LifestyleNational

ಮದುವೆ ಮುಗಿದ ತಕ್ಷಣ ಇಲ್ಲಿ ವರನನ್ನು ಬಾವಿಗೆ ತಳ್ಳುತ್ತಾರೆ..!; ಇದೆಂಥಾ ಪದ್ಧತಿ..?

ಭಾರತದಲ್ಲಿ ಒಂದೊಂದು ಪ್ರದೇಶದಲ್ಲಿ ಒಂದೊಂದು ಸಂಪ್ರದಾಯ ಪದ್ಧತಿ ಇರುತ್ತದೆ.. ಅದ್ರಲ್ಲೂ ಕೂಡಾ ಮದುವೆಗಳ ಆಚರಣೆಗಳಲ್ಲಿ ತುಂಬಾನೇ ವೈವಿದ್ಯತೆ ಇರುತ್ತದೆ.. ಮದುವೆಯಲ್ಲಿ ವರನ ಚಪ್ಪಲಿ ಕಳ್ಳತನ ಮಾಡುವ ಪದ್ಧತಿ ದಕ್ಷಿಣ ಭರತದ ಹಲವು ಪ್ರದೇಶಗಳಲ್ಲಿದೆ.. ಬಿಂದಿಗೆಯಲ್ಲಿ ಉಂಗುರು ಹುಡುಕಾಟವೂ ಒಂದು ಪದ್ಧತಿ.. ಆದ್ರೆ ಪುಟ್ಟ ರಾಜ್ಯ ಗೋವಾದಲ್ಲಿ ವಿಚಿತ್ರ ಪದ್ಧತಿಯೊಂದಿದೆ.. ಇಲ್ಲಿ ಮದುವೆ ಮುಗಿದ ನಂತರ ವರನನ್ನು ಆಳವಾದ ಬಾವಿಗೆ ಎಸೆಯುತ್ತಾರೆ..

ಉತ್ತರ ಗೋವಾದ ಹಲವು ಕಡೆ ಈ ಪದ್ಧತಿ ಜಾರಿಯಲ್ಲಿದೆ.. ಇಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ನಡೆಯುತ್ತದೆ.. ಕೊನೆಯದಾಗಿ ವರನಿಗೆ ಶಿಕ್ಷೆ ನೀಡಲಾಗುತ್ತದೆ.. ಆ ಕೊನೆಯ ಶಾಸ್ತ್ರವೇ ವರನನ್ನು ಬಾವಿಗೆ ತಳ್ಳೋ ಪದ್ಧತಿ.. ಇದನ್ನು ಸಾಓ, ಜೋಓ ಎಂದು ಕರೆಯುತ್ತಾರೆ.. ವರನನ್ನು ಆಳವಾದ ಬಾವಿಯ ಬಳಿಗೆ ಕರೆದುಕೊಂಡು ಹೋಗುವ ಜನ, ಆತನನ್ನು ವಧುವಿನ ಮುಂದೆಯೇ ಬಾವಿಗೆ ತಳ್ಳಲಾಗುತ್ತದೆ.. ಆತ ಸುರಕ್ಷಿತವಾಗಿ ಈಜಿಕೊಂಡು ದಡ ಸೇರಿದರೆ ಸಂಸಾರ ಸುಖಮಯವಾಗಿರುತ್ತದೆ ಎಂಬ ನಂಬಿಕೆ ಇವರಲ್ಲಿದೆ..

ಒಂದು ರೀತಿ ಇದು ವರನ ಸಾಮರ್ಥ್ಯ ಪರೀಕ್ಷೆ ಎಂದೇ ಹೇಳಬಹುದು.. ವರ ಬಾವಿಯಿಂದ ಈಜಿ ದಡ ಸೇರಿ ಮೇಲೆ ಬಂದರೆ ಆತನ ಆರೋಗ್ಯ ಚೆನ್ನಾಗಿದೆ ಎಂದರ್ಥ.. ಒಳ್ಳೆಯ ಆರೋಗ್ಯವಂತ ಸಂಸಾರ ಸುಖ ನೀಡುವುದರ ಜೊತೆಗೆ ಪತ್ನಿಯ ರಕ್ಷಣೆ ಕೂಡಾ ಮಾಡುತ್ತಾನೆ ಎಂಬ ನಂಬಿಕೆ ಇವರಲ್ಲಿದೆ.. ಹೀಗಾಗಿ ಪ್ರತಿ ಮದುವೆಯಲ್ಲೂ ವರನನ್ನು ಬಾವಿಗೆ ತಳ್ಳುವ ಪದ್ಧತಿ ಕಡ್ಡಾಯವಾಗಿದೆ..

 

Share Post