CrimeInternational

ಇಬ್ಬರನ್ನು ಕೊಲೆ ಮಾಡಿ ಸೂಟ್‌ಕೇಸ್‌ನಲ್ಲಿ ತಂದು ಬಿಸಾಡಿದ್ದ!

ಲಂಡನ್; ವ್ಯಕ್ತಿಯೊಬ್ಬ ಇಬ್ಬರು ವ್ಯಕ್ತಿಗಳನ್ನು ಕೊಲೆ ಮಾಡಿ, ಎರಡೂ ದೇಹಗಳನ್ನು ಸೂಟ್‌ಕೇಸ್‌ ಒಂದರಲ್ಲಿ ತುರುಕಿದ್ದಾನೆ.. ಅನಂತರ ಅದನ್ನು ತಂದು ಸೇತುವೆ ಬಳಿ ಬಿಸಾಕಿ ಹೋಗಿದ್ದಾನೆ.. ಬ್ರಿಟನ್‌ನ ಪ್ರಸಿದ್ಧ ಸೇತುವೆಯೊಂದರ ಬಳಿ ಸೂಟ್‌ಕೇಸ್‌ ಪತ್ತೆಯಾಗಿದ್ದು, ಪೊಲೀಸರು ಅನುಮಾನದಿಂದ ತೆಗೆದು ನೋಡಿದಾಗ ಅದ್ರಲ್ಲಿ ಕೊಳೆತು ನಾರುತ್ತಿದ್ದ ಎರಡು ಮೃತದೇಹಗಳು ಸಿಕ್ಕಿವೆ..

ಇದನ್ನೂ ಓದಿ; ಡ್ರಗ್ಸ್‌ ಕೇಸ್‌ನಲ್ಲಿ ನಟಿ ರಕುಲ್‌ ಪ್ರೀತ್‌ಸಿಂಗ್‌ ಸಹೋದರ ಅರೆಸ್ಟ್‌!

ಫ್ರಾನ್ಸ್‌ನಿಂದ ಬಂದಿದ್ದ ವ್ಯಕ್ತಿ ಬ್ರಿಟನ್‌ನ ಬ್ರಿಡ್ಜ್‌ ಬಳಿ ಸೂಟ್‌ಕೇಸ್‌ ಬಿಸಾಕಿದ್ದ.. ಅದ್ರಲ್ಲಿ ಇಬ್ಬರು ವ್ಯಕ್ತಿಗಳ ಕೊಳೆತ ದೇಹಗಳು ಸಿಕ್ಕಿವೆ.. ಕೊಲೆಯಾದವರಿಬ್ಬರೂ ಸಲಿಂಗಕಾಮಿಗಳು ಎಂದು ಹೇಳಲಾಗುತ್ತಿದೆ.. ಇಬ್ಬರೂ ಕೂಡಾ ಲಂಡನ್‌ ನಲ್ಲಿ ಇಬ್ಬರೂ ವಾಸಿಸುತ್ತಿದ್ದರು. ಇವರ ಜೊತೆಗೆ ಕೊಲೆ ಮಾಡಿದ ವ್ಯಕ್ತಿಯೂ ವಾಸಿಸುತ್ತಿದ್ದ ಎಂದು ತಿಳಿದುಬಂದಿದೆ.. ಆಲ್ಬರ್ಟ್ ಅಲ್ಫೋನ್ಸೊ (62) ಮತ್ತು ಪಾಲ್ ಲಾಂಗ್‌ವರ್ತ್ (71) ಎಂಬುವವರೇ ಕೊಲೆಯಾದವರಾಗಿದ್ದು, ಕೊಲೆಗಾರನಿಗೂ ಇವರಿಗೂ ಸಂಬಂಧ ಇತ್ತು ಎನ್ನಲಾಗಿದೆ.. ಸಲಿಂಗ ಕಾಮದ ವಿಷಯವಾಗಿ ಈ ಕೊಲೆ ನಡೆದಿರಬಹುದು ಎಂದು ಹೇಳಲಾಗುತ್ತಿದೆ..

ಇದನ್ನೂ ಓದಿ; ಶೀಘ್ರದಲ್ಲೇ 10 ಸಾವಿರ ಶಾಲಾ ಶಿಕ್ಷಕರ ನೇಮಕ; ಸಚಿವ ಮಧು ಬಂಗಾರಪ್ಪ

ಕೊಲಂಬಿಯಾದ ಪ್ರಜೆ ಯೋಸ್ಟಿನ್ ಆಂಡ್ರೆಸ್ ಮೊಸ್ಕ್ವೆರಾ ಎಂಬುವವನೇ ಆರೋಪಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

Share Post