BengaluruHealth

49 ವೈದ್ಯಕೀಯ ವಿದ್ಯಾರ್ಥಿನಿಯರ ಅಸ್ವಸ್ಥ ಪ್ರಕರಣ; ಇಬ್ಬರಿಗೆ ಕಾಲರಾ!

ಬೆಂಗಳೂರು; ಕಳೆದ ರಾತ್ರಿ ಬೆಂಗಳೂರಿನ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ 49 ವಿದ್ಯಾರ್ಥಿನಿಯರು ವಾಂತಿ ಬೇಧಿಯಿಂದ ತೀವ್ರ ಅಸ್ವಸ್ಥಗೊಂಡಿದ್ದರು.. ಎಲ್ಲರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.. ಇವರಲ್ಲಿ ಇಬ್ಬರು ವಿದ್ಯಾರ್ಥಿನಿಯರಲ್ಲಿ ಕಾಲರಾ ಅಂಶ ಪತ್ತೆಯಾಗಿದೆ.. ಇದರಿಂದಾಗಿ ಮತ್ತಷ್ಟು ಭೀತಿ ಹೆಚ್ಚಾಗಿದೆ.. ಬೆಂಗಳೂರಿನಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಇದರಿಂದಾಗಿ ಕಾಯಿಲೆಗಳು ಹೆಚ್ಚಾಗಿ ಹರಡುತ್ತಿವೆ.. ಕಾಲರಾ ಹಾಗೂ ಡೆಂಘೀ ಪ್ರಕರಣಗಳ ಸಂಖ್ಯೆ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ..

ಇದನ್ನೂ ಓದಿ; ಅಂಜನಾದ್ರಿ ಬೆಟ್ಟದ ದೇಗುಲದ ಅರ್ಚಕರ ಕಾರು ಅಪಘಾತ; ಮೂರು ಬಾರಿ ಪಲ್ಟಿ!

ಮಹಿಳಾ ಆಯೋಗದ ಅಧ್ಯಕ್ಷೆ ಆಸ್ಪತ್ರೆಗೆ ಭೇಟಿ;

ಕಳೆದ ರಾತ್ರಿ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.. ಇವರೆಲ್ಲರೂ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ವೈದ್ಯಕೀಯ ವಿದ್ಯಾರ್ಥಿನಿಯರಾಗಿದ್ದಾರೆ.. ಇದೇ ಕಾಲೇಜಿನ ಹಾಸ್ಟೆಲ್‌ನಲ್ಲಿ ಇವರೆಲ್ಲಾ ವಾಸವಿದ್ದರು.. ರಿಪೇರಿಯಲ್ಲಿರುವ ವಾಟರ್‌ ಟ್ಯಾಂಕ್‌ನಿಂದ ನೀರು ಪೂರೈಕೆ ಮಾಡಲಾಗುತ್ತಿತ್ತು.. ನೀರು ಕಲುಷಿತಗೊಂಡ ಕಾರಣದಿಂದ ಈ ಘಟನೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.. ಇನ್ನು ವಿಷಯ ತಿಳಿದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಣೆ ಮಾಡಿದರು.. ಇದೇ ವೇಳೆ ವಿದ್ಯಾರ್ಥಿನಿಯರು ಹಲವು ದೂರುಗಳನ್ನು ಹೇಳಿದ್ದಾರೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಸಿಎಂ ಬೆಂಗಾವಲು ವಾಹನದ ಹಿಂದಿನ ಕಾರಿನಲ್ಲಿ 1.25 ಕೋಟಿ ರೂಪಾಯಿ ಪತ್ತೆ!

ಘಟನೆ ಬಗ್ಗೆ ಸುಮೋಟೋ ಕೇಸ್‌ ದಾಖಲು;

ಇನ್ನು ಘಟನೆಯ ಬಗ್ಗೆ ಮಹಿಳಾ ಆಯೋಗದಲ್ಲಿ ಸುಮೋಟೋ ಕೇಸ್‌ ದಾಖಲಿಸಿಕೊಳ್ಳಲಾಗಿದೆ.. ಇನ್ನು ವಿದ್ಯಾರ್ಥಿನಿಲಯದಲ್ಲಿನ ವ್ಯವಸ್ಥೆ ಬಗ್ಗೆ ಮಾತನಾಡಿರುವ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು, ಒಂದು ವಾರದಲ್ಲಿ ಸಮಸ್ಯೆ ಬಗೆ ಹರಿಸುವಂತೆ ಹೇಳಿದ್ದೇನೆ ಎಂದು ಹೇಳಿದ್ದಾರೆ..  ವಸತಿ ನಿಲಯಕ್ಕೆ ವಿಕ್ಟೋರಿಯಾ ಆಸ್ಪತ್ರೆಯಿಂದ ಊಟ ಹೋಗುತ್ತದೆ. ಈ ಬಗ್ಗೆ ನಾನು ವೈದ್ಯಕೀಯ ಶಿಕ್ಷಣ ಸಚಿವರ ಗಮನಕ್ಕೆ ತರುತ್ತೇನೆ ಎಂದೂ ನಾಗಲಕ್ಷ್ಮಿಯವರು ಹೇಳಿದ್ದಾರೆ.

ಇದನ್ನೂ ಓದಿ; ಕನ್ನಡ ಸಿನಿಮಾ ನಿರ್ಮಾಣ ಮಾಡುತ್ತಾರಂತೆ ಟೀಂ ಇಂಡಿಯಾ ಆಟಗಾರ ಎಂ.ಎಸ್‌.ಧೋನಿ!

37 ಡಿಗ್ರಿ ದಾಟಿದ ತಾಪಮಾನ;

ಬೇಸಿಗೆಯಲ್ಲಿ ಹಿಂದೆಂದೂ ಕಾಣದ ತಾಪಮಾನ ಬೆಂಗಳೂರಿನಲ್ಲಿದೆ.. ಬೆಂಗಳೂರಿನಲ್ಲಿ 37 ಡಿಗ್ರಿ ತಾಪಮಾನ ಇದ್ದು, ಒಮೊಮ್ಮೆ ಅದು 42 ಡಿಗ್ರಿಗೆ ಏರಿಕೆಯಾಗಿರುವುದೂ ಇದೆ.. ಕಳೆದ 15 ವರ್ಷಗಳಲ್ಲೇ ಇದು ಬೆಂಗಳೂರಿನಲ್ಲಿ ಅತ್ಯಂತ ಹೆಚ್ಚಿನ ತಾಪಮಾನ ಎಂದು ತಿಳಿದುಬಂದಿದೆ.. ಬಿಸಿಲು ಹೆಚ್ಚಾಗ್ತಿದ್ದಂತೆ ಸಾಂಕ್ರಾಮಿಕ ರೋಗಗಳು ಜನರನ್ನು ಕಾಡಲು ಶುರು ಮಾಡುತ್ತಿವೆ. ಡಿಹೈಡ್ರೇಷನ್, ಉಸಿರಾಟದ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ.. ಕಾಲರಾ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ.. ಇದರ ಜೊತೆಗೆ ಡೆಂಘೀ ಹಾಗೂ ಚಿಕನ್ ಗುನ್ಯಾ ಕೂಡಾ ಜನರನ್ನು ಕಾಡುತ್ತಿದೆ..

ಇದನ್ನೂ ಓದಿ; ಸರ್ಕಾರಿ ಬಸ್‌ ಅಡ್ಡಗಟ್ಟಿ ಗೂಂಡಾಗಿರಿ; ಚಾಲಕ, ನಿರ್ವಾಹಕನ ಮೇಲೆ ಹಲ್ಲೆ!

 

Share Post