ಬೆಳಗಿನ ಉಪಾಹಾರ ಸೇವಿಸಿದರೆ ತೂಕ ಹೆಚ್ಚಾಗುತ್ತಾ ಅಥವಾ ಕಡಿಮೆಯಾಗುತ್ತಾ..?
ಬಹುತೇಕರು ಯಾವುದು ಮಿಸ್ ಮಾಡದಿದ್ದರೂ ಬೆಳಗಿನ ಉಪಾಹಾರ ಮಿಸ್ ಮಾಡಬಾರದು ಎಂದು ಹೇಳುತ್ತಾರೆ.. ಇನ್ನು ಕೆಲವರು ಬೆಳಗಿನ ಉಪಾಹಾರ ಅವಶ್ಯಕತೇ ಇಲ್ಲ ಎಂದು ಹೇಳುತ್ತಾರೆ.. ಇನ್ನೂ ಕೆಲವರು ಬೆಳಗಿನ ಉಪಾಹಾರ ಮಾಡಿದರೆ ತೂಕ ಹೆಚ್ಚಾಗುತ್ತೆ ಎಂದು ಭಾವಿಸಿದ್ದಾರೆ.. ಹಾಗಾದ್ರೆ ಬೆಳಗಿನ ಉಪಾಹಾರ ಸೇವಿಸಿದರೆ ತೂಕ ಹೆಚ್ಚಾಗುತ್ತಾ ಅಥವಾ ತೂಕ ಕಡಿಮೆಯಾಗುತ್ತಾ..? ನೋಡೋಣ ಬನ್ನಿ..
ಇದನ್ನೂ ಓದಿ; ಕನ್ನಡ ಸಿನಿಮಾ ನಿರ್ಮಾಣ ಮಾಡುತ್ತಾರಂತೆ ಟೀಂ ಇಂಡಿಯಾ ಆಟಗಾರ ಎಂ.ಎಸ್.ಧೋನಿ!
ಬೆಳಗಿನ ಉಪಾಹಾರ ಬಿಟ್ಟರೆ ತೂಕ ಕಡಿಮೆಯಾಗುತ್ತಾ..?;
ಹೌದು, ಬಹುತೇಕರು ಇದೇ ರೀತಿ ಭಾವಿಸಿದ್ದಾರೆ.. ಬೆಳಗಿನ ಸಮಯದಲ್ಲಿ ಉಪಾಹಾರ ಸೇವಿಸದೇ ಹೋದರೆ ತೂಕ ಕಡಿಮೆಯಾಗುತ್ತದೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ.. ಆದ್ರೆ ಅದು ತಪ್ಪು ಎಂದು ಆಹಾರ ತಜ್ಞರು ಹೇಳುತ್ತಿದ್ದಾರೆ.. ತೂಕ ಇಳಿಸಿಕೊಳ್ಳಬೇಕು ಎನ್ನುವವರು ಮೊದಲು ಮಾಡುವ ಕೆಲಸವೇ ತಿನ್ನುವುದನ್ನು ನಿಲ್ಲಿಸುವುದು. ಅದರಲ್ಲೂ ಬಹು ಮುಖ್ಯವಾಗಿ, ಅವರು ಉಪಾಹಾರವನ್ನು ಬಿಟ್ಟುಬಿಡುತ್ತಾರೆ. ಆದ್ರೆ ಇದರಿಂದ ತೂಕ ಕಡಿಮೆಯಾಗುವುದಿಲ್ಲ.. ಬದಲಾಗಿ ತೂಕ ಇನ್ನೂ ಹೆಚ್ಚಾಗುತ್ತದೆ.. ಅಧ್ಯಯನಗಳ ಪ್ರಕಾರ, ಬೆಳಗಿನ ಉಪಾಹಾರ ತ್ಯಜಿಸಿದಾಗ ನಮ್ಮ ದೇಹದ ಜೈವಿಕ ಗಡಿಯಾರವು ತೂಕವನ್ನು ಹೆಚ್ಚಿಸಲು ಸಂಕೇತವನ್ನು ಕಳುಹಿಸುತ್ತದೆ. ಅಲ್ಲದೆ, ಮುಂಜಾನೆ ಊಟವನ್ನು ಬಿಟ್ಟುಬಿಡುವುದು ದಿನವಿಡೀ ಅತಿಯಾಗಿ ತಿನ್ನಲು ಕಾರಣವಾಗಬಹುದು. ಇದು ತೂಕ ಹೆಚ್ಚಾಗಲು ಕಾರಣವಾಗುತ್ತದೆ ಎಂದು ಆಹಾರ ತಜ್ಞರು ಹೇಳುತ್ತಾರೆ…
ಇದನ್ನೂ ಓದಿ; ಸರ್ಕಾರಿ ಬಸ್ ಅಡ್ಡಗಟ್ಟಿ ಗೂಂಡಾಗಿರಿ; ಚಾಲಕ, ನಿರ್ವಾಹಕನ ಮೇಲೆ ಹಲ್ಲೆ!
ಬೆಳಗಿನ ಉಪಾಹಾರ ಸೇವಿಸುವುದು;
ನಾವು ರಾತ್ರಿ ಊಟದ ನಂತರ ಮಲಗಿಬಿಡುತ್ತೇವೆ.. ಅಂದರೆ ದೀರ್ಘ ಕಾಲ ಏನನ್ನೂ ತಿನ್ನುವುದಿಲ್ಲ.. ಹೀಗಾಗಿ ಬೆಳಗಿನ ಉಪಾಹಾರವನ್ನು ಸೇವಿಸುವುದು ಒಳ್ಳೆಯದು ಎಂಬುದು ಆಹಾರಾ ತಜ್ಞರ ಅಭಿಪ್ರಾಯ.. ಯಾಕಂದ್ರೆ ಸುಮಾರು ಎಂಟರಿಂದ ಹತ್ತು ಗಂಟೆಗಳ ಕಾಲ ನಾವು ಏನನ್ನೂ ಸೇವನೆ ಮಾಡುವುದಿಲ್ಲ.. ಬೆಳಗ್ಗೆ ಕೂಡಾ ಉಪಾಹಾರ ಸೇವನೆ ಮಾಡದೇ ಹೋದರೆ ದೇಹದಲ್ಲಿ ಶಕ್ತಿ ಇರುವುದಿಲ್ಲ.. ಇದರಿಂದ ಹಸಿವು ಹೆಚ್ಚಾಗಿ ಯಾವ ಕೆಲಸ ಮಾಡೋದಕ್ಕೂ ಆಸಕ್ತಿ ಇರೋದಿಲ್ಲ.. ಹೀಗಾಗಿ ಯಾವುದೇ ಕಾರಣಕ್ಕೂ ಉಪಾಹಾರ ಸೇವನೆ ಮಾಡೋದನ್ನು ನಿಲ್ಲಿಸಬೇಡಿ.. ಬೆಳಗಿನ ಉಪಾಹಾರ ಆರೋಗ್ಯಕ್ಕೆ ಒಳ್ಳೆಯದು..
ಇದನ್ನೂ ಓದಿ; ಖಾಸಗಿ ಭಾಗಗಳಲ್ಲಿ ತುರಿಕೆ ಹೆಚ್ಚಾಗುತ್ತಿದೆಯಾ..?; ಹಾಗಾದರೆ ಇಲ್ಲಿದೆ ಸಮಸ್ಯೆಗೆ ಪರಿಹಾರ!
ಬೆಳಗಿನ ಉಪಾಹಾರದ ಪ್ರಯೋಜನಗಳು;
ನಮ್ಮ ಮೆದುಳು ಸರಿಯಾಗಿ ಕಾರ್ಯನಿರ್ವಹಿಸಲು ಆರೋಗ್ಯಕರ ಆಹಾರ ಸೇವನೆ ಬಹಳ ಮುಖ್ಯವಾಗುತ್ತದೆ. ಮೆದುಳನ್ನು ಕ್ರಿಯಾಶೀಲವಾಗಿರಿಸುವುದಕ್ಕೆ ಕೂಡಾ ಉತ್ತಮ ಆಹಾರ ಸೇವನೆ ಮಾಡಬೇಕಾಗುತ್ತದೆ.. ಉತ್ತಮ ಹಾಗೂ ಆರೋಗ್ಯಕರ ಆಹಾರವು ಮೂಳೆಗಳು, ಕೀಲುಗಳು ಮತ್ತು ಸ್ನಾಯುಗಳಿಗೆ ಶಕ್ತಿಯನ್ನು ನೀಡುತ್ತದೆ. ಆದ್ದರಿಂದ, ಬೆಳಗಿನ ಉಪಾಹಾರವು ಸಂಪೂರ್ಣ ಸ್ನಾಯುವಿನ ಚಲನೆಗೆ ಶಕ್ತಿಯನ್ನು ನೀಡುತ್ತದೆ. ದಿನವಿಡೀ ಹುಮ್ಮಸ್ಸಿನಿಂದ ಕೆಲಸ ಮಾಡಲು ಸಹಾಯ ಮಾಡುತ್ತದೆ..
ಇದನ್ನೂ ಓದಿ; 5 ನಿಮಿಷದ ಹಾಡಿಗೆ ಕೋಟಿ ಕೋಟಿ ಚಾರ್ಜ್; ದುಬಾರಿಯಾಗ್ತಿದೆ ಐಟಂ ಸಾಂಗ್
ಬೆಳಗಿನ ಉಪಾಹಾರ ತ್ಯಜಿಸಿದರೆ ಏನಾಗುತ್ತದೆ..?
ತೂಕ ಇಳಿಸಿಕೊಳ್ಳಲು ಬಯಸುವವರು ಬೆಳಗಿನ ಉಪಾಹಾರವನ್ನು ತ್ಯಜಿಸುತ್ತಾರೆ. ಆದ್ರೆ ಅದು ತಪ್ಪು.. ಅದರಲ್ಲಿ ಯಾವ ಕಾರಣಕ್ಕೂ ತೂಕ ಕಳೆದುಕೊಳ್ಳುವುದಿಲ್ಲ.. ಬದಲಾಗಿ ಮಧ್ಯಾಹ್ನ ಅತಿಹೆಚ್ಚು ಆಹಾರ ಸೇವನೆ ಮಾಡುತ್ತಾರೆ.. ಬೆಳಗಿನ ಉಪಾಹಾರವನ್ನು ಬಿಟ್ಟುಬಿಡುವುದು ಎಂದರೆ ಮಧ್ಯಾಹ್ನ ಮತ್ತು ರಾತ್ರಿಯ ಊಟದಲ್ಲಿ ಹೆಚ್ಚು ಕ್ಯಾಲೊರಿಗಳನ್ನು ಸೇವಿಸುವುದು. ಇದರಿಂದ ಬೊಜ್ಜು ಹೆಚ್ಚಾಗುತ್ತದೆ. ಅದರೊಂದಿಗೆ ದೈಹಿಕ ಸಮಸ್ಯೆಗಳೂ ಬರುತ್ತವೆ.
ಇದನ್ನೂ ಓದಿ; ನಿಮ್ಮ ಈ ವರ್ತನೆಯೂ ಡಿಪ್ರೆಷನ್ ಲಕ್ಷಣವೇ..; ಎಚ್ಚರ ಎಚ್ಚರ..!
ಬೆಳಗಿನ ಉಪಾಹಾರದಲ್ಲಿ ಏನೇನಿರಬೇಕು..?;
ಬೆಳಗಿನ ಉಪಾಹಾರದಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ತಾಜಾ ತರಕಾರಿಗಳು, ಹಣ್ಣುಗಳು, ಕಾಳುಗಳು ಮತ್ತು ಹಾಲು ಮುಂತಾದ ಆಹಾರಗಳನ್ನು ಸೇವಿಸಬೇಕು. ಇದರೊಂದಿಗೆ ನಾರಿನಂಶವಿರುವ ಆಹಾರವನ್ನು ಸೇವಿಸಬೇಕು.