ಅಮ್ಮನ ಮೊಬೈಲ್‌ನಲ್ಲಿ ಒಂದೂವರೆ ಲಕ್ಷ ರೂಪಾಯಿ ಶಾಪಿಂಗ್ ಮಾಡಿದ 2ವರ್ಷದ ಬಾಲಕ
ಅಮೆರಿಕಾ: ಚಿಕ್ಕ ಮಕ್ಕಳು ಸ್ಮಾರ್ಟ್ ಫೋನ್ ಕೊಡಬಾರದು ಅನ್ನೋದು ಇದಕ್ಕೆ. ಮಕ್ಕಳಿಗೆ ಅಪ್ಲಿಕೇಷನ್‌ಗಳ ಬಗ್ಗೆ ಯಾವುದೇ ವಿಚಾರ ತಿಳಿದಿರುವುದಿಲ್ಲ. ಸುಮ್ಮನೆ ಏನೋ ನೋಡುವ ಭರದಲ್ಲಿ ಅದು ಇನ್ನೇನೋ ನಡೆದುಹೋಗಿರುತ್ತದೆ. ಅದರಲ್ಲೂ ಮಾತನಾಡೋಕೆ ಬಾರದ ಮಕ್ಕಳಿಗೆ ಫೋನ್ ಕೊಟ್ಟರೆ ಆಗುವ ದುಷ್ಪರಿಣಾಮಗಳನ್ನು ತೋರಿಸುವ ಘಟನೆ ಇದು. ಆಟವಾಡಲು ಫೋನ್ ತೆಗೆದುಕೊಂಡ ಬಾಲಕ ಆನ್‌ಲೈನ್ ಶಾಪಿಂಗ್ ಮೂಲಕ 1.50 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಖರೀದಿಸಿದ ಘಟನೆ ಅಮೆರಿಕದಲ್ಲಿ ನಡೆದಿದೆ.
ಅಮೆರಿಕದ ನ್ಯೂಜೆರ್ಸಿಯಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಾದ ಪ್ರಮೋದ್ ಕುಮಾರ್ ಮತ್ತು ಮಧುಮತಿ ಕುಮಾರ್ ದಂಪತಿಗೆ ಎರಡು ವರ್ಷದ ಮಗನಿಂದ ವಿಚಿತ್ರ ಪರಿಸ್ಥಿತಿ ಎದುರಾಗಿದೆ. ನ್ಯೂಜೆರ್ಸಿಯಲ್ಲಿ ನೆಲೆಸಿರುವ ಪ್ರಮೋದ್ ಕುಮಾರ್ ಕುಟುಂಬ ಇತ್ತೀಚೆಗಷ್ಟೇ ಮನೆ ಬದಲಾವಣೆ ಮಾಡಿದ್ದರಿಂದ ಮಧುಮತಿ ಕುಮಾರ್ ಅವರು ಆನ್‌ಲೈನ್ ಅಪ್ಲಿಕೇಶನ್ ಮೂಲಕ ಹೊಸ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಬೇಕಾದ ವಸ್ತುಗಳನ್ನು ಸೆಲೆಕ್ಟ್ ಮಾಡಿ ಕಾರ್ಟ್‌ಗೆ ಸೇರಿಸಿದ್ದಾರೆ. ಮನೆಯಲ್ಲಿ ಎಲ್ಲಾ ಕೆಲಸ ಮುಗಿದ ಮೇಲೆ ಖರೀದಿ ಮಾಡಿದರೆ ಆಯಿತು ಎಂದುಕೊಂಡು ಮನೆಗೆಲಸದಲ್ಲಿ ತೊಡಗಿದ್ದಾಲೆ. ಆದ್ರೆ ತಾನು ಆರ್ಡರ್ ಮಾಡದೆಯೇ ಆನ್‌ಲೈನ್ ಕಾರ್ಟ್‌ನಲ್ಲಿ ಸೇರಿಸಿರುವ ಪ್ರತಿಯೊಂದು ವಸ್ತುಗಳು ಮನೆಗೆ ತಲುಪಿದ ಮಧುಕುಮಾರ್‌ಗೆ ಅಚ್ಚರಿ ಉಂಟುಮಾಡಿತ್ತು.
ವಸ್ತುಗಳು ಮನೆಗೆ ಬಂದಾಗ ಪ್ರಮೋದ್ ಅವರು ವಸ್ತುಗಳನ್ನು ನೀನು ಖರೀದಿ ಮಾಡಿದ್ದೀಯಾ ಎಂದು ಪತಿಯನ್ನು ಕೇಳಿದ್ದಾರೆ. ಇಲ್ಲ ಎಂದಾಗ ತನ್ನಿಬ್ಬರು ಮಕ್ಕಳನ್ನು ಪ್ರಶ್ನಿಸಿದ್ದಾರೆ ಅವರಿಂದಲೂ ಇದೇ ಉತ್ತರ ಬಂದ ಕೂಡಲೇ ಇದೆಲ್ಲಾ ಈ ಪುಟ್ಟ ಬಾಲಕನದ್ದೇ ಕೆಲಸ ಎಂದು ತಿಳಿದುಬಂದಿದೆ. ಮನೆಗೆ ತಲುಪಿದ ವಸ್ತುಗಳನ್ನು ಹಿಂತಿರುಗಿಸುವಂತೆ ಕಂಪನಿಗೆ ಫೋನ್ ಮಾಡಿದಾಗ, ಎಲ್ಲ ವಸ್ತುಗಳನ್ನು ತೆಗೆದುಕೊಂಡು ಹೋಗಿ ಪೂರ್ಣ ಹಣ ವಾಪಸ್ ಕೊಡುವ ಭರವಸೆಯನ್ನು ಕಂಪನಿ ನೀಡಲಿಲ್ಲ. ಆದರೆ, ತಮ್ಮ ಪ್ರೀತಿಯ ಮಗ ಮಾಡಿದ ಚೇಷ್ಟೆಯ ಗುರುತಾಗಿ ಕೆಲವು ವಸ್ತುಗಳನ್ನು ಇಟ್ಟುಕೊಂಡು ಉಳಿದದ್ದನ್ನು ಹಿಂದಿರುಗಿಸುವುದಾಗಿ ಪ್ರಮೋದ್ ಕುಮಾರ್ ದಂಪತಿ ಹೇಳಿದ್ದಾರೆ.
ಇನ್ನು ಮುಂದೆ ಫೋನ್‌ಗೆ ಲಾಕ್ ಇಡುವುದಾಗಿ ತಿಳಿಸಿ ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ವೈರಲ್ ಆಗುತ್ತಿರುವ ಸುದ್ದಿಗೆ ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದು, ಪೋಷಕರು ತಮ್ಮ ಮಕ್ಕಳು ಏನು ಮಾಡುತ್ತಿದ್ದಾರೆ ಎಂಬುದರ ಮೇಲೆ ನಿಗಾ ಇಡಬೇಕು ಎಂದು ಕಮೆಂಟ್ ಮಾಡಿದ್ದಾರೆ.