HealthLifestyle

ಬೆಲ್ಲ ಚರ್ಮದ ಕಾಂತಿ ಹೆಚ್ಚಿಸುತ್ತೆ..!; ಯೌವನವಾಗಿರಲು ಬೆಲ್ಲವೇ ಮದ್ದು!

ಬೆಂಗಳೂರು; ಆಹಾರದಲ್ಲಿ ಸಕ್ಕರೆಗೆ ಬದಲಾಗಿ ಬೆಲ್ಲ ಬಳಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ.. ಆದ್ರೆ ಇದೇ ಬೆಲ್ಲ ಚರ್ಮದ ಕಾಂತಿ ಹೆಚ್ಚಿಸುತ್ತದೆ, ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ ಅಂದರೆ ನಂಬುತ್ತೀರಾ..? ನಂಬಲೇಬೇಕು.. ಬೆಲ್ಲದಿಂದ ಚರ್ಮದ ಆರೋಗ್ಯ ಕಾಪಾಡಬಹುದು ಅಂತ ತಜ್ಞರು ಹೇಳುತ್ತಿದ್ದಾರೆ.. ಬೆಲ್ಲ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡಿ ಚರ್ಮದ ಕಾಂತಿ ಜಾಸ್ತಿ ಮಾಡುತ್ತದಂತೆ..!. ಅಚ್ಚರಿ ಆದರೂ ಇದು ನಿಜ..

ಇದನ್ನೂ ಓದಿ; ಮಾರುತಿ ಓಮ್ನಿ ಮೇಲೆ ಕುಸಿದ ಮಣ್ಣಿನ ಗುಡ್ಡ!; ಬದುಕಿ ಬಂದದ್ದೇ ಪವಾಡ..!

ಸಕ್ಕರೆ ತಯಾರಿಯಲ್ಲಿ ಕೆಮಿಕಲ್‌ ಬಳಸುತ್ತಾರೆ.. ಆದ್ರೆ ನೈಸರ್ಗಿಕ ಬೆಲ್ಲವನ್ನು ತಯಾರಿ ಮಾಡುವುದರಿಂದ ಅದು ಆರೋಗ್ಯಕ್ಕೆ ಹಲವು ರೀತಿಯಿಂದ ಉಪಯೋಗವಾಗುತ್ತದೆ.. ಬೆಲ್ಲದಲ್ಲಿ ಹೇರಳವಾದ ಖನಿಜಗಳಿವೆ.. ಕಬ್ಬಿಣ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿವೆ. ಹೀಗಾಗಿ ಬೆಲ್ಲ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ತ್ವಚೆಗೂ ತುಂಬಾ ಒಳ್ಳೆಯದಂತೆ.. ಅದು ಹೇಗೆ ಅಂತ ಇಲ್ಲಿ ತಿಳಿಯೋಣ..

ಇದನ್ನೂ ಓದಿ; ಈ ಐದು ರಾಶಿಯವರಿಗೆ ಮಹಾಶಕ್ತಿ ಯೋಗ..!; ಇದು ಬಯಸಿದಷ್ಟು ಗಳಿಸೋ ಸಮಯ!

ಬೆಲ್ಲದಲ್ಲಿ ಗ್ಲೈಕೋಲಿಕ್ ಆಮ್ಲ ಹೆಚ್ಚಾಗಿದೆ.. ಇದು ಚರ್ಮಕ್ಕೆ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತೆ.. ಬೆಲ್ಲದಿಂದ ತ್ವಚೆಯನ್ನು ತೇವಾಂಶದಿಂದ ಕೂಡಿರುವಂತೆ ಕಾಪಾಡಿಕೊಳ್ಳಬಹುದು. ಬೆಲ್ಲ ಚರ್ಮದ ಮೇಲಿನ ಸತ್ತ ಜೀವಕೋಶಗಳನ್ನು ತೆಗೆದುಹಾಕುತ್ತದೆ. ಮುಖದ ಚರ್ಮವನ್ನು ಆದಷ್ಟು ಮೃದುಗೊಳಿಸುತ್ತದೆ. ಮುಖದ ಮೇಲಿನ ಕಪ್ಪು ಕಲೆಗಳು ಮತ್ತು ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮುಖದಲ್ಲಿ ಸುಕ್ಕುಗಳು, ಗೀರುಗಳು ಮತ್ತು ತುರಿಕೆಗಳಂತಹ ಸಮಸ್ಯೆಗಳೂ ಕೂಡಾ ಬೆಲ್ಲ ಮಾಯ ಮಾಡುತ್ತದೆ..

ಇದನ್ನೂ ಓದಿ; ಕೆಂಪು ಬದಲು ಮರೂನ್‌ ಲಿಪ್‌ಸ್ಟಿಕ್‌ ತಂದ ಗಂಡ; ಡಿವೋರ್ಸ್‌ ಕೇಳಿದ ಪತ್ನಿ!

ಒಂದು ಚಮಚ ಬೆಲ್ಲವನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಜೇನುತುಪ್ಪ ಮತ್ತು ನಿಂಬೆರಸ ಬೆರೆಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಬೇಕು.. ಐದು ನಿಮಿಷ ಮಸಾಜ್ ಮಾಡಿ ನಂತರ ಮುಖವನ್ನು ತೊಳೆದುಕೊಳ್ಳಬೇಕು.. ಇದು ಆಗಾಗ ಮಾಡಿದರೆ ಮುಖದ ಚರ್ಮ ಮೃದುವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.. ಬೆಲ್ಲದಲ್ಲಿರುವ ಆ್ಯಂಟಿ ಆಕ್ಸಿಡೆಂಟ್ಸ್‌, ಮಿನರಲ್ಸ್, ಸತು ಮತ್ತು ಸೆಲೆನಿಯಮ್ ಮುಖದ ಮೇಲೆ ಸುಕ್ಕುಗಳು ಬರದಂತೆ ತಡೆಯುತ್ತದೆ.. ಬೆಲ್ಲದಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಮೊಡವೆಗಳು ಬರದಂತೆ ತಡೆಯುತ್ತದೆ. ದಿನಾಲೂ ಸ್ವಲ್ಪ ಆರ್ಗಾನಿಕ್‌ ಬೆಲ್ಲ ತಿಂದರೆ, ದೇಹದಲ್ಲಿ ರಕ್ತ ಸಂಚಾರ ಚೆನ್ನಾಗಿ ಆಗುತ್ತದೆ.. ಇದು ಜೀವಕೋಶದ ವಹಿವಾಟನ್ನು ಹೆಚ್ಚಿಸಲಿದ್ದು, ಇದರಿಂದ ಚರ್ಮವು ಕಾಂತಿಯುತವಾಗುತ್ತದೆ. ಬಿಸಿಲಿಗೆ ಮೈ ಒಡ್ಡಿಕೊಂಡರೂ ಚರ್ಮವು ಹಾಳಾಗುವುದಿಲ್ಲ. ಇದಲ್ಲದೆ, ಅದರಲ್ಲಿರುವ ಖನಿಜಗಳು ಮತ್ತು ವಿಟಮಿನ್‌ಗಳು ಅದನ್ನು ತ್ವರಿತವಾಗಿ ಗುಣಪಡಿಸುತ್ತವೆ.

ಇದನ್ನೂ ಓದಿ; ಶಾಸಕ ನಾಗೇಂದ್ರ ಪತ್ನಿ ಮಂಜುಳಾ ಇಡಿ ವಶಕ್ಕೆ!

Share Post