HealthNational

ಮೋದಿ ಸಹೋದರರಿಂದ ಹೀರಾ ಬೆನ್‌ ಚಿತೆಗೆ ಅಗ್ನಿಸ್ಪರ್ಶ; ಪಂಚಭೂತಗಳಲ್ಲಿ ಲೀನ

ಗಾಂಧೀನಗರ; ಇಂದು ಮುಂಜಾನೆ ನಿಧನರಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್‌ ಅವರ ಅಂತ್ಯಕ್ರಿಯೆಯನ್ನು ಬೆಳಗ್ಗೆ 9:30ರ ವೇಳೆಗೆ ಸೆಕ್ಟರ್ 30ರ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು. ಮೋದಿ ಹಾಗೂ ಅವರ ಸಹೋದರರು ಹೀರಾ ಬೆನ್‌ ಅವರ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.

ಹೀರಾ ಬೆನ್‌ ಅವರ ಅಂತಿಮ ಸಂಸ್ಕಾರದಲ್ಲಿ ಮೋದಿ ಕುಟುಂಬದ ಸದಸ್ಯರೆಲ್ಲರೂ ಭಾಗಿಯಾಗಿದ್ದರು. ಪಂಕಜ್ ಮೋದಿ ಅವರ ನಿವಾಸದಿಂದ ಪಾರ್ಥಿವ ಶರೀರ ಅಂತಿಮ ಯಾತ್ರೆ ಹೊರಡಲಾಗಿತ್ತು. ಇಂದು ಬೆಳಗ್ಗೆ 9:30ರ ವೇಳೆಗೆ ಸೆಕ್ಟರ್ 30ರ ರುದ್ರಭೂಮಿಯಲ್ಲಿ ಹೀರಾಬೆನ್ ಅಂತ್ಯಕ್ರಿಯೆ ನಡೆದಿದೆ. ಹೀರಾಬೆನ್ ಚಿತೆಗೆ ಮೋದಿ ಸಹೋದರರು ಅಗ್ನಿಸ್ಪರ್ಶ ಮಾಡಿದ್ದಾರೆ.

 

Share Post