International

ಬೈಡೆನ್‌ಗೆ ಮೋದಿ ಸ್ಪೆಷಲ್‌ ಗಿಫ್ಟ್‌; ಮೈಸೂರಿಗೂ ಇದಕ್ಕೂ ನಂಟೇನು..?

ವಾಷಿಂಗ್ಟನ್; ಯೋಗಾ ದಿನಾಚರಣೆ ಹಿನ್ನೆಯಲ್ಲಿ ಅಮೆರಿಕಕ್ಕೆ ಹೋಗಿರುವ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರಿಗೆ ವಿಶೇಷ ಉಡುಗೊಡೆ ನೀಡಿದ್ದಾರೆ. ಭಾರತೀಯ ಸಂಸ್ಕೃತಿ ಬಿಂಬಿಸುವ ಉಡುಗೊರೆ ಅದಾಗಿದ್ದು, ಮೈಸೂರಿಗೂ ಅದಕ್ಕೂ ನಂಟಿರುವುದು ವಿಶೇಷ.

ಯಾರೇ ಭಾರತಕ್ಕೆ ಬಂದರೂ ಅವರಿಗೆ ಮೋದಿ ದೇಶದ ಸಂಸ್ಕೃತಿ ಬಿಂಬಿಸುವ ಉಡುಗೊರೆಗಳನ್ನು ನೀಡುತ್ತಾರೆ. ಅದೇ ರೀತಿ ಮೋದಿ ವಿದೇಶಕ್ಕೆ ಹೋದಾಗಲೂ ಬೈಡೆನ್‌ ದಂಪತಿಗೆ ವಿಶೇಷ ಉಡುಗೊರೆ ನೀಡಿದ್ದಾರೆ. ಶ್ವೇತಭವನಕ್ಕೆ ಭೇಟಿ ನೀಡಿದ್ದ ಮೋದಿ, ಜೋ ಬೈಡನ್ ದಂಪತಿಗೆ ಮೈಸೂರಿನ ಪ್ರಖ್ಯಾತ ಶ್ರೀಗಂಧದಿಂದ ತಯಾರಿಸಿದ ಪೆಟ್ಟಿಗೆಯಲ್ಲಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಹಲವು ಉಡುಗೊರೆಗಳನ್ನಿರಿಸಿ ನೀಡಿದ್ದಾರೆ. ಈ ಪೆಟ್ಟಿಗೆಯನ್ನು ರಾಜಸ್ಥಾನದ ಜೈಪುರದ ಖ್ಯಾತ ಕುಶಲಕರ್ಮಿಯೊಬ್ಬರು ತಯಾರಿಸಿದ್ದಾರೆ ಎಂದು ತಿಳಿದುಬಂದಿದೆ.

ಬೆಳ್ಳಿಯ ಗಣೇಶ ಮೂರ್ತಿ ಸೇರಿದಂತೆ ಹಲವು ವಸ್ತುಗಳು ಈ ಪೆಟ್ಟಿಗೆಯಲ್ಲಿವೆ.

Share Post