CinemaSports

ಕನ್ನಡ ಸಿನಿಮಾ ನಿರ್ಮಾಣ ಮಾಡುತ್ತಾರಂತೆ ಟೀಂ ಇಂಡಿಯಾ ಆಟಗಾರ ಎಂ.ಎಸ್‌.ಧೋನಿ!

ಮುಂಬೈ; ಟೀಂ ಇಂಡಿಯಾ ಆಡಗಾರ ಎಂ.ಎಸ್‌.ಧೋನಿ ಬಿಡುವಿನ ವೇಳೆಯಲ್ಲಿ ಕೃಷಿ ಮಾಡಿಸುತ್ತಾರೆ.. ಇದರ ಜೊತೆಗೆ ಅವರು ಶಾಲೆಗಳನ್ನೂ ಹೊಂದಿದ್ದಾರೆ.. ಇದರ ಜೊತೆಗೆ ಅವರು ಧೋನಿ ಎಂಟರ್‌ಟೇನ್‌ ಮೆಂಟ್‌ ಎಂದು ಚಿತ್ರ ನಿರ್ಮಾಣ ಸಂಸ್ಥೆಯನ್ನೂ ಹುಟ್ಟುಹಾಕಿದ್ದಾರೆ.. ಈಗಾಗಲೇ ಒಂದು ಸಿನಿಮಾ ಕೂಡಾ ಇವರ ಬ್ಯಾನರ್‌ ನಲ್ಲಿ ಬಂದಿದೆ.. ಇದೀಗ ಅವರು ಕನ್ನಡದ ಸಿನಿಮಾ ಒಂದನ್ನು ಮಾಡಲು ತಯಾರಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಸರ್ಕಾರಿ ಬಸ್‌ ಅಡ್ಡಗಟ್ಟಿ ಗೂಂಡಾಗಿರಿ; ಚಾಲಕ, ನಿರ್ವಾಹಕನ ಮೇಲೆ ಹಲ್ಲೆ!

ಶೀಘ್ರವೇ ಘೋಷಣೆಯಾಗಲಿದೆ ಕನ್ನಡ ಚಿತ್ರ;

ಎಂ.ಎಸ್‌ಧೋನಿಯವರು ಹಲವು ಭಾಷೆಗಳಲ್ಲಿ ಚಿತ್ರಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ.. ಅವರ ಪತ್ನಿ ಕೂಡಾ ಇದರಲ್ಲಿ ಸಾಥ್‌ ಕೊಡುತ್ತಿದ್ದಾರೆ.. ಇನ್ನು ಧೋನಿ ಚಿತ್ರ ನಿರ್ಮಾಣ ಸಂಸ್ಥೆಯಿಂದ ಶೀಘ್ರದಲ್ಲೇ ಕನ್ನಡ ಸಿನಿಮಾ ಸೆಟ್ಟೇರಲಿದೆ.. ಈ ವಿಷಯ ತಿಳಿಯುತ್ತಿದ್ದಂತೆ ಅವರ ಕನ್ನಡದ ಅಭಿಮಾನಿಗಳು ಫುಲ್‌ ಖುಷಿಯಾಗಿದ್ದಾರೆ.. ಬೇರೆ ರಾಜ್ಯದವರಾಗಿದ್ದರೂ, ಕನ್ನಡದ ಬಗ್ಗೆ ಅಭಿಮಾನವಿಟ್ಟುಕೊಂಡು ಕನ್ನಡ ಚಿತ್ರ ನಿರ್ಮಾಣ ಮಾಡುತ್ತಿರುವುದಕ್ಕೆ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ.. ಬೇರೆ ರಾಜ್ಯಗಳಿಂದ ಬಂದು ಕನ್ನಡ ಚಿತ್ರಗಳನ್ನು ನಿರ್ಮಾಣ ಮಾಡುವುದು ಕಡಿಮೆ.. ಆದ್ರೆ ಎಂ.ಎಸ್‌.ಧೋನಿಯವರು ಕನ್ನಡದ ಬಗ್ಗೆ ವಿಶೇಷ ಕಾಳಜಿ ಹೊಂದಿರುವುದಕ್ಕೆ ಅವರ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ..

ಇದನ್ನೂ ಓದಿ; ಖಾಸಗಿ ಭಾಗಗಳಲ್ಲಿ ತುರಿಕೆ ಹೆಚ್ಚಾಗುತ್ತಿದೆಯಾ..?; ಹಾಗಾದರೆ ಇಲ್ಲಿದೆ ಸಮಸ್ಯೆಗೆ ಪರಿಹಾರ!

ತಮಿಳಿನಲ್ಲಿ ಮೊದಲ ಚಿತ್ರ ನಿರ್ಮಿಸಿದ್ದ ಧೋನಿ;

ಧೋನಿ ಎಂಟರ್‌ಟೇನ್‌ಮೆಂಟ್‌ ಸಂಸ್ಥೆಯಿಂದ ಮೊದಲ ಚಿತ್ರವಾಗಿ ತಮಿಳು ಚಿತ್ರ ನಿರ್ಮಾಣ ಮಾಡಲಾಗಿತ್ತು. ತಮಿಳು ಭಾಷೆಯಲ್ಲಿ ‘ಲೆಟ್ಸ್ ಗೆಟ್ ಮ್ಯಾರೀಡ್’ ಹೆಸರಿನ ಚಿತ್ರವನ್ನು ನಿರ್ಮಿಸಲಾಗಿದೆ.. ಇದು ರಿಲೀಸ್‌ ಆದರೂ ಕೂಡಾ ದೊಡ್ಡ ಮಟ್ಟದ ಯಶಸ್ಸು ಮಾತ್ರ ದೊರೆಯಲಿಲ್ಲ.. ಆದರೂ ಕೂಡಾ ದೋನಿಯವರು ಪ್ರಯತ್ನ  ಮಾತ್ರ ಬಿಡುತ್ತಿಲ್ಲ.. ಈಗ ಕನ್ನಡದಲ್ಲಿ ಸಿನಿಮಾ ಮಾಡಲು ಹೊರಟಿದ್ದಾರೆ..

ಇದನ್ನೂ ಓದಿ; 5 ನಿಮಿಷದ ಹಾಡಿಗೆ ಕೋಟಿ ಕೋಟಿ ಚಾರ್ಜ್‌; ದುಬಾರಿಯಾಗ್ತಿದೆ ಐಟಂ ಸಾಂಗ್‌

ಹೊಸಬರನ್ನು ಇಟ್ಟುಕೊಂಡು ಸಿನಿಮಾ ಮಾಡುವ ಧೋನಿ;

ಕ್ರಿಕೆಟಿಗ ಧೋನಿಯವರು ಹಣ ಮಾಡೋದಕ್ಕೆಂದೇ ಸಿನಿಮಾ ಮಾಡುತ್ತಿಲ್ಲ.. ಬದಲಾಗಿ ಹೊಸ ನಟರು, ನಿರ್ದೇಶಕರಿಗೆ ಅವಕಾಶ ಮಾಡಿಕೊಡೋದಕ್ಕಾಗಿ ಸಿನಿಮಾಗಳನ್ನು ಮಾಡುತ್ತಿದ್ದಾರೆ.. ಇದರ ಜೊತೆಗೆ ಪ್ರಾದೇಶಿಕ ಭಾಷೆಗಳ ಚಿತ್ರಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ.. ಹೀಗಾಗಿಯೇ ಅವರು ಮೊದಲು ತಮಿಳು ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದರು.. ಈಗ ಅವರು ಕನ್ನಡ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.. ಆದ್ರೆ ಈ ಚಿತ್ರತಂಡದಲ್ಲಿ ತಂಡದಲ್ಲಿ ಯಾರೆಲ್ಲ ಇರುತ್ತಾರೆ. ಯಾರು ನಿರ್ದೇಶನ ಮಾಡುತ್ತಾರೆ ಎಂಬುದು ಇನ್ನೂ ಗೊತ್ತಿಲ್ಲ.

 

Share Post