CrimeNational

ಚಲಿಸುತ್ತಿರುವ ಕಾರಿನಲ್ಲೇ ಸಾಮೂಹಿಕ ಅತ್ಯಾಚಾರ; ವಿಡಿಯೋ ಮಾಡಿ ಪೋಷಕರಿಗೆ ಕಳುಹಿಸಿದರು!

ಗ್ವಾಲಿಯರ್; 9ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಪುಸಲಾಯಿಸಿ, ಕಾರಿನಲ್ಲಿ ಕೂರಿಸಿಕೊಂಡು ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ.. ಅದರ ವಿಡಿಯೋ ಚಿತ್ರೀಕರಣ ಮಾಡಿಕೊಂಡಿರುವ ದುಷ್ಕರ್ಮಿಗಳು ಪೋಷಕರಿಗೆ ಆ ವಿಡಿಯೋ ಕಳುಹಿಸಿದ್ದಾರೆ.. ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಈ ದುಷ್ಕೃತ್ಯ ನಡೆದಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ..

ಇದನ್ನೂ ಓದಿ; ಕಾಲೇಜು ಹುಡುಗಿಯನ್ನು ಅಪಹರಿಸಿ 12 ದಿನ ಸಾಮೂಹಿಕ ಅತ್ಯಾಚಾರ!

13 ವರ್ಷ 9ನೇ ತರಗತಿ ವಿದ್ಯಾರ್ಥಿಗೆ ಇನ್ಸ್ಟಾಗ್ರಾಮ್‌ನಲ್ಲಿ ಯುವಕನೊಬ್ಬ ಪರಿಚಯವಾಗಿದ್ದ.. ಆತನ ಸ್ನೇಹ ಬೆಳೆಸಿದ್ದ ಬಾಲಕಿ ಆತನೊಂದಿಗೆ ಸಲುಗೆ ಬೆಳೆಸಿದ್ದಾಳೆ.. ನೇರವಾಗಿ ಭೇಟಿಯಾಗೋಣ ಎಂದು ಆ ಯುವಕ ಬಾಲಕಿಯನ್ನು ಕರೆದಿದ್ದಾನೆ.. ತನ್ನಿಬ್ಬರು ಸ್ನೇಹಿತರೊಂದಿಗೆ ಆ ಯುವಕ ಕಾರಿನಲ್ಲಿ ಬಂದಿದ್ದಾನೆ.. ಬಾಲಕಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಸುತ್ತಾಡಿಸುತ್ತೇವೆ ಎಂದು ಕರೆದುಕೊಂಡು ಹೋಗಿದ್ದಾರೆ.. ಹೈವೇಗೆ ಕಾರಿನಲ್ಲಿ ಕರೆದುಕೊಂಡು ಹೋಗಿದ್ದು, ಕಾರು ಚಲಿಸುತ್ತಿರುವಾಗಲೇ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ..

ಇದನ್ನೂ ಓದಿ; ಮಂಕಿ ಕ್ಯಾಪ್‌ ಧರಿಸಿ ಬಂದ ಚಾಕುವಿನಿಂದ ದಾಳಿ!; ಉದ್ಯಮಿ ಮನೆಯಲ್ಲಿ ನಡೆದಿದ್ದೇನು..?

ಈ ವೇಳೆ ಅತ್ಯಾಚಾರ ನಡೆಸುವ ದೃಶ್ಯವನ್ನು ಮೊಬೈಲ್‌ ನಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ.. ಅನಂತರ ಆಕೆಗೆ ವಿಡಿಯೋ ಕಳುಹಿಸಲಾಗಿದ್ದು, ಮತ್ತೆ ಭೇಟಿಯಾಗುವಂತೆ ಕರೆದಿದ್ದಾರೆ.. ಯುವತಿ ಇದಕ್ಕೆ ಒಪ್ಪದಿದ್ದಾಗ, ಯುವಕರು ವಿಡಿಯೋವನ್ನು ಬಾಲಕಿಯ ಪೋಷಕರಿಗೆ ಕಳುಹಿಸಿದ್ದಾರೆ.. ಮನೆಯವರಿಗೆ ಗೊತ್ತಾದ ಕೂಡಲೇ ಪೊಲೀಸರಿಗೆ ದೂರು ನೀಡಲಾಗಿದೆ.. ಪೊಲೀಸರು ಆರೋಪಿಗಳಿಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ..

Share Post