ಇಲ್ಲಿ ಕುಟುಂಬದ ಸಹೋದರರೆಲ್ಲಾ ಒಂದೇ ಹುಡುಗಿಯನ್ನು ಮದುವೆಯಾಗ್ತಾರೆ!
ನವದೆಹಲಿ; ಒಬ್ಬ ವ್ಯಕ್ತಿ ಹಲವು ಮಹಿಳೆಯರನ್ನು ಮದುವೆಯಾಗುವುದನ್ನು ನೋಡಿದ್ದೇವೆ.. ಆದ್ರೆ ಒಬ್ಬ ಮಹಿಳೆ ಒಟ್ಟಿಗೆ ಹಲವು ಗಂಡಸರನ್ನು ಮದುವೆಯಾಗುವುದು. ಅವರ ಜೊತೆಗೆ ಒಟ್ಟಿಗೆ ಸಂಸಾರ ನಡೆಸುವುದನ್ನು ನಾವು ನೋಡಿರೋದಕ್ಕೆ ಸಾಧ್ಯವೇ ಇಲ್ಲ.. ಆದ್ರೆ ಇಂತಹದ್ದೊಂದು ಪದ್ಧತಿ ಭಾರತದಲ್ಲಿಯೇ ಇದೆ.. ಹಿಮಾಚಲ ಪ್ರದೇಶ ಮತ್ತು ಅರುಣಾಚಲ ಪ್ರದೇಶದ ಕೆಲ ಭಾಗಗಳಲ್ಲಿ ಒಡಹುಟ್ಟಿದ ಎಲ್ಲಾ ಸಹೋದರರನ್ನೂ ಒಬ್ಬ ಮಹಿಳೆ ಮದುವೆಯಾಗುತ್ತಾಳೆ.. ಅಂದರೆ, ಒಂದು ಮನೆಯಲ್ಲಿರುವ ಎಲ್ಲಾ ಗಂಡುಮಕ್ಕಳಿಗೂ ಒಬ್ಬಳೇ ಮಹಿಳೆ ಹೆಂಡತಿಯಾಗಿ ಹೋಗುತ್ತಾಳೆ..
ಈಗಲೂ ಕೂಡಾ ಈ ಭಾಗದ ಕೆಲವು ಕಡೆ ಈ ಪದ್ಧತಿ ಜೀವಂತವಾಗಿದೆ.. ಇದನ್ನು ಬಹುಪತಿತ್ವ ಎಂದು ಕರೆಯುತ್ತಾರೆ.. ಕಠಿಣ ಕಾನೂನುಗಳು ಬಂದ ಮೇಲೆ ಈ ಪದ್ಧತಿ ಬಹುತೇಕ ನಶಿಸಿದ್ದರೂ, ಕೆಲವು ಕಡೆ ಕದ್ದುಮುಚ್ಚಿ ಇಂತಹ ಮದುವೆಗಳು ಈಗಲೂ ಆಗುತ್ತವಂತೆ!. ಒಂದು ಮನೆಯಲ್ಲಿ ಮೂರು ನಾಲ್ಕು ಗಂಡು ಮಕ್ಕಳಿದ್ದರೆ, ಮಹಿಳೆ ಎಲ್ಲರನ್ನೂ ಒಟ್ಟಿಗೆ ಮದುವೆಯಾಗುತ್ತಾಳೆ.. ಅವರೆಲ್ಲರ ಜೊತೆಯೂ ಸಂಸಾರ ನಿಭಾಯಿಸಿಕೊಂಡು ಹೋಗುತ್ತಾಳೆ..
ಹೀಗೆ ಮದುವೆಯಾಗಿರುವ ಹೆಣ್ಣು ಒಬ್ಬನ ಜೊತೆ ಏಕಾಂತದಲ್ಲಿದ್ದರೆ ಅದನ್ನು ತಿಳಿಯಲು ಕೋಣೆ ಹೊರಗೆ ಆತ ಧರಿಸುವ ಟೋಪಿಯನ್ನು ನೇತುಹಾಕಲಾಗಿರುತ್ತದೆ.. ಆಗ ಇತರ ಗಂಡಸರು ಕೋಣೆಗೆ ಪ್ರವೇಶ ಮಾಡೋದಿಲ್ಲ.. ಜೊತೆಗೆ ಸಹೋದರರು ಕೂಡಾ ಪತ್ನಿಯ ಜೊತೆ ಯಾರು ಎಷ್ಟು ಹೊತ್ತು ಕಾಲ ಕಳೆಯಬೇಕು. ಯಾವ ಯಾವ ಸಮಯದಲ್ಲಿ ಕಾಲ ಕಳೆಯಬೇಕು ಎಂಬುದನ್ನೂ ಮೊದಲೇ ನಿರ್ಧರಿಸಲಾಗಿರುತ್ತದಂತೆ.. ಎಲ್ಲರಿಗೂ ಬೇರೆ ಬೇರೆ ಪತ್ನಿಯರನ್ನು ತಂದೆ ಕುಟುಂಬ ಒಡೆಯುತ್ತದೆ.. ಭೂಮಿ ಹಂಚಿಕೆಯಾಗುತ್ತಾ ಹೋಗುತ್ತದೆ.. ಎಲ್ರಿಗೂ ಒಂದೇ ಹೆಂಡತಿಯಾದರೆ ಜಮೀನು ಹಂಚಿಕೆಯಾಗೋದು ತಡೆಯಬಹುದು ಅನ್ನೋ ಕಾರಣಕ್ಕೆ ಇದ್ಧತಿ ಜಾರಿಗೆ ತರಲಾಗಿತ್ತು ಎಂದು ಇತಿಹಾಸ ಹೇಳುತ್ತದೆ..