್ 2.74 ಲಕ್ಷ ಮತಗಳನ್ನಷ್ಟೇ ಗಳಿಸಲು ಶಕ್ತವಾಯಿತು.. ಆದ್ರೆ ಈ ಬಾರಿ ರಾಹುಲ್ ಗೆ ಸ್ವಲ್ಪ ಕಷ್ಟವಾಗಲಿದೆ.. ಯಾಕಂದ್ರೆ ಕಳೆದ ಬಾರಿ ರಾಹುಲ್ ಹೊಸದಾಗಿ ಬಂದಿದ್ದರಿಂದ ಎಲ್ಲರೂ ರಾಹುಲ್ ಗೆ ಮತ ಹಾಕಿದ್ದರು.. ಆದ್ರೆ ಈ ಐದು ವರ್ಷಗಳಲ್ಲಿ ಅಭಿವೃದ್ಧಿ ಮಾಡಿದೇನೂ ಅಷ್ಟಕ್ಕಷ್ಟೇ… ವಯನಾಡಿಗೆ ಬಂದುಹೋಗಿದ್ದು ಕೂಡಾ ಕಡಿಮೆಯೇ.. ಹೀಗಾಗಿ ಕೆಲವರಿಗೆ ಅಸಮಾಧಾನ ಕೂಡಾ ಇದೆ..
ಇದನ್ನೂಓದಿ; ಮೈಸೂರು ಕಾಂಗ್ರೆಸ್ ಅಭ್ಯರ್ಥಿ ಒಕ್ಕಲಿಗರಲ್ಲವೇ..?; ಪ್ರತಾಪ ಸಿಂಹ ಹೇಳೋದೇನು..?
ಏಪ್ರಿಲ್ 26ರಂದೇ ಮತದಾನ;
ವಯನಾಡಿನಲ್ಲೂ ಏಪ್ರಿಲ್ 26ರಂದೇ ಮತದಾನ ನಡೆಯಲಿದೆ.. ಜೂನ್ 4ರಂದು ಫಲಿತಾಂಶ ಬರಲಿದೆ.. ರಾಹುಲ್ ಗಾಂಧಿಯವರು ಈ ಬಾರಿಯೂ ಎರಡು ಕಡೆ ಸ್ಪರ್ಧೆ ಮಾಡುವ ಅವಕಾಶವಿತ್ತು.. ಕರ್ನಾಟಕ ಅಥವಾ ತೆಲಂಗಾಣದಲ್ಲಿ ಸ್ಪರ್ಧೆ ಮಾಡಬಹುದಿತ್ತು.. ಆದ್ರೆ ಒಂದೇ ಕಡೆ ಸ್ಪರ್ಧೆ ಮಾಡಿದ್ದಾರೆ.. ಆದ್ರೆ ಅಲ್ಲಿ ಈಗ ಇಬ್ಬರು ಪ್ರಬಲ ಸ್ಪರ್ಧಿಗಳು ಫೈಟ್ ನೀಡುತ್ತಿದ್ದಾರೆ..
ಇದನ್ನೂ ಓದಿ; ಬರ್ತ್ ಡೇ ದಿನವೇ ಭೀಕರ ಅಪಘಾತ; ದೇವಸ್ಥಾನದ ಬಳಿಯೇ ತಾಯಿ, ಮಗು ದಾರುಣ ಸಾವು!