National

ಭಾರತ ಸ್ವಾತಂತ್ರ್ಯೋತ್ಸವಕ್ಕೆ ಗೂಗಲ್‌ ಡೂಡಲ್‌ ಗೌರವ

ನವದೆಹಲಿ; ಭಾರತ 77 ನೇ ಸ್ವಾತಂತ್ರ್ಯೋತ್ಸವ ಆಚರಣೆ ಮಾಡುತ್ತಿದ್ದು, ಇದಕ್ಕೆ ಗೂಗಲ್‌ ಮತ್ತಷ್ಟು ಕಳೆತಂದುಕೊಟ್ಟಿದೆ. ಸ್ವಾತಂತ್ರ್ಯ ದಿನದ ಸ್ಪೆಷಲ್‌ ಆಗಿ ಗೂಗಲ್‌ ಡೂಡಲ್‌ ರಚನೆ ಮಾಡಲಾಗಿದೆ. ಈ ಮೂಲಕ ಗೂಗಲ್‌ ಸಂಸ್ಥೆ ಭಾರತಕ್ಕೆ ಗೌರವ ಕೊಟ್ಟಿದೆ.

ಗೂಗಲ್‌ ಅನೇಕ ವಿಶೇಷ ಸಂದರ್ಭಗಳಿಗೆ ಗೂಗಲ್‌ ಡೂಡಲ್‌ ರಚನೆ ಮಾಡಿ ಗೌರವ ಕಲ್ಪಿಸುತ್ತದೆ. ಅದೇ ರೀತಿ ಸ್ವಾತಂತ್ರ್ಯ ದಿನಾಚರಣೆಗೆ ಗೂಗಲ್‌ ಡೂಡರ್‌ ರಚನೆ ಮಾಡಲಾಗಿದೆ. ಈ ಗೂಗಲ್ ಡೂಡಲ್ ಭಾರತದ ವಿಭಿನ್ನ ಉಡುಗೆ ಸಂಪ್ರದಾಯಗಳನ್ನು ತೋರಿಸುತ್ತದೆ.

ಈ ಡೂಡಲ್‌ನ್ನು ದೆಹಲಿಯ ಕಲಾವಿದೆ ನಮ್ರತಾ ಕುಮಾರ್‌ ಅವರು ಸಿದ್ಧಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಜವಳಿ ಹಾಗೂ ಕರಕುಶಲ ಕಲೆಯನ್ನು ಈ ಗೂಗಲ್‌ ಡೂಡಲ್‌ ಬಿಂಬಿಸಿದೆ.

 

Share Post