EconomyLifestyle

ದೇಶದ ಅತ್ಯಂತ ದುಬಾರಿ ಮನೆಗಳಿವು..!; ಯಾವ ಮನೆಗೆ ಎಷ್ಟು ಬೆಲೆ..?

ಭಾರತದಲ್ಲಿ ಅತ್ಯಂತ ಶ್ರೀಮಂತ ವ್ಯಕ್ತಿಗಳು ತುಂಬಾ ಜನ ಇದ್ದಾರೆ.. ಅವರಲ್ಲಿ ಒಬ್ಬೊಬ್ಬರಿಗೆ ಒಂದೊಂದು ಕ್ರೇಜ್‌ ಇರುತ್ತದೆ.. ಕೆಲವರಂತೂ ಮನೆಗಳಿಗೆ ಬಿಲಿಯನ್‌ ಗಟ್ಟಲೆ ದುಡ್ಡು ಸುರಿದು ಕಟ್ಟಿರುತ್ತಾರೆ.. ಭಾರತದಲ್ಲಿ ಮುಖೇಶ್‌ ಅಂಬಾನಿಯಂತಹ ಜಗತ್ತಿನಲ್ಲೇ ದೊಡ್ಡ ಶ್ರೀಮಂತರಿದ್ದಾರೆ.. ಇವರ ಮನೆಗಳು ಅರಮನೆಗಳ ರೀತಿ ವೈಭವೋಪೇತ.. ಇಲ್ಲಿ ಒಂದಷ್ಟು ಮನೆಗಳು ಹಾಗೂ ಅವರ ಬೆಲೆಗಳನ್ನು ನೀಡುವ ಪ್ರಯತ್ನ ಮಾಡಿದ್ದೇವೆ.

ಇದನ್ನೂ ಓದಿ; ಸಿಎಂ ಬೆಂಗಾವಲು ವಾಹನದ ಹಿಂದಿನ ಕಾರಿನಲ್ಲಿ 1.25 ಕೋಟಿ ರೂಪಾಯಿ ಪತ್ತೆ!

 2 ಬಿಲಿಯನ್‌ ಡಾಲರ್‌ ಆಂಟಿಲಿಯಾ;

ಮುಕೇಶ್‌ ಅಂಬಾನಿಯವರು ಜಗತ್ತಿನಲ್ಲೇ ದೊಡ್ಡ ಶ್ರೀಮಂತರು.. ಇವರ ಮನೆ ಕೂಡಾ ಅವರ ರೇಂಜ್‌ಗೆ ತಕ್ಕಂತೆ ಇರಬೇಕು ಅಲ್ಲವೇ.. ಅವರ ಸ್ಟೇಟಸ್‌ಗೆ ತಕ್ಕಂತೆ ಮುಕೇಶ್‌ ಅಂಬಾನಿ ತಮ್ಮ ಮನೆ ಆಂಟಿಲಿಯಾ ಕಟ್ಟಿಕೊಂಡಿದ್ದಾರೆ.. ದಕ್ಷಿಣ ಮುಂಬೈನಲ್ಲಿರುವ ಮುಕೇಶ್‌ ಅಂಬಾನಿ ಮನೆ ಒಟ್ಟು 27 ಮಹಡಿಗಳನ್ನು ಹೊಂದಿದೆ. ಈ ಬಂಗಲೆಯ ಹೆಸರು ಆಂಟಿಲಿಯಾ.. ಈ ಮನೆಯ ಬೆಲೆ ಸುಮಾರು 1 ರಿಂದ 2 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.. ಬಕಿಂಗ್ಹ್ಯಾಮ್ ಅರಮನೆಯ ನಂತರ ಇದು ವಿಶ್ವದ ಅತ್ಯಂತ ದುಬಾರಿ ಎಂದು ಅಂದಾಜಿಸಲಾಗಿದೆ..

ಇದನ್ನೂ ಓದಿ; ಕನ್ನಡ ಸಿನಿಮಾ ನಿರ್ಮಾಣ ಮಾಡುತ್ತಾರಂತೆ ಟೀಂ ಇಂಡಿಯಾ ಆಟಗಾರ ಎಂ.ಎಸ್‌.ಧೋನಿ!

ಶಾರುಖ್‌ ಖಾನ್‌ ಮನ್ನತ್‌ ಬಂಗಲೆ;

ಬಾಲಿವುಡ್‌ ಖಾನ್‌ ತ್ರಯರಲ್ಲಿ ಶಾರುಖ್‌ ಖಾನ್‌ ಒಬ್ಬರು.. ಬಹುಬೇಡಿಕೆಯ ನಟ ಶಾರುಖ್‌ ಖಾನ್‌ ಕೂಡಾ ತಮ್ಮ ಸ್ಟೇಟಸ್‌ಗೆ ತಕ್ಕಂತೆ ಮನೆ ಕಟ್ಟಿಕೊಂಡಿದ್ದಾರೆ.. ಅದರ ಹೆಸರು ಮನ್ನತ್‌.. ಇದು ಮುಂಬೈನ ಅರಬ್ಬಿ ಸಮುದ್ರದ ಪಕ್ಕದಲ್ಲಿದೆ.. ಮುಂಬೈನಲ್ಲಿ ಬಾಂದ್ರಾದಲ್ಲಿರುವ  ಈ ಬಂಗಲೆಯ ಬೆಲೆ 200 ಕೋಟಿ ರೂಪಾಯಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಆರು ಅಂತಸ್ತಿನ ಈ ಮನೆಯನ್ನು ಶಾರುಖ್ ಪತ್ನಿ ಗೌರಿ ಖಾನ್ ಸುಂದರವಾಗಿ ಅಲಂಕರಿಸಿದ್ದಾರೆ. ಈ ಮನೆಯ ಒಳಾಂಗಣ ಅದ್ಭುತವಾಗಿದೆ. ಜಿಮ್, ಲೈಬ್ರರಿ, ಈಜುಕೊಳ, ಖಾಸಗಿ ಚಿತ್ರಮಂದಿರ ಎಲ್ಲವೂ ಈ ಮನೆಯಲ್ಲಿದೆ.

ಇದನ್ನೂ ಓದಿ; ಸರ್ಕಾರಿ ಬಸ್‌ ಅಡ್ಡಗಟ್ಟಿ ಗೂಂಡಾಗಿರಿ; ಚಾಲಕ, ನಿರ್ವಾಹಕನ ಮೇಲೆ ಹಲ್ಲೆ!

ಆನಂದ್‌ ಪಿರಾಮಲ್‌ ಬಂಗಲೆ;

ಗುಲಿತಾ ಪಿರಾಮಲ್ ಗ್ರೂಪ್ ಅಧ್ಯಕ್ಷ ಅಜಯ್ ಪಿರಾಮಲ್ ಈ ಮನೆಯನ್ನು ತಮ್ಮ ಮಗ ಆನಂದ್ ಪಿರಾಮಲ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಆನಂದ್ ಅವರು ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಅವರನ್ನು ವಿವಾಹವಾದಾಗ ಈ ಮನೆಯನ್ನು ಉಡುಗೊರೆಯಾಗಿ ನೀಡಲಾಯಿತು. ಮುಂಬೈನಲ್ಲಿರುವ ಈ ಮನೆಯನ್ನು ವಜ್ರದ ಆಕಾರದಲ್ಲಿ ನಿರ್ಮಿಸಲಾಗಿದೆ. ಈ ಮನೆಯ ಬೆಲೆ 450 ಕೋಟಿ. ಈ ಮನೆಯಲ್ಲಿ ದೇವಸ್ಥಾನವೂ ಇದೆ.

ಕುಮಾರ ಮಂಗಳಂ ಬಿರ್ಲಾ ನಿವಾಸ;

ಝೆಟಿಯಾ ಹೌಸ್ ಝೆಟಿಯಾ ಹೌಸ್ ಮುಂಬೈನ ಮಲಬಾರ್ ಹಿಲ್ ಪ್ರದೇಶದಲ್ಲಿ ಕುಮಾರ್ ಮಂಗಳಂ ಬಿರ್ಲಾ ಮನೆ ಇದೆ. ಕೈಗಾರಿಕೋದ್ಯಮಿ ಕುಮಾರ್ ಮಂಗಳಂ ಬಿರ್ಲಾ ಅವರಿಗೆ ಸೇರಿದ ಈ ಬಂಗಲೆ 30 ಸಾವಿರ ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಈ ಬಂಗಲೆಯ ಬೆಲೆ 425 ಕೋಟಿ. ಈ ಮನೆಯಲ್ಲಿ 20 ಮಲಗುವ ಕೋಣೆಗಳಿವೆ. ತೆರೆದ ಪ್ರಾಂಗಣ ಮತ್ತು ಉದ್ಯಾನವೂ ಇದೆ.

ಗೌತಮ್‌ ಸಿಂಘಾನಿಯಾ ಜೆಕೆ ಹೌಸ್‌;

ಜೆಕೆ ಹೌಸ್ ಕೈಗಾರಿಕೋದ್ಯಮಿ ಗೌತಮ್ ಸಿಂಘಾನಿಯಾ ಅವರ ಜೆಕೆ ಹೌಸ್ ಬ್ರೀಚ್ ಕ್ಯಾಂಡಿ ಪ್ರದೇಶದಲ್ಲಿದೆ. ಗೌಮತ್ ಸಿಂಘಾನಿಯಾ ಅವರು ರೇಮಂಡ್ ಗ್ರೂಪ್‌ನ ಅಧ್ಯಕ್ಷರಾಗಿದ್ದಾರೆ. 30 ಅಂತಸ್ತಿನ ಈ ಮನೆಯ ಬೆಲೆ 6 ಸಾವಿರ ಕೋಟಿ. ಈ ಮನೆ ಎಲ್ಲಾ ಆಧುನಿಕ ಸೌಕರ್ಯಗಳನ್ನು ಹೊಂದಿದೆ. ಮನೆಯಲ್ಲಿ ಎರಡು ಈಜುಕೊಳಗಳು, ಐದು ಪಾರ್ಕಿಂಗ್ ಮಹಡಿಗಳು, ಹೆಲಿಪ್ಯಾಡ್, ಸ್ಪಾ, ಜಿಮ್, ಹೋಮ್ ಥಿಯೇಟರ್ ಇದೆ.

ಇದನ್ನೂ ಓದಿ; ಲೋಕಸಭಾ ಚುನಾವಣೆ; ಕರ್ನಾಟಕದಲ್ಲಿ ಜನರ ಮೂಡ್‌ ಹೇಗಿದೆ..? – ಧರ್ಮ ನಡೆಯೋಲ್ಲ ಎಂದ ಜನ!

ಟಾಟಾ ಪಾರಂಪರಿಕ ಭಂಗಲೆ;

ಫೇರ್ಲಾನ್ ಮುಂಬೈನ ಕೊಲಾಬಾದಲ್ಲಿರುವ ರತನ್ ಟಾಟಾ ಅವರ ಪಾರಂಪರಿಕ ಬಂಗಲೆಯಾಗಿದೆ. ಈ ಸಾಂಪ್ರದಾಯಿಕ ಬಂಗಲೆಯು ವಸಾಹತುಶಾಹಿ ವಾಸ್ತುಶಿಲ್ಪವನ್ನು ಹೊಂದಿದೆ. ಬಂಗಲೆಯು ಅದ್ಭುತವಾದ ಸಮುದ್ರ ನೋಟವನ್ನು ಹೊಂದಿದೆ. ಈ ಬಂಗಲೆಯ ಬೆಲೆ 150 ಕೋಟಿ. ಇದು ಈಜುಕೊಳ, ಮಾಧ್ಯಮ ಕೊಠಡಿ, ಜಿಮ್, ಸನ್ ಡೆಕ್, ಗ್ರಂಥಾಲಯ, ಪಾರ್ಕಿಂಗ್ ಸೌಲಭ್ಯಗಳನ್ನು ಹೊಂದಿದೆ.

ಅಮಿತಾಬ್‌ ಜಲ್ಸಾ ಬಂಗಲೆ;

ಬಾಲಿವುಡ್ ಕಿಂಗ್ ಅಮಿತಾಬ್ ಬಚ್ಚನ್ ಅವರ ಜಲ್ಸಾ ಬಂಗಲೆಯು ಜುಹುದಲ್ಲಿದೆ. ಎರಡು ದಶಕಗಳಿಂದ ಬಚ್ಚನ್ ಕುಟುಂಬ ಇಲ್ಲಿ ನೆಲೆಸಿದೆ. ಈ ಬಂಗಲೆಯು ಎರಡು ಮಹಡಿಗಳನ್ನು ಹೊಂದಿದೆ. ಅಮಿತಾಭ್ ಜೊತೆಗೆ ಜಯಾ ಬಚ್ಚನ್, ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಈ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಸತ್ತೇ ಪೇ ಸತ್ತಾ ಚಿತ್ರದಲ್ಲಿ ಅಮಿತಾಭ್ ಅಭಿನಯಕ್ಕಾಗಿ ನಿರ್ಮಾಪಕ ರಮೇಶ್ ಸಿಪ್ಪಿ ಈ ಬಂಗಲೆಯನ್ನು ಉಡುಗೊರೆಯಾಗಿ ನೀಡಿದ್ದರು. ಈ ಬಂಗಲೆಯ ಬೆಲೆ 120 ಕೋಟಿ.

ಇದನ್ನೂ ಓದಿ; ಬೆಳಗಿನ ಉಪಾಹಾರ ಸೇವಿಸಿದರೆ ತೂಕ ಹೆಚ್ಚಾಗುತ್ತಾ ಅಥವಾ ಕಡಿಮೆಯಾಗುತ್ತಾ..?

 

Share Post