CrimeLifestyle

ಕೆಂಪು ಬದಲು ಮರೂನ್‌ ಲಿಪ್‌ಸ್ಟಿಕ್‌ ತಂದ ಗಂಡ; ಡಿವೋರ್ಸ್‌ ಕೇಳಿದ ಪತ್ನಿ!

ಲಖನೌ; ಇತ್ತೀಚೆಗೆ ಸಣ್ಣ ಸಣ್ಣ ವಿಚಾರಗಳಿಗೆ ದಂಪತಿಗಳಿಗೂ ಬೇರೆಯಾಗುತ್ತಿದ್ದಾರೆ.. ಕಾರಣವೇ ಇಲ್ಲದೆ ಕೂಡಾ ವಿಚ್ಛೇದನ ಪಡೆಯುತ್ತಿದ್ದಾರೆ.. ಅಡುಗೆ ಸರಿಯಾಗಿ ಮಾಡಲ್ಲ, ಸರಿಯಾಗಿ ಮಾತನಾಡಲ್ಲ ಹೀಗೆ ಹಲವು ಕಾರಣಗಳನ್ನು ನೀಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವವರಿದ್ದಾರೆ.. ಇಲ್ಲೊಬ್ಬಳು ಮಹಿಳೆ, ನಾನು ಹೇಳಿದ ಕಲರ್‌ ಲಿಪ್‌ಸ್ಟಿಕ್‌ ತಂದಿಲ್ಲ ಅಂತ ಗಂಡನಿಂದ ವಿಚ್ಛೇದನ ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾಳೆ..

ಇದನ್ನೂ ಓದಿ; ಶಾಸಕ ನಾಗೇಂದ್ರ ಪತ್ನಿ ಮಂಜುಳಾ ಇಡಿ ವಶಕ್ಕೆ!

ಆಗ್ರಾದಲ್ಲಿ ಮಹಿಳೆಯೊಬ್ಬರು ಮದುವೆಯಾದ ಆರೇ ತಿಂಗಳಿಗೆ ಗಂಡನಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾಳೆ.. ಮಥುರಾದ ಯುವಕನನ್ನು ಮದುವೆಯಾಗಿದ್ದ ಮಹಿಳೆ ತನ್ನ ಗಂಡನಿಗೆ ಕೆಂಪು ಕಲರ್‌ ಲಿಪ್‌ಸ್ಟಿಕ್‌ ತರುವಂತೆ ಹೇಳಿದ್ದಳು.. ಆದ್ರೆ ಆತನಿಗೆ ಗೊತ್ತಾಗದೆ ಮರೂನ್‌ ಕಲರ್‌ ಲಿಪ್‌ಸ್ಟಿಕ್‌ ತಂದಿದ್ದಾನೆ.. ಇದರಿಂದ ಆಕ್ರೋಶಗೊಂಡ ಆಕೆ, ಗಂಡನಿಂದ ಬೇರೆಯಾಗಿ ನಿರ್ಧಾರ ಮಾಡಿದ್ದಾಳೆ..

ಇದನ್ನೂ ಓದಿ; ಶಾಲಾ ವಾಹನಗಳ ಕಲರ್‌ YELLOWನೇ ಯಾಕಿರುತ್ತೆ ಗೊತ್ತಾ..?

ಗಂಡ ದಿನಗೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಾನೆ.. ಆದರೂ ಕೂಡಾ ಹೆಂಡತಿ ಕೇಳಿದ್ದನ್ನು ತಂದುಕೊಡುತ್ತಾನೆ.. ಇತ್ತೀಚೆಗೆ ಆಕೆ ಲಿಪ್‌ಸ್ಟಿಕ್‌ ಬೇಕು ಅಂತ ಕೇಳಿದ್ದಳು.. ಕೆಂಪು ಕಲರ್‌ ಲಿಪ್‌ಸ್ಟಿಕ್‌ ಬೇಕೆಂದು ಆಕೆ ಕೇಳಿದ್ದಳು.. ಆದ್ರೆ ಗಂಡನಿಗೆ ಗೊತ್ತಾಗದೇ ಮರೂನ್‌ ಕಲರ್‌ ಲಿಪ್‌ಸ್ಟಿಕ್‌ ತಂದಿದ್ದಾನೆ.. ಆತನಿಗೆ ಎರಡೂ ಕಲರ್‌ಗೆ ವ್ಯತ್ಯಾಸ ಗೊತ್ತಾಗಿಲ್ಲ.. ಇದೇ ವಿಚಾರ ಮುಂದಿಟ್ಟುಕೊಂಡು ಆಕೆ ವಿಚ್ಛೇದನ ಕೇಳಿದ್ದಾಳೆ.

Share Post